Dharwad

ಧಾರವಾಡದ ಕಬ್ಬೇನೂರು ಗ್ರಾಮದಲ್ಲಿ ಕೈಕೊಟ್ಟು ಮುಂಗಾರು ಬೆಳೆ..

Share

ಧಾರವಾಡ ತಾಲೂಕಿನ ಕಬ್ಬೆನೂರು ಗ್ರಾಮದ ರೈತರ ಕೃಷಿ ಭೂಮಿಯಲ್ಲಿ ಮುಂಗಾರು ಮಳೆ ಕೈ ಕೊಟ್ಟ ಹಿನ್ನಲೆಯಲ್ಲಿ ಕಮರಿದ ಮುಂಗಾರು ಬೆಳೆಗೆ ಅನ್ನದಾತರು ಕುರಿಗಳನ್ನು ಬಿಡಿಸಿ ನಾಶ ಮಾಡಿಸು ಸ್ಥಿತಿ ನಿರ್ಮಾಣಗೊಂಡಿದ್ದು, ರಾಜ್ಯ ಸರ್ಕಾರ ವಿರುದ್ಧ ರೈತರು ಹಿಡಿ ಶಾಪ ಹಾಕುತ್ತಿದ್ದಾರೆ.

ಹೌದು..ಧಾರವಾಡ ತಾಲೂಕಿನ ಕಬ್ಬೇನೂರು ಗ್ರಾಮದ ಈರಣ್ಣ ಕರಡಿಗುಡ್ಡ ರೈತ 16 ಎಕರೆ ಕೃಷಿ ಜಮೀನಿನಲ್ಲಿ ಈ ಬಾರಿ ಉತ್ತಮ ಮುಂಗಾರು ಬರುತ್ತೆ ಎಂಬ ನಿರೀಕ್ಷೆ ಇಟ್ಟುಕೊಂಡು ಸಾಲಾ ಸೋಲಾ ಮಾಡಿ ಹೆಸರು ಬಿತ್ತನೆ ಮಾಡಿದ್ದರು. ಆದರೆ ಸಮರ್ಪಕ ಮುಂಗಾರು ಮಳೆ ಬಾರದೆ ಕಾರಣ ಹೆಸರು ಬೆಳೆ ಕಮರಿ ಹೋಗಿದೆ. ಇದರಿಂದ ಬೇಸರಗೊಂಡ ಅನ್ನದಾತ ಮುಖ ಪ್ರಾಣಿ ಕುರಿಗಳಾದ್ರೂ ಹಸಿವು ನಿಗಿಸಿಕೊಳ್ಳಲ್ಲಿ ಎಂಬ ಉದ್ದೇಶದಿಂದ ಕುರಿಗಳನ್ನು ಜಮೀನಿಗೆ ಬಿಡಿಸಿ ಬೆಳೆ ತಾನೇ ನಾಶ ಮಾಡಿಸಿದ್ದಾನೆ. ಈ ಕಡೆ ಜಿಲ್ಲಾಡಳಿತವು ಗಮನ ಹರಿಸುತ್ತಿಲ್ಲ, ಜತೆಗೆ ರಾಜ್ಯ ಸರ್ಕಾರ ರೈತರ ಕಡೆ ತಿರುಗಿಯ್ಯೂ ನೋಡುತ್ತಿಲ್ಲ. ಧಾರವಾಡದ ಹಲವು ಜಿಲ್ಲೆಯ ರೈತರಿಗೆ ಈ ಬಾರಿ ಮುಂಗಾರು ಕೈಕೊಟ್ಟರು ಇದುವರೆಗೂ ಸರ್ಕಾರದ ಒಬ್ಬರು ಜನಪ್ರತಿನಿಧಿಗಳ ವಾಸ್ತವತೆ ಅರಿವು ಕೆಲಸ ಮಾಡುತ್ತಿಲ್ಲ ಎಂದು ಅನ್ಮದಾತರು ಹಿಡಿಶಾಪ ಹಾಕುತ್ತಿದ್ದಾರೆ. ಈ ಕೂಡಲೇ ಸರ್ಕಾರ ಧಾರವಾಡ ಜಿಲ್ಲೆಯಲ್ಲಿ ಮುಂಗಾರು ಮಳೆ ಇಲ್ಲದ ಗ್ರಾಮಗಳುಗೆ ಭೇಟಿ ನೀಡಿ ಬರ ಪರಿಹಾರ ನೀಡಬೇಕು ಎಂದು ಆಗ್ರಹಿಸುತ್ತಿದ್ದಾರೆ.‌

Tags:

error: Content is protected !!