ಅಗಷ್ಟ 20 ರಂದು ದಿವಂಗತ ಡಿ ದೇವರಾಜ ಅರಸುರವರ 111 ನೇ ಜನ್ಮ ದಿನಾಚರಣೆ ಯನ್ನು ಅರ್ಥಪೂರ್ಣವಾಗಿ ಆಚರಿಸೋಣ ಎಂದು ಹುಕ್ಕೇರಿ ತಾಲೂಕಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಕೆ ಬಿ ದೇವಲಾಪುರ ಹೇಳಿದರು.


ಹಿಂದುಳಿದ ವರ್ಗಗಳ ಹರಿಕಾರ ಡಿ ದೇವರಾಜ ಅರಸು ರವರ ಜನ್ಮ ದಿನಾಚಾರಣೆಯನ್ನು ಅಗಷ್ಟ 20 ರಂದು ಅದ್ದೂರಿಯಾಗಿ ಆಚರಿಸಲು ತಹಸಿಲ್ದಾರ ಬಲರಾಮ ಕಟ್ಟಿಮನಿ ಯವರ ಅದ್ಯಕ್ಷತೆಯಲ್ಲಿ ಜರುಗಿದ ಪೂರ್ವಭಾವಿ ಸಭೆ ಜರುಗಿತು.

ಹಿಂದುಳಿದ ಕಲ್ಯಾಣ ಅಧಿಕಾರಿ ಕೆ ಬಿ ದೇವಲಾಪುರ ಮಾತನಾಡಿ ದಿವಂಗತ ಡಿ ದೇವರಾಜ ಅರಸರ ಜನ್ಮ ದಿನಾಚಾರಣೆಯನ್ನು ಪ್ರತಿ ವರ್ಷ ಅಗಷ್ಟ 20 ರಂದು ಅರ್ಥಪೂರ್ಣ ವಾಗಿ ಆಚರಿಸಲಾಗುತ್ತಿದೆ ಅದೆ ಈ ರೀತಿ ಈ ವರ್ಷ ಬಿವಸಿ ಎಂ ಇಲಾಖೆಯ ವಸತಿ ನಿಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರತಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಗುವದು ಹಾಗೂ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ಏರ್ಪಡಿಸಿ ವಿಬೃಂಜನೆಯಿಂದ ಆಚರಿಸಲಾಗುವದು ಎಂದರು
ವೇದಿಕೆ ಮೇಲೆ ತಹಸಿಲ್ದಾರ ಬಲರಾಮ ಕಟ್ಟಿಮನಿ, ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಟಿ ಆರ್ ಮಲ್ಲಾಡದ, ಕೃಷಿ ಇಲಾಖೆ ಸಹಾಯಕ ನಿರ್ದೆಶಕ ಮಹಾದೇವ ಪಟಗುಂದಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸರಕಾರಿ ನೌಕರರ ಸಂಘದ ಅದ್ಯಕ್ಷ ಅವಿನಾಶ ಹೋಳೆಪ್ಪಗೋಳ, ಸಮಾಜ ಕಲ್ಯಾಣ ಅಧಿಕಾರಿ ಗುರುಶಾಂತ ಪಾವಟೆ, ಕಂದಾಯ ಅಧಿಕಾರಿ ಮಲ್ಲಿಕಾರ್ಜುನ ಸಾರಾಪುರೆ, ಟ್ರೆಜರಿ ಸುಭಾಷ ಝಂಡೆನವರ,ತೋಟಗಾರಿಕೆ ಇಲಾಖೆ ಅಧಿಕಾರಿ ಎಂ ಎಸ್ ಕಳ್ಳಿಮನಿ ಮೊದಲಾದವರು ಉಪಸ್ಥಿತರಿದ್ದರು.
ರಾಜು ಬಾಗಲಕೋಟಿ
ಇನ್ ನ್ಯೂಜ ಹುಕ್ಕೇರಿ.
