Dharwad

ವಿದ್ಯಾರ್ಥಿಗಳ ಕಡಿಮೆ ದಾಖಲಾತಿ ಹೆಸರಲ್ಲಿ ಸರ್ಕಾರಿ ಶಾಲೆ ಮುಚ್ಚುವ ಧಾರವಾಡ ZP ನಡೆ ಖಂಡಿಸಿ ಪ್ರತಿಭಟನೆ…. ಧಾರವಾಡ ಜಿ.ಪಂ. ಮುಂಭಾಗದಲ್ಲಿ ಎಐಡಿಎಸ್‌ಓ ಆಕ್ರೋಶ

Share

ಸರ್ಕಾರಿ ಶಾಲೆಗಳ ವಿಲೀನಕ್ಕೆ ತೀವ್ರ ವಿರೋಧ

ಧಾರವಾಡ ಜಿ.ಪಂ. ಮುಂಭಾಗ ಎಐಡಿಎಸ್‌ಓ ಆಕ್ರೋಶ

ಬಡ ಮಕ್ಕಳ ಶಿಕ್ಷಣ ಕಸಿದುಕೊಳ್ಳದಂತೆ ಆಗ್ರಹ

ನಿರ್ಧಾರ ಕೈಬಿಡದಿದ್ದರೆ ರಾಜ್ಯಾದ್ಯಂತ ತೀವ್ರ ಹೋರಾಟ

ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕಡಿಮೆ ದಾಖಲಾತಿ ಮುಂದಿಟ್ಟುಕೊಂಡು ಮುಚ್ಚಲು ಹೊರಟ್ಟಿರುವ ಧಾರವಾಡ ಜಿಲ್ಲಾ ಪಂಚಾಯತಿ ನಿರ್ಧಾರ ಖಂಡಿಸಿ ಹಾಗೂ ಸರ್ಕಾರಿ ಶಾಕೆ ಮುಚ್ಚವ ನಿರ್ಧಾರದಿಂದ ಹಿಂದೆ ಸರಿಯುವಂತೆ ಆಗ್ರಹಿಸಿ, ಧಾರವಾಡದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಲಾಯಿತು. ‌

V- AIDSO ಸಂಘಟನೆ ನೇತೃತ್ವದಲ್ಲಿ ನಗರದ ಜಿಲ್ಲಾ ಪಂಚಾಯತ್ ಮುಂಭಾಗದಲ್ಲಿ ಸಂಘಟನೆ ಪದಾಧಿಕಾರಿಗಳು ಸೇರಿ ವಿದ್ಯಾರ್ಥಿಗಳ ಪೋಷಕರು ಪ್ರತಿಭಟನೆ ಮಾಡುವ ಮೂಲಕ ಜಿಲ್ಲಾ ಪಂಚಾಯತಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇತ್ತೀಚಿಗೆ ನಡೆದ ಧಾರವಾಡ ಜಿಲ್ಲಾ ಪಂಚಾಯತ್ ಸಭೆಯಲ್ಲಿ, ಒಂದು ತರಗತಿಗೆ 25 ಕ್ಕಿಂತ ಕಡಿಮೆ ದಾಖಲಾತಿ ಹೊಂದಿರುವ ಸರ್ಕಾರಿ ಶಾಲೆಗಳನ್ನು ವಿಲೀನದ ಹೆಸರಿನಲ್ಲಿ ಮುಚ್ಚುವ ತೀರ್ಮಾನವನ್ನು ಕೈಗೊಳ್ಳಲಾಗಿದೆ, ಇದೂ ಸರಿಯಲ್ಲ. ಬಡ ಜನರ ಪಾಲಿಗೆ ಗ್ರಾಮೀಣ ಕ್ಷೇತ್ರದಲ್ಲಿ ಸರ್ಕಾರಿ ಶಾಲೆಗಳನ್ನು ಜನರ ವಿದ್ಯಾ ಕೇಂದ್ರವನ್ನಾಗಿ ನೋಡುತ್ತಿದ್ದಾರೆ. “ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯಗಳು, ಶಿಕ್ಷಕರ ನೇಮಕಾತಿ ಮಾಡಿಕೊಂಡು ಅಭಿವೃದ್ಧಿಪಡಿಸಬೇಕಾದ ಸರ್ಕಾರ, ಕಡಿಮೆ ದಾಖಲಾತಿಯ ನೆಪವಡ್ಡಿ ಸರಕಾರಿ ಶಾಲೆಗಳನ್ನು ಮುಚ್ಚಲು ಹೊರಟಿರುವುದು ಅತ್ಯಂತ ವಿಷಾದನೀಯ. ಧಾರವಾಡವು ಬೇಂದ್ರೆ ಸೇರಿದಂತೆ ಅನೇಕ ಸಾಹಿತಿಗಳು ಹುಟ್ಟಿರುವ ನೆಲ. ಇಂತಹ ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವುದನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ಹಿಂದೆ ಬಿಜೆಪಿ ಮತ್ತು ಈಗ ಕಾಂಗ್ರೆಸ್ ಸರ್ಕಾರವು ಶಾಲೆ ಮುಚ್ಚುತ್ತಿವೆ. ಬಂಡವಾಳಶಾಹಿಗಳ ಹಿತಾಸಕ್ತಿಯಿಂದ ಸರ್ಕಾರವು ಶಾಲೆ ಮುಚ್ಚಿ ಶಿಕ್ಷಣವನ್ನು ಸಂಪೂರ್ಣ ವ್ಯಾಪಾರೀಕರಣ ಮಾಡಲು ಹೊರಟಿದೆ” ಎಂದು ಸರ್ಕಾರ ಸೇರಿ ಧಾರವಾಡ ಜಿಲ್ಲಾ ಪಂಚಾಯತ್ ನಡೆಯನ್ನು ಯೃವ್ರವಾಗಿ ಖಂಡಿಸಿದರು. ಈ ಕೂಡಲೇ ಸರ್ಕಾರ ಹಾಗೂ ಧಾರವಾಡ ಜಿಲ್ಲಾ ಪಂಚಾಯತಿ ಸರ್ಕಾರಿ ಶಾಲೆಗಳನ್ನು ವಿಲೀನ ಮಾಡೂವ ಮೂಲಕ ಶಾಲೆ ಮುಚ್ಚಲು ಹೊರಡ್ಡಿರುವುದನ್ನು ಕೈ ಬೀಡಬೇಕು, ಇಲ್ಲವಾದಲ್ಲಿ ನಮ್ಮ ಹೋರಾಟ ರಾಜ್ಯ ವ್ಯಾಪಿ ವಿಸ್ತರಣೆ ಮಾಡುವುದಾಗಿ ಖಡಕ್ ಎಚ್ಚರಿಕೆ ನೀಡಿದರು.

Tags:

error: Content is protected !!