ರೈತರು ಗೋಣ್ಣೆ ಹುಳು ನಿಯಂತ್ರಣಕ್ಕೆ ತಜ್ಞರ ಸಲಹೆ ಪಡೆಯುವದು ಅವಶ್ಯ ವಾಗಿದೆ ಎಂದು ಬೆಳಗಾವಿ ಜಿಲ್ಲೆಯ ಜಂಟಿ ಕೃಷಿ ನಿರ್ದೆಶಕ ಎಚ್ ಡಿ ಕೋಳೆಕರ ಹೇಳಿದರು.


ಹುಕ್ಕೇರಿ ತಾಲೂಕಿನ ಕೃಷಿ ಇಲಾಖೆ, ಕೃಷಿ ವಿಜ್ಞಾನಿಗಳು,ಆತ್ಮಾ ಅಧಿಕಾರಿಗಳು ಮತ್ತು ಕೃಷಿ ಸಂಜೀವಿನಿ ವತಿಯಿಂದ ಹಮ್ಮಿಕೊಂಡ ರೈತರಿಗೆ ಗೊಣ್ಣೆ ಹುಳು ನಿರ್ವಹಣೆ ಕುರಿತು ರೈತರಿಗೆ ಮಾಹಿತಿ ನಿಡುವ ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಲಾಯಿತು.
ರೈತರನ್ನು ಉದ್ದೇಶಿಸಿ ಮಾತನಾಡಿದ ಕೋಳೆಕರ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ರೈತ ಸಂಪರ್ಕ ಕೇಂದ್ರಗಳಲ್ಲಿ ನುರಿತ ಕೃಷಿ ಅಧಿಕಾರಿಗಳು ಲಭ್ಯವಿದ್ದು ರೈತರು ತಮ್ಮ ಜಮಿನುಗಳಲ್ಲಿ ಬೀಜ ಬಿತ್ತುವ ಕಾಲಕ್ಕೆ ಅಧಿಕಾರಿಗಳಿಂದ ಮಾಹಿತಿ ಪಡೆದು ಬಿತ್ತನೆ ಕಾರ್ಯ ಮಾಡಬೇಕು ಎಂದು ಸಲಹೆ ನೀಡಿದರು.
ಕೃಷಿ ಸಂಶೋಧಕ ಡಾ, ಸುನಿಲಕುಮಾರ ನೂಲಿ ಮಾತನಾಡಿ ರೈತರು ಬೇಸಾಯಿ ಪದ್ದತಿ, ರಸಗೋಬ್ಬರಗಳ ಸಮಗ್ರ ಬಳಕೆ, ಕಳೆ ನಿರ್ವಹಣೆ, ವಿವಿಧ ರೋಗಗಳ ಬಗ್ಗೆ ಮಾಹಿತಿ ನೀಡಿದರು.
ವೇದಿಕೆ ಮೇಲೆ ಶ್ರೀ ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ಮುಖ್ಯಸ್ಥ ಡಾ, ರಾಜಗೋಪಾಲ, ಡಾ, ಧನಂಜಯ ಚೌಗಲಾ, ಪ್ರಕಾಶ ಪಾಟೀಲ, ಸಮೀರ ಲೋಕಾಪುರೆ, ಡಿ ಸಿ ಅಲಕನೂರ, ಶಿವಾನಂದ ಕಮತೆ ಉಪಸ್ಥಿತರಿದ್ದರು.
ಹುಕ್ಕೇರಿ ಕೃಷಿ ಇಲಾಖೆ ಸಹಾಯಕ ನಿರ್ದೆಶಕ ಮಹಾದೇವ ಪಟಗುಂದಿ ಪ್ರಸ್ತಾವಿಕವಾಗಿ ಮಾತನಾಡಿ ಜಿಲ್ಲೆಯ ವಿವಿಧ ಕೃಷಿ ಸಂಶೋಧಕರು, ವಿಜ್ಞಾನಿಗಳು ಮತ್ತು ಪ್ರಗತಿಪರ ರೈತರಿಂದ ರೈತರಿಗೆ ಸಮಗ್ರ ಕೃಷಿ ಪದ್ದತಿ ಅಳವಡಿಕೆ ಕುರಿತು ಈ ಚರ್ಚಾಕೂಟದಲ್ಲಿ ಚರ್ಚಿಸಲಾಗುವದು ಎಂದರು
ಈ ಸಂದರ್ಭದಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ಮತ್ತು ಹುಕ್ಕೇರಿ ತಾಲೂಕಿನ ವಿವಿಧ ಗ್ರಾಮಗಳ ರೈತರು ಹಾಜರಿದ್ದರು.
ರಾಜು ಬಾಗಲಕೋಟಿ
ಇನ್ ನ್ಯೂಜ ಹುಕ್ಕೇರಿ.
