ನೀರಾವರಿ ಯೋಜನೆಗಳ ನೀರನ್ನು ರೈತರು ಸದ್ಬಳಕೆ ಮಾಡು ಕೋಳ್ಳ ಬೇಕು ಎಂದು ರೈತ ಮುಖಂಡ ಪ್ರಸವಪ್ರಭು ವಂಟಮೂರಿ ಹೇಳಿದರು.


ಹುಕ್ಕೇರಿ ನಗರದ ಅಡವಿ ಸಿದ್ದೇಶ್ವರ ಏತ ನೀರಾವರಿ ಪಂಪ ಹೌಸಗೆ ತೇರಳಿದ ರೈತ ಹಿತರಕ್ಷಣಾ ವೇದಿಕೆ, ಕೃಷಿಕ ಸಮಾಜ, ರೈತ ಸಂಘ ,ಕೂಲಿ ಕಾರ್ಮಿಕರ ಸಂಘ ಮತ್ತು ಹಸೀರು ಸೇನೆ ಕಾರ್ಯಕರ್ತರು ಹಿರಣ್ಯಕೇಶಿ ನದಿಗೆ ಮತ್ತು ಪಂಪ ಹೌಸ್ ಉಪಕರಣಗಳಿಗೆ ಪೂಜೆ ಸಲ್ಲಿಸಿದರು.
ನಂತರ ರೈತರನ್ನು ಉದ್ದೇಶಿಸಿ ಮಾತನಾಡಿದ ರೈತ ಹಿತರಕ್ಷಣಾ ವೇದೀಕೆ ಅದ್ಯಕ್ಷ ತಮ್ಮಣಗೌಡಾ ಪಾಟೀಲ ರೈತ ಹಿತರಕ್ಷಣಾ ವೇದಿಕೆ ಹೋರಾಟದ ಫಲವಾಗಿ ಇಂದು ಹಿರಣ್ಯಕೇಶಿ ಏತ ನೀರಾವರಿ ಯೋಜನೆ ಸಫಲಗೊಂಡಿದೆ ಇದಕ್ಕೆ ಬಲವಾಗಿ ನಿಂತ ಇನ್ನೂಳಿದ ರೈತ ಪರ ಸಂಘಟನೆಗಳು ಒಗ್ಗಟ್ಟಾಗಿ ರೈತರ ಸಮಸ್ಯೆಗಳಿಗೆ ಸ್ಪಂದಿಸಲಾಗುವದು ಎಂದರು

ಜಿಲ್ಲಾ ಉಪಾದ್ಯಕ್ಷ ಬಸವಪ್ರಭು ವಂಟಮೂರಿ ಮಾತನಾಡಿ ಏತ ನೀರಾವರಿಗಳಿಂದ ನೀರು ಹರಿಸುವಂತೆ ಆಗ್ರಹಿಸಿ ಕಳೆದ ವಾರ ನೀರಾವರಿ ಅಧಿಕಾರಿಗಳಿಗೆ ರೈತರು ಗಡವು ನಿಡಿದ್ದರಿಂದ ಇಂದು ಅಧಿಕಾರಿಗಳು,ಸಚಿವ ಶಾಸಕರು ಇಂದು ಪ್ರಯೋಗಿಕವಾಗಿ ನೀರು ಹರಿಸಿದ್ದಾರೆ ಅವರಿಗೆ ರೈತರ ಪರವಾಗಿ ಅಭಿನಂದನೆ ಸಲ್ಲಿಸುತ್ತೆನೆ ಎಂದರು
ನಂತರ ರೈತರು ಘೋಷನೆ ಕೂಗಿ ಹರ್ಷ ವ್ಯಕ್ತ ಪಡಿಸಿದರು.
ಮುಖಂಡ ಚಂದು ಗಂಗಣ್ಣವರ ಮಾತನಾಡಿ
ನೀರಾವರಿ ಯೋಜನೆ ಯಶಸ್ವಿಯಾಗಲು ರೈತರ ಸಹಕಾರ ಅಗತ್ಯವಾಗಿದೆ ಕಾರಣ ರೈತರು ಪೈಪ ಲೇನ್ ಗಳಿಗೆ ಹಾನಿಯಾಗದಂತೆ ನೀಗಾವಹಿಸಿ ಸಹಕರಿಸಲು ಮನವಿ ಮಾಡಿದರು
ಈ ಸಂದರ್ಭದಲ್ಲಿ ವಿವಿಧ ರೈತ ಪರ ಸಂಘಟನೆಗಳ ಮುಖಂಡರಾದ ಜಿಯಾವುಲ್ಲಾ ವಂಟಮೂರಿ, ಸುಭಾಷ ನಾಯಿಕ, ರಾಜು ಮುಚ್ಚಂಡಿ, ಸಲಿಂ ಕಳಾವಂತ, ಬಸಗೌಡಾ ಪಾಟೀಲ, ಪ್ರಭಾಕರ ಸೂರ್ಯವಂಶ, ಅಪ್ಪಾಸಾಹೇಬ ನಾಯಿಕ, ನಾಗಪ್ಪಾ ಹುಲ್ಲೂಳಿ ಹಟ್ಟಿ, ಬಸವರಾಜ ಪಾಟೀಲ, ಪಾರವ್ವ ಲಟ್ಟಿ, ವಿಶ್ವನಾಥ ನಾಯಿಕ, ಇರ್ಷಾದ ಮೋಕಾಶಿ, ಹಾಲಪ್ಪಾ, ಮಾಹಾರುದ್ರ ಮರೆನ್ನವರ, ಮಾರುತಿ ಪವಾರ ಮೊದಲಾದವರು ಉಪಸ್ಥಿತರಿದ್ದರು.
ರಾಜು ಬಾಗಲಕೋಟಿ
ಇನ್ ನ್ಯೂಜ ಹುಕ್ಕೇರಿ.
