ಸಮಾನತೆಯ ಕನಸು ಕಾಣುವ ಸಮಾಜ ಸುಧಾರಕ ದಿವಂಗತ ಡಿ ದೇವರಾಜ ಅರಸರಾಗಿದ್ದರು ಎಂದು ಹುಕ್ಕೇರಿ ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಟಿ ಆರ್ ಮಲ್ಲಾಡದ ಹೇಳಿದರು.


ಹುಕ್ಕೇರಿ ನಗರದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಹುಕ್ಕೇರಿ ತಾಲೂಕಾ ಆಡಳಿತ ಮತ್ತು ಪುರಸಭೆ ಸಂಕೇಶ್ವರ,ಹುಕ್ಕೇರಿ ಇವರ ಸಂಯುಕ್ತ ಆಶ್ರಯದಲ್ಲಿ ದಿವಂಗತ ಡಿ, ದೇವರಾಜು ಅರಸರ 111 ನೇ ಜನ್ಮ ದಿನಾಚಾರಣೆ ಕಾರ್ಯಕ್ರಮ ವನ್ನು ತಾಲೂಕಾ ದಂಡಾಧಿಕಾರಿ ಬಲರಾಮ ಕಟ್ಟಿಮನಿ ಅರಸರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ವೇದಿಕೆ ಮೇಲೆ ಪುರಸಭೆ ಮುಖ್ಯಾಧಿಕಾರಿ ಈಶ್ವರ ಸಿದ್ನಾಳ, ಕೃಷಿ ಇಲಾಖೆ ಸಹಾಯಕ ನಿರ್ದೆಶಕ ಮಹಾದೇವ ಪಟಗುಂದಿ, ಗುಡಿಕೇತರ, ಮಠದ ಉಪಸ್ಥಿತರಿದ್ದರು.
ಹುಕ್ಕೇರಿ ತಾಲೂಕಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಕೆ ಬಿ ದೇವಪ್ಪಗೋಳ ಅಥಿತಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ವಾಗಿ ಮಾತನಾಡಿ ಗಣ್ಯರಿಗೆ ಸತ್ಕರಿಸಿದರು.
ತಾಲೂಕಾ ಪಂಚಾಯತ ಕಾರ್ಯನಿರ್ಬಾಹಕ ಅಧಿಕಾರಿ ಟಿ ಆರ್ ಮಲ್ಲಾಡದ ಮಾತನಾಡಿ ಕರ್ನಾಟಕದಲ್ಲಿ ಭೂ ಸುಧಾರಣೆ, ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ, ಜೀತ ಪದ್ದತಿ ನಿರ್ಮೂಲನೆ, ಮಲಹೊರುವ ಪದ್ದತಿ ನಿಷೇಧ, ನಿರುದ್ಯೋಗಿಗಳಿಗೆ ಸ್ಟೈಪಂಡರಿ ಯೋಜನೆ, ವೃದ್ಯಾಪ ವೇತನ, ಕನಿಷ್ಟ ಕೂಲಿ ನಿಗದಿ,ಭಾಗ್ಯಜ್ಯೋತಿ ಯೋಜನೆ ಸೇರಿದಂತೆ ಹತ್ತು ಹಲವಾರು ಯೋಜನೆಗಳ ರೂವಾರಿ ದಿವಂಗತ ಮಾಜಿ ಮುಖ್ಯಮಂತ್ರಿ ದೇವರಾಜು ಅರಸರ ಯೋಜನೆಗಳು ಇಂದು ಅಜರಾಮರವಾಗಿವೆ ಎಂದರು

ನಂತರ ಉತ್ತಮ ವಸತಿ ನಿಲಯದ ಮೆಲ್ವಿಚಾರಕಿ ಶಬೀನಾ ಮುಲ್ಲಾ, ಅಡುಗೆ ಸಿಬ್ಬಂದಿ ಮಾಲಾಶ್ರೀ ಶೇಕಿನವರ ಮತ್ತು ಶಿವು ಮಾಳಗಿ ಇವರಿಗೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇಲಾಖೆ ವತಿಯಿಂದ ಸತ್ಕರಿಸಿ ಅಭಿನಂದಿಸಲಾಯಿತು.
ಮಾದ್ಯಮಗಳೊಂದಿಗೆ ಮಾತನಾಡಿದ ಕೆ ಬಿ ದೆವಪ್ಪಗೋಳ ಹುಕ್ಕೇರಿ ತಾಲೂಕಾ ಆಡಳಿತ ಮತ್ತು ವಿವಿಧ ಇಲಾಖೆ ಅಧಿಕಾರಿಗಳ ಸಹ ಭಾಗಿತ್ವದಲ್ಲಿ ದಿವಂಗತ ದೇವರಾಜ ಅರಸರ ಜಯಂತಿಯನ್ನು ಅರ್ಥಪೂರ್ಣ ವಾಗಿ ಆಚರಿಸಲಾಗಿದೆ ಇದಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಹೇಳ ಬಯಸುತ್ತೆನೆ ಎಂದರು
ಈ ಸಂದರ್ಭದಲ್ಲಿ ಪರಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಮಹೇಶ ಭಜಂತ್ರಿ, ಸರ್ಕಾರಿ ನೌಕರರ ಸಂಘದ ಅದ್ಯಕ್ಷ ಅವಿನಾಶ ಹೋಳೆಪ್ಪಗೋಳ, ಸಿ ಡಿ ಪಿ ಓ ಎಚ್ ಹೋಳೆಪ್ಪಾ, ಹಿಂದೂಳಿದ ವರ್ಗಗಳ ಇಲಾಖೆ ಸಿಬ್ಬಂದಿಗಳಾದ ಲಕ್ಕಪ್ಪ ಹವೇಲಿ, ತುಕಾರಾಮ ಮಾದರ, ಅಜೀಮ ನಾಯಿಕವಾಡಿ, ಬಿ ಎಸ್ ಶಿರಗಾಂವಿ, ಜಿ ಎಸ್ ಯಾದವಾಡ, ಎನ್ ಎಂ ಕೋಟೆ, ಎಸ್ ಬಿ ಮುಲ್ಲಾ , ಶ್ರೀದೇವಿ ಸೊಂಡಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು .
ರಾಜು ಬಾಗಲಕೋಟಿ
ಇನ್ ನ್ಯೂಜ ಹುಕ್ಕೇರಿ.
