Dharwad

ಧಾರವಾಡ ಜಿಲ್ಲೆಯಲ್ಲಿ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಕುರ್ಬಾನಿ ಹೆಸರಿನಲ್ಲಿ ನಡೆಯುವ ಗೋ ಹತ್ಯೆ ತಡೆಯಲು ಆಗ್ರಹ…

Share

ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಕುರ್ಬಾನಿ ಹೆಸರಿನಲ್ಲಿ ನಡೆಯುವ ಗೋಗಳ ಹತ್ಯೆಯನ್ನು ಕಟ್ಟುನಿಟ್ಟಾಗಿ ತಡೆಯಬೇಕು ಎಂದು ಆಗ್ರಹಿಸಿ, ಧಾರವಾಡ ಹಿಂದೂ ಪರ ಹಾಗೂ ಗೋ ರಕ್ಷಕ ಸಂಘಗಳಿಂದ ಧಾರವಾಡ ಜಿಲ್ಲಾಧಿಕಾರಿಗಳಿ ಮನವಿ ಸಲ್ಲಿಸಲಾಯಿತು.

ನಗರದ ಜಿಲ್ಲಾಧಿಕಾರಿ ಕಚೇರಿ ಆಗಮಿಸಿ ವಿಶ್ವ ಹಿಂದೂ ಪರಿಷದ್, ಬಜರಂಗದಳ ಹಾಗೂ ಗೋ ರಕ್ಷಕ್ ಕರ್ನಾಟಕ ಉತ್ತರ ಪ್ರಾಂತ ಸಂಘಟನೆ ಪದಾಧಿಕಾರಿಗಳು, ಜಿಲ್ಲಾಡಳಿತ ಅಧಿಕಾರಿಗಳ ಮೂಲಕ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ರಾಜ್ಯದಲ್ಲಿ 2020 ಗೋಹತ್ಯಾ ನಿಷೇಧ ಕಾನೂನು ಜಾರಿಯಲ್ಲಿದ್ದು, ಬಕ್ರೀದ್ ಸಂದರ್ಭದಲ್ಲಿ ಕುರ್ಬಾನಿ ಹೆಸರಿನಲ್ಲಿ ಜಿಲ್ಲೆಯಲ್ಲಿ ಎಲ್ಲಿಯೂ ಗೋವುಗಳನ್ನು ವಿಧೆ ಮಾಡಬಾರದು. ನಾವು ಹಿಂದೂ ಗಳು ಗೋವಿನಲ್ಲಿ 33 ಕೋಟಿ ದೇವ ದೇವತೆಗಳನ್ನು ಕಾಣುತ್ತೇವೆ. ಕಾರಣ ಜಿಲ್ಲಾಡಳಿತವು ನಮ್ಮ ಭಾವನೆಗೆ ಧಕ್ಕೆ ಆಗದಂತೆ ನೋಡಿಕೊಳ್ಳುವುದು ಜವಾಬ್ದಾರಿಯಾಗಿದೆ. ಗೋ ಹತ್ಯೆಕೋರರ ವಿರುದ್ಧ ಕಟ್ಡಿನ ಕ್ರಮ ಕೈಗೊಳ್ಳಬೇಕು. ಮೇ 29ರವರೆಗೆ ಜಿಲ್ಲೆಯ ಎಲ್ಲಾ ಜಾನುವಾರು ಸಂತೆ ರದ್ದು ಮಾಡಬೇಕು. ಅಕ್ರಮ ಗೋವುಗಳ ಶೇಖರಣೆ, ಸಾಗಾಟ ಮಾಡದಂತೆ ತಡೆಯಬೇಕು. ಜಿಲ್ಲೆಯಲ್ಲಿ ಒಂದು ಟಾಸ್ಕ್ ಫೋರ್ಸ್ ಮಾಡಿ ಪೊಲೀಸ್ ಇಲಾಖೆ, ಸಾರಿಗೆ ಇಲಾಖೆ ಮತ್ತು ಸಂಬಂದ ಪಟ್ಟ ಎಲ್ಲರಿಗೂ ಈ ಕಾರ್ಯದಲ್ಲಿ ತೊಡಗಿಸಬೇಕು. ಅಲ್ಲಲಿ ಚೆಕ್ ಪೋಸ್ಟಗಳನ್ನು ಮಾಡುವ ಮೂಲಕ ಗೋ ಹತ್ಯೆಗೆ ಕಟ್ಟುನಿಟ್ಟಾಗಿ ತಡೆಯಬೇಕು ಎಂದು ಆಗ್ರಹಿಸಿದರು.‌ ಈ ಸಂದರ್ಭದಲ್ಲಿ ಬಜರಂಗದಳ ಪ್ರಾಂತ ಸಹ ಸಂಯೋಜಕ ಶ್ರೀ ಶಿವಾನಂದ ಸತ್ತಿಗೇರಿ, ಜಿಲ್ಲಾಧ್ಯಕ್ಷರಾದ ಶ್ರೀ ಮಹೇಶ ಪಾಟೀಲ, ಜಿಲ್ಲಾ ಕಾರ್ಯಕದರ್ಶಿ ಶ್ರೀ ಅನುದೀಪ ಕುಲಕರ್ಣಿ, ಜಿಲ್ಲಾ ಸಂಯೋಜಕ ಶ್ರೀ ಸಿದ್ದು ಹಿರೇಮಠ, ಮಂಜುನಾಥ ಶಿಗ್ಗಾವಿ, ಗುರುಶಾಂತ ಹಿರೇಮಠ, ಧ್ರುವ ಉಪ್ಪಾರ , ಉದಯ ಉಪಸ್ಥಿತರಿದ್ದರು.

Tags:

error: Content is protected !!