Hukkeri

ಹುಕ್ಕೇರಿ : ಹುಕ್ಕೇರಿ ತಾಲೂಕಿನಲ್ಲಿ ವಿವಿಧಡೆ 80 ನೇ ಸ್ವಾತಂತ್ರೋತ್ಸವನ್ನು ವಿಬೃಂಜನೇಯಿಂದ ಆಚರಿಸಲಾಯಿತು.

Share

ಹುಕ್ಕೇರಿ ಪಟ್ಟಣದ ಪೋಲಿಸ್ ಪರೇಡ್ ಮೈದಾನದಲ್ಲಿ ಪೋಲಿಸ್ ಇನ್ಸಪೇಕ್ಟರ ಶಿವಶಂಕರ ಗಣಾಚಾರಿ ದ್ವಜಾರೋಹಣ ನೆರವೇರಿಸಿ ಸಿಬ್ಬಂದಿಗಳಿಗೆ ಸ್ವಾತಂತ್ರೋತ್ಸವ ಶುಭಾಶಯ ಹೇಳಿದರು.

ತಾಲೂಕಾ ಆಡಳಿತ ಸೌಧ ಆವರಣದಲ್ಲಿ ತಹಸಿಲ್ದಾರ ಬಲರಾಮ ಕಟ್ಟಿಮನಿ ಧ್ವಜಾರೋಹಣ ನೇರವೆರಿಸಿ ಮಾಧ್ಯಮ ಗಳೊಂದಿಗೆ ಮಾತನಾಡುತ್ತಾ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 80 ವರ್ಷಗಳು ಗತಿಸಿದರು ಸಹ ಇನ್ನೂ ಅಭಿವೃದ್ಧಿ ಯಲ್ಲಿ ಮುನ್ನಡೆಯುತ್ತಿದ್ದೆವೆ ,ಸ್ವಾತಂತ್ರ್ಯ ಕ್ಕಾಗಿ ಹೋರಾಡಿ ಪ್ರಾಣ ತೆತ್ತ ಮಹನಿಯರನ್ನು ನೆನಪಿಸಿಕೊಂಡು ದೇಶದ ಅಭಿವೃದ್ಧಿ ಗಾಗಿ ನಾವೆಲ್ಲರೂ ಶ್ರಮಿಸಬೇಕಾಗಿದೆ ಎಂದರು
ಟಿಪ್ಪು ಸುಲ್ತಾನ ಹೈಸ್ಕೂಲ್ ಆವರಣದಲ್ಲಿ ಸಂಸ್ಥೆಯ ಅದ್ಯಕ್ಷ ಇಕ್ಬಾಲ್ ಪೀರಜಾದೆ ದ್ವಜಾರೋಹಣ ನೆರವೇರಿಸಿ ವಿದ್ಯಾರ್ಥಿಗಳಿಂದ ಗೌರವ ರಕ್ಷೆ ಪಡೆದು ಪಥ ಚಸಂಚಲನ ವಿಕ್ಷಿಸಿದರು.

ನಂತರ ಪುರಸಭೆ ಕಛೇರಿ ಆವರಣದಲ್ಲಿ ಮುಖ್ಯಾಧಿಕಾರಿ ಈಶ್ವರ ಸಿದ್ನಾಳ ದ್ವಜಾರೋಹಣ ಮಾಡಿದರು, ಹಳೆ ಬಸ್ಸ್ ನಿಲ್ದಾಣದ ಸ್ವಾತಂತ್ರ್ಯ ಯೋಧರ ಸ್ಮಾರಕದ ಬಳಿ ತಾಲೂಕಾ ದಂಡಾಧೀಕಾರಿ ಬಲರಾಮ ಕಟ್ಟಿಮನಿ ಧ್ವಜಾರೋಹಣ ನೇರವೆರಿಸಿದರು,
ಹೋಸ ಬಸ್ ನಿಲ್ದಾಣದ ಆವರಣದಲ್ಲಿ ರಾಜು ಬಾಗಲಕೋಟಿ, ಮಹಾವೀರ ಉದ್ಯೋಗ ಸಮೂಹ ಪ್ರಧಾನ ಕಛೇರಿಯಲ್ಲಿ ಅದ್ಯಕ್ಷ ಮಹಾವೀರ ನಿಲಜಗಿ ರಾಷ್ಟ್ರ ದ್ವಜ ಹಾರಿಸಿದರು,
ಕೊನೆಯಲ್ಲಿ ಎಸ್ ಕೆ ಹೈಸ್ಕೂಲ್ ಮೈದಾನದಲ್ಲಿ ಜರುಗಿದ ಸಾರ್ವಜನಿಕ ಸಮಾರಂಭದಲ್ಲಿ ತಾಲೂಕಾ ದಂಡಾಧಿಕಾರಿ ಬಲರಾಮ ಕಟ್ಟಿಮನಿ ಕ್ರಾಂತಿ ವೀರ ಸಂಗೋಳ್ಳಿ ರಾಯಣ್ಣ ಜ್ಯೋತಿಯನ್ನು ಬರಮಾಡಿಕೊಂಡು ಮಹಾತ್ಮಾ ಗಾಂಧಿಜಿ ಮತ್ತು ಡಾ, ಬಿ ಆರ್ ಅಂಬೇಡ್ಕರ್ ರವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಧ್ವಜಾರೋಹಣ ನೇರವೆರಿಸಿದರು.

ನಂತರ ವಿವಿಧ ರಕ್ಷಣಾ ಪಡೆಗಳಿಂದ ಮತ್ತು ಶಾಲಾ ವಿದ್ಯಾರ್ಥಿಗಳ ಪಥ ಸಂಚಲನದ ಗೌರವ ರಕ್ಷೆ ಪಡೆದು ತಾಲೂಕಿನ ಜನತೆಗೆ ಸ್ವಾತಂತ್ರೋತ್ಸವದ ಸಂದೇಶ ವಾಚನ ನೀಡಿದರು.

ನಂತರ ಹುಕ್ಕೇರಿ ತಾಲೂಕಿನ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ, ದೇಶ ಭಕ್ತಿ ಗಾಯಣ, ನೃತ್ಯ, ಭಾಷಣ ಮತ್ತು ಅಂಗನವಾಡಿ ಮಕ್ಕಳಿಂದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ ವೀರರ ವೇಷ ಭೂಷನ ಕಾರ್ಯಕ್ರಮಗಳು ಜರುಗಿದವು.
ಈ ಸಂಧರ್ಬದಲ್ಲಿ ರಾಷ್ರ್ಟಿಯ ಹಬ್ಬದ ಕಾರ್ಯಕ್ರಮಗಳ ಕಾರ್ಯದರ್ಶಿ ಮತ್ತು ಬಿ ಇ ಓ ಪ್ರಭಾವತಿ ಪಾಟೀಲ, ತಾಲೂಕಾ ಪಂಚಾಯತ ಇ ಓ ಟಿ ಆರ್ ಮಲ್ಲಾಡದ,ಗ್ಯಾರಂಟಿ ಯೋಜನೆಗಳ ಅದ್ಯಕ್ಷ ಶಾನೂಲ ತಹಸಿಲ್ದಾರ, ಪುರಸಭೆ ಮುಖ್ಯಾಧಿಕಾರಿ ಈಶ್ವರ ಶಿದ್ನಾಳ, ಸಮಾಜ ಕಲ್ಯಾಣ ಅಧಿಕಾರಿ ಜಿ ಬಿ ಪಾವಟೆ, ಕೃಷಿ ಇಲಾಖೆ ಸಹಾಯಕ ನಿರ್ದೆಶಕ ಮಹಾದೇವ ಪಟಗುಂದಿ, ಸಿ ಡಿ ಪಿ ಓ ಹೋಳೆಪ್ಪ ಎಚ್, ಅ೪ಣ್ಯ ಅಧಿಕಾರಿ ಹಣಮಂತ ಇಂಗಳಗಿ, ಕಸಾಪ ಅದ್ಯಕ್ಷ ಪ್ರಕಾಶ ಅವಲಕ್ಕಿ ಮತ್ತು ಪುರಸಭೆ ಸದಸ್ಯರು,
ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸಾರ್ವಜನಿಕರು ಶಾಲಾ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದು ವಿಬೃಂಜನೆಯಿಂದ ಸ್ವಾತಂತ್ರೋತ್ಸವ ಆಚರಿಸಿದರು. ಎಲ್ಲ ಸರ್ಕಾರಿ ಕಚೇರಿಗಳನ್ನು ದೀಪಾಲಂಕಾರದಿಂದ ಅಲಂಕರಿಸಲಾಗಿತ್ತು.
ರಾಜು ಬಾಗಲಕೋಟಿ
ಇನ್ ನ್ಯೂಜ ಹುಕ್ಕೇರಿ.

Tags:

error: Content is protected !!