hukkeri

ಹುಕ್ಕೇರಿ : ಲಕ್ಷ್ಮಿ ದೇವಿ ಮಂದಿರಕ್ಕೆ ಬೀಗ ಹಾಕಿದರೆ ಹುಷಾರ – ಬಲರಾಮ ಕಟ್ಟಿಮನಿ.

Share

ಹುಕ್ಕೇರಿ ನಗರದ ದ್ಯಾಮವ್ವಾ ಲಕ್ಷ್ಮಿ ದೇವಿ ಮಂದಿರಕ್ಕೆ ಯಾರಾದರೂ ಬೀಗ ಹಾಕಿದರೆ ಕಾನೂನಿನ ಅಡಿಯಲ್ಲಿ ಕ್ರಮ ಜರುಗಿಸಲಾಗುವದು ಎಂದು ಹುಕ್ಕೇರಿ ತಹಸಿಲ್ದಾರ ಬಲರಾಮ ಕಟ್ಟಿಮನಿ ಹೇಳಿದರು.
ಕಳೆದ ಹಲವಾರು ತಿಂಗಳಿನಿಂದ ಲಕ್ಷ್ಮಿ ದೇವಿ ಮಂದಿರದ ಅರ್ಚಕರು ಮತ್ತು ಪೂಜಾರಿಗಳ ನಡುವೆ ನಡೆಯುತ್ತಿರುವ ಮುಸುಕಿನ ಗುದ್ದಾಟ ಈಗ ಬಹಿರಂಗ ವಾಗಿದೆ,
ಪರಂಪರಿತವಾಗಿ ಬಡಿಗೇರ ಬಂಧುಗಳು ಸರದಿ ಪ್ರಕಾರ ಪೂಜೆ ನೆರವೇರಿಸಿಕೊಂಡು ಬರುತ್ತಿದ್ದಾರೆ ಆದರೆ ಇತ್ತಿಚಿಗೆ ಕೇಲವರ ಸರದಿ ಮುಕ್ತಾಯವಾದರೂ ಬೇರೆಯವರಿಗೆ ಪೂಜೆ ಹಸ್ತಾಂತರಿಸುತ್ತಿಲ್ಲಾ ಎಂದು ಆರೋಪಿಸಿ ಕೆಲವರು ಪೋಲಿಸ್ ಠಾಣೆಗೆ ದೂರು ನೀಡಲು ಮುಂದಾಗಿದ್ದಾರೆ.

ಈ ಬೆಳವಣಿಗೆ ಯನ್ನು ಅರಿತ ತಾಲೂಕು ಆಡಳಿತ ಮಂದಿರದ ಹಕ್ಕುದಾರರು, ಪೂಜಾರಿಗಳು ಮತ್ತು ಅರ್ಚಕರ ಸಭೆ ಏರ್ಪಾಡು ಮಾಡಲಾಯಿತು.
ಸಭೆಯಲ್ಲಿ ಮಾತನಾಡಿದ ತಹಸಿಲ್ದಾರ ಬಲರಾಮ ಕಟ್ಟಿಮನಿ ಅರ್ಚಕರು ತಮ್ಮಲ್ಲಿಯ ವೈಮನಸನ್ನು ಹಿರಿಯರ ಸಮ್ಮುಖದಲ್ಲಿ ಬಗೆ ಹರಿಸಿಕೋಳ್ಳ ಬೇಕು ಯಾವದೇ ಕಾರಣಕ್ಕೂ ಮಂದಿರಕ್ಕೆ ಬೀಗ ಹಾಕಬಾರದು ಹಾಕಿದರೆ ಅವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವದು ಎಂದು ಖಡಕ್ಕ್ ವಾರ್ನಿಂಗ ಮಾಡಿದರು.
ಈ ಸಂದರ್ಭದಲ್ಲಿ ಪೋಲಿಸ್ ಇನ್ಸಪೇಕ್ಟರ ಶಿವಶಂಕರ ಗಣಾಚಾರಿ , ಲಕ್ಷ್ಮಿ ದೇವಿ ಕಮೀಟಿ ಅದ್ಯಕ್ಷ ಪಾಪು ನಾಯಿಕ, ಜಯಗೌಡಾ ಪಾಟೀಲ, ರಾಜೇಂದ್ರ ಕುಲಕರ್ಣಿ, ಸಂಜೀವ ಮುತಾಲೀಕ, ಗೀರಿಶ ಕುಲಕರ್ಣಿ,ಚಿದಾನಂದ ಬಸ್ತವಾಡ, ಶಿವಾನಂದ ಗಜಬರ,ಬಸವರಾಜ ಹುಂಡೆಕಾರ, ಗಜಾನನ ಬಡಿಗೇರ ಹಾಗೂ ಅರ್ಚಕರು,ಹಕ್ಕುದಾರರು, ಜಾತ್ರಾ ಕಮೀಟಿ ಸದಸ್ಯರು ಉಪಸ್ಥಿತರಿದ್ದರು.

Tags:

error: Content is protected !!