Dharwad

ಧಾರವಾಡದ ಕರಡಿಗುಡ್ಡದಲ್ಲಿ ಕ್ಷುಲ್ಲಕ ಕಾರಣಕ್ಕೆ ಅಣ್ಣ ಹತ್ಯೆ ಮಾಡಿದ ತಮ್ಮ….. ಧಾರವಾಡ ಗ್ರಾಮೀಣ ಪೊಲೀಸ್ ಸೇರಿ ಎಸ್ಪಿ ಸ್ಥಳಕ್ಕೆ ಭೇಟಿ

Share

• ಧಾರವಾಡದ ಕರಡಿಗುಡ್ಡದಲ್ಲಿ ಭೀಕರ ಹತ್ಯೆ!
• ಮನೆಯ ದಾರಿ ವಿಚಾರಕ್ಕೆ ರಕ್ತಚರಿತ್ರೆ!
• ಸ್ವಂತ ಅಣ್ಣನನ್ನೇ ಕೊಂದ ಪಾಪಿ ತಮ್ಮ!
• ಸ್ಥಳಕ್ಕೆ ಎಸ್ಪಿ ಗುಂಜನ್ ಆರ್ಯ ಭೇಟಿ!

ಕ್ಷುಲ್ಲಕ ಕಾರಣಕ್ಕಾಗಿ ತಮ್ಮನೋರ್ವ ಸ್ವಂತ ಅಣ್ಣನನ್ನೇ ಕೊಲೆ ಮಾಡಿರುವ ಘಟನೆ ಧಾರವಾಡ ತಾಲೂಕಿನ ಕರಡಿಗುಡ್ಡ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ, ಗ್ರಾಮಸ್ಥರನ್ನು ಬೆಚ್ಚಿ ಬೀಳುವಂತೆ ಮಾಡಿದೆ.

ಕರಡಿಗುಡ್ಡ ಗ್ರಾಮದ ಮಲ್ಲಯ್ಯ ಚಿಕ್ಕಮಠ ಎಂಬಾತನೇ ತನ್ನ ಸ್ವಂತ ತಮ್ಮ ಶ್ರೀಕಾಂತ ಚಿಕ್ಕಮಠ ಎಂಬಾತನಿಂದ ಕೊಲೆಯಾದ ದುರ್ದೈವಿಯಾಗಿದ್ದಾನೆ. ಈ ಇಬ್ಬರೂ ಒಂದೇ ಮನೆಯಲ್ಲಿ ಎರಡು ಮನೆ ಮಾಡಿಕೊಂಡು ಬೇರೆ ಬೇರೆಯಾಗಿದ್ದರು. ಮನೆಯ ದಾರಿ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರೂ ಸಹೋದರರ ಮಧ್ಯೆ ಆಗಾಗ ಜಗಳ ನಡೆಯುತ್ತಲೇ ಇತ್ತು. ಸೋಮವಾರ ಕೂಡ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಜಗಳ ತಾರಕೇರಿದ್ದು, ಇಬ್ಬರು ಅಣ್ಣ ತಮ್ಮಂದಿರು ಕೋಪದ ಕೈ ಬುದ್ದಿಕೊಟ್ಟ ಸಹೋದರ ಈಗ ಹತ್ಯೆಯಾಗಿದ್ದಾನೆ. ಅಣ್ಣ ಮಲ್ಲಯ್ಯ ಮೊದಲು ತನ್ನ ತಮ್ಮ ಶ್ರೀಕಾಂತನಿಗೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಇದರಿಂದ ರೊಚ್ಚಿಗೆದ್ದ ತಮ್ಮ ಶ್ರೀಕಾಂತ ಅದೇ ಚಾಕು ಕಸಿದುಕೊಂಡು ಅಣ್ಣ ಮಲ್ಲಯ್ಯನಿಗೆ ಇರಿದಿದ್ದಾನೆ. ಇದಾದ ಬಳಿಕ ಶ್ರೀಕಾಂತ ಪರಾರಿಯಾಗಿದ್ದಾನೆ. ತೀವ್ರವಾಗಿ ಗಾಯಗೊಂಡ ಮಲ್ಲಯ್ಯನಿಗೆ ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಕಿಮ್ಸ್‌ಗೆ ರವಾನಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದ ಮಲ್ಲಯ್ಯ ಕಿಮ್ಸ್‌ನಲ್ಲಿ ಸಾವನ್ನಪ್ಪಿದ್ದಾನೆ. ಕರಡಿಗುಡ್ಡ ಗ್ರಾಮದ ಮನೆಯಲ್ಲಿ ನಡೆದ ಈ ಘಟನೆ ಸಂಬಂಧ ಮಾಹಿತಿ ಪಡೆಯಲು ಸ್ವತಃ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಅವರೇ ಚಿಕ್ಕಮಠ ಅವರ ಮನೆಗೆ ಭೇಟಿ ನೀಡಿದ್ದರು. ಧಾರವಾಡ ಗ್ರಾಮೀಣ ಠಾಣೆ ಸಿಪಿಐ ಎಸ್.ಎಸ್.ಕಮತಗಿ ಕೂಡ ಭೇಟಿ ನೀಡಿ ದೂರು ದಾಖಲಿಸಿಕೊಂಡಿದ್ದಾರೆ.

Tags:

error: Content is protected !!