Dharwad

ಯೋಗೇಶಗೌಡ ಕೊಲೆ ಪ್ರಕರಣ: ವಿನಯ್ ಕುಲಕರ್ಣಿಗೆ ಬಿಗ್ ರಿಲೀಫ್ — ಧಾರವಾಡದ ಹೆಬ್ಬಳ್ಳಿ ಅಗಸಿಯಲ್ಲಿ ಬೆಂಬಲಿಗರ ವಿಜಯೋತ್ಸವ

Share

ಬಿಜೆಪಿ ಮುಖಂಡ ಯೋಗೇಶಗೌಡ ಗೌಡರ ಕೊಲೆ ಪ್ರಕರಣದಲ್ಲಿ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ, ಈಗ ಹೈಕೋರ್ಟ್‌ನಲ್ಲಿ ಶಿಕ್ಷೆಗೆ ತಡೆ ಸಿಕ್ಕು ಜಾಮೀನು ಮಂಜೂರಾದ ಹಿನ್ನಲೆಯಲ್ಲಿ ಧಾರವಾಡದಲ್ಲಿ ಕುಲಕರ್ಣಿ ಬೆಂಬಲಿಗರು ವಿಜಯೋತ್ಸವ ಆಚರಣೆ ಮಾಡಿದರು.

ಧಾರವಾಡದ ಹೆಬ್ಬಳ್ಳಿ ಅಗಸಿಯಲ್ಲಿ ವಿನಯ ಕುಲಕರ್ಣಿ ಬೆಂಬಲಿಗರು ಹಾಗೂ ಕೈ ಪಾಲಿಕೆ ಸದಸ್ಯರಿ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು. ಸ್ಪೀಕರ್ ಹಚ್ಚಿ ಕುಣಿದು ಕುಪ್ಪಳಿಸಿದ ಬೆಂಬಲುಗರು ಕುಲಕರ್ಣಿ ಪರ ಜೈಕಾರ ಹಾಕುವುದರ ಜತೆಗೆ ಪರಸ್ಪರ ಸಹಿ ಹಂಚುಕೊಂಡು ವಿಜಯೋತ್ಸವದಲ್ಲಿ ಮುಳಿರುವ ದೃಶ್ಯಗಳು ಕಂಡು ಬಂದವು. ವಿನಯ ಕುಲಕರ್ಣಿಗೆ ಜಾಮೀನ ಮಂಜೂರು ಜತೆಗೆ ಧಾರವಾಡ ಪ್ರವೇಶಕ್ಕೆ ಅನುಮತಿ ನೀಡಲಾಗಿದ್ದು, ಕುಲಕರ್ಣಿ ಬೆಂಬಲಿಗರ ಸಂಭ್ರಮ ಮತ್ತಷ್ಟು ಹೆಚ್ಚು ಮಾಡಿದೆ.

Tags:

error: Content is protected !!