Belagavi

ಬೆಳಗಾವಿಯಲ್ಲಿ ‘ಡ್ರಗ್ಸ್ ಮುಕ್ತ ಸಮಾಜ ಹಾಗೂ ರಸ್ತೆ ಸುರಕ್ಷತೆ’ ಜಾಗೃತಿ ಬೈಕ್ ರ್ಯಾಲಿ!

Share

ಬೆಳಗಾವಿಯಲ್ಲಿ ಯುವಜನತೆಯನ್ನು ದುಶ್ಚಟಗಳಿಂದ ದೂರವಿಡಲು ಹಾಗೂ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲು ‘ಜೈ ಕರ್ನಾಟಕ ಜನಪರ ವೇದಿಕೆ’ ವತಿಯಿಂದ ಬೃಹತ್ ಜಾಗೃತಿ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು. ಸಂಘಟನೆಯ ಜಿಲ್ಲಾಧ್ಯಕ್ಷ ಶಿವರಡ್ಡಿ ಲಕ್ಷ್ಮಣರೆಡ್ಡಿ ನೇತೃತ್ವದಲ್ಲಿ ನಡೆದ ಈ ರ್ಯಾಲಿಯ ಸಂಪೂರ್ಣ ವಿವರ ಇಲ್ಲಿದೆ…”

ಬೆಳಗಾವಿಯಲ್ಲಿ ಜೈ ಕರ್ನಾಟಕ ಜನಪರ ವೇದಿಕೆಯ ವತಿಯಿಂದ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಜಾಗೃತಿ ಬೈಕ್ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು. ಇಂದಿನ ಯುವ ಪೀಳಿಗೆಯಲ್ಲಿ ಡ್ರಗ್ಸ್ ಸೇವನೆ ಮತ್ತು ದುಶ್ಚಟಗಳ ಹಾವಳಿ ಹೆಚ್ಚಾಗುತ್ತಿದ್ದು, ಇದು ದೇಶದ ಪ್ರಗತಿಗೆ ಹಿನ್ನಡೆಯನ್ನುಂಟುಮಾಡುತ್ತಿದೆ. ಈ ಹಿನ್ನೆಲೆಯಲ್ಲಿ “ಡ್ರಗ್ಸ್‌ಗೆ ನಕಾರ ನೀಡಿ” ಎಂಬ ಸಂದೇಶದೊಂದಿಗೆ ಆರೋಗ್ಯಕರ ಸಮಾಜ ನಿರ್ಮಾಣ ಮಾಡಲು ಹಾಗೂ ಸಂಚಾರ ನಿಯಮ ಪಾಲಿಸಿ ‘ಹೆಲ್ಮೆಟ್ ಧರಿಸಿ ಜೀವ ಉಳಿಸಿ’ ಎಂದು ಜನರಲ್ಲಿ ವಿನಂತಿಸಲು ಈ ಬೈಕ್ ರ್ಯಾಲಿಯನ್ನು ಆಯೋಜಿಸಲಾಗಿತ್ತು.
ಈ ವೇಳೆ ಮಾತನಾಡಿದ ಜೈ ಕರ್ನಾಟಕ ಜನಪರ ವೇದಿಕೆಯ ಬೆಳಗಾವಿ ಜಿಲ್ಲಾಧ್ಯಕ್ಷ ಶಿವರಡ್ಡಿ ಲಕ್ಷ್ಮಣರೆಡ್ಡಿ, ಯುವಶಕ್ತಿಯೇ ದೇಶದ ಶಕ್ತಿ. ಕಳ್ಳಮಾರ್ಗದಲ್ಲಿ ಬರುವ ಡ್ರಗ್ಸ್‌ನಿಂದ ಯುವಕರು ಹಾಳಾಗುತ್ತಿರುವುದನ್ನು ತಡೆಯಲು ಮತ್ತು ರಸ್ತೆ ಸುರಕ್ಷತೆ ಕುರಿತು ಅರಿವು ಮೂಡಿಸಲು ಈ ರ್ಯಾಲಿ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಈ ಜಾಗೃತಿ ಬೈಕ್ ರ್ಯಾಲಿಯು ಬೆಳಗಾವಿಯ ಪ್ರಮುಖ ಮಾರ್ಗಗಳಾದ ರಾಣಿ ಚನ್ನಮ್ಮ ವೃತ್ತದಿಂದ ಪ್ರಾರಂಭವಾಗಿ ಆರ್‌ಟಿಒ ವೃತ್ತ, ಮಾರ್ಕೆಟ್ ಪೊಲೀಸ್ ಸ್ಟೇಷನ್, ಖಡೇಬಜಾರ್ ಹಾಗೂ ಲಿಂಗರಾಜ್ ಕಾಲೇಜ್ ಮಾರ್ಗವಾಗಿ ಚಲಿಸಿ, ಅಂತಿಮವಾಗಿ ಮತ್ತೆ ಚನ್ನಮ್ಮ ವೃತ್ತದಲ್ಲಿ ಮುಕ್ತಾಯಗೊಂಡಿತು.

Tags:

error: Content is protected !!