ಬೆಳಗಾವಿ ಜಿಲ್ಲೆಯಲ್ಲಿ ಬೆಳೆ ಸಂರಕ್ಷಣಾ ಅಭಿಯಾನ ಹಮ್ಮಿಕೋಳ್ಳಲಾಗಿದೆ ಎಂದು ಜಂಟಿ ಕೃಷಿ ನಿರ್ದೆಶಕ ಎಚ್ ಡಿ ಕೋಳೆಕರ ಹೇಳಿದರು.
ಕೃಷಿ ಇಲಾಖೆ, ಕೃಷಿ ವಿಶ್ವವಿದ್ಯಾಲಯ ಮತ್ತು ಕೃಷಿ ವಿಜ್ಞಾನಿಗಳ ಹಾಗೂ ಹುಕ್ಕೇರಿ ಕೃಷಿ ಸಹಾಯಕ ನಿರ್ದೆಶಕರ ಸಂಯುಕ್ತ ಆಶ್ರಯದಲ್ಲಿ ಜರುಗಿದ ಮುಂಗಾರು ಬೆಳೆಗಳ ಸಸ್ಯ ಸಂರಕ್ಷಣಾ ಅಭಿಯಾನಕ್ಕೆ ಹಸೀರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಲಾಯಿತು.


ಹುಕ್ಕೇರಿ ತಾಲೂಕಿನ ವಿವಿಧ ಗ್ರಾಮಗಳಿಗೆ ತೇರಳಿ ರೈತರೊಂದಿಗೆ ಸಮಾಲೋಚನೆ ಮಾಡಲಾಯಿತು.
ನಂತರ ಹುಕ್ಕೇರಿ ಕೃಷಿ ನಿರ್ದೆಶಕರ ಕಾರ್ಯಾಲಯದಲ್ಲಿ ಜರುಗಿದ ಕೃಷಿ ಅಗ್ರೋ ಕೆಂದ್ರಗಳ ವಿತರಕರ ಸಭೆ ಜರುಗಿಸಿ ರೈತರಿಗೆ ಬೆಳೆಗಳ ಸಂರಕ್ಷಣೆ ಮತ್ತು ಔಷಧಿಗಳ ವಿತರಣೆ ಕುರಿತು ಮಾಹಿತಿ ನೀಡಲಾಯಿತು.

ಮಾದ್ಯಮಗಳೊಂದಿಗೆ ಮಾತನಾಡಿದ ಬೆಳಗಾವಿ ಜಿಲ್ಲಾ ಜಂಟಿ ಕೃಷಿ ನಿರ್ದೆಶಕ ಎಚ್ ಡಿ ಕೋಳೆಕರ ಮಾತನಾಡಿ ರೈತರು ಬೆಳೆದ ಬೆಳೆಗಳನ್ನು ಸಂರಕ್ಷಣೆಗಾಗಿ ಜಿಲ್ಲೆಯಲ್ಲಿ ಸಂಪನ್ಮೂಲ ವ್ಯಕ್ತಿಗಳ ಎಂಟು ತಂಡ ರಚಿಸಿ ಪ್ರತಿ ತಾಲೂಕಿನ ಗ್ರಾಮಗಳಿಗೆ ಭೇಟಿ ನೀಡಿ ರೈತರೊಂದಿಗೆ ಸಮಾಲೋಚನೆ ಮಾಡಿ ಬೆಳೆಗಳಿಗೆ ಬರುವ ರೋಗ ಮತ್ತು ಪರಿಹಾರ ಹಾಗೂ ಔಷಧಿಗಳ ಮಾಹಿತಿ ನೀಡಲಾಗುತ್ತಿದೆ ಇಂದು ಒಂದೆ ದಿನದಲ್ಲಿ ಸುಮಾರು ಮೂರು ಸಾವಿರ ರೈತರಿಗೆ ಮಾಹಿತಿ ನೀಡಲಾಗಿದೆ ಕಾರಣ ರೈತರು ತಾವು ಬೆಳೆದ ಬೆಳೆಗಳಿಗೆ ಬರುವ ರೋಗ ಮತ್ತು ಅದಕ್ಕೆ ಪರಿಹಾರವನ್ನು ಅಧಿಕಾರಿಗಳ , ವಿಜ್ಞಾನಿಗಳ ಸಲಹೆ ಪಡೆದುಕೋಳ್ಳ ಬೇಕು ಎಂದರು
ಹುಕ್ಕೇರಿ ಕೃಷಿ ಸಹಾಯಕ ನಿರ್ದೆಶಕ ಮಹಾದೇವ ಪಟಗುಂದಿ ರೈತರು ರಾಸಾಯನಿಕ ಸಿಂಪರಣೆ ಮಾಡುವಾಗಿ ಮಿಂಜಾಗ್ರತಾ ಕ್ರಮಗಳ ಕುರಿತು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಹಾಗೂ ಕೃಷಿ ಅಗ್ರೋ ಕೆಂದ್ರಗಳ ಸಂಘಟನೆಯ ಮುಖಂಡ ಮಹೇಶ ಬಾತೆ, ಚಿಕ್ಕೋಡಿ ಉಪ ಕೃಷಿ ನಿರ್ದೆಶಕ ಸಹದೇವ ಯರಗೊಪ್ಪ, ಬೆಳಗಾವಿ ಎ ಡಿ ಸಲಿಂ ಸಂಗ್ರತ್ರಾಸ್, ಎ ಡಿ ಕೇಂದ್ರ ಸ್ಥಾನ ರವಿಂದ್ರ ನಾಯ್ಕರ, ಕೃಷಿ ಸಂಶೋಧನಾ ಕೇಂದ್ರ ಮುಖ್ಯಸ್ಥ ಸುನಿಲಕುಮಾರ ನೂಲಿ,ಕೃಷಿ ವಿಜ್ಞಾನ ಕೇಂದ್ರ ತುಕ್ಕಾನಟ್ಟಿ ಡಿ ಸಿ ಚೌಗಲಾ ಹಾಗೂ ಹುಕ್ಕೇರಿ ತಾಲೂಕಾ ಕೃಷಿ ಉಪಕರಣ ಮತ್ತು ಔಷಧಿಗಳ ಮಾರಾಟ ಪ್ರತಿನಿಧಿಗಳು ಉಪಸ್ಥಿತರಿದ್ದರು.
ರಾಜು ಬಾಗಲಕೋಟ
ಇನ್ ನ್ಯೂಜ ಹುಕ್ಕೇರಿ.
