Bagalkot

ಜಮಖಂಡಿಯಲ್ಲಿ ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ

Share

ಬಾಗಲಕೋಟೆ ಜಿಲ್ಲೆಯ ಜಮಖಂಡಿಯಿಂದ ಒಂದು ಪ್ರಮುಖ ಬ್ರೇಕಿಂಗ್ ಸುದ್ದಿ ಬರುತ್ತಿದೆ. ಜಮಖಂಡಿ ನಗರದಲ್ಲಿ ಬಿಜೆಪಿ ಕಾರ್ಯಕರ್ತರ ನಡುವೆಯೇ ಭೀಕರ ಮಾರಾಮಾರಿ ನಡೆದಿದೆ. ಆದರೆ ಘಟನೆ ನಡೆದು ಹನ್ನೆರಡು ಗಂಟೆಗಳು ಕಳೆದರೂ ಪೊಲೀಸರು ಮಾತ್ರ ಯಾವುದೇ ಮಾಹಿತಿ ನೀಡದೆ ನಿಗೂಢತೆ ಕಾಯ್ದುಕೊಂಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದಲ್ಲಿ ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದ್ದು, ಘಟನೆ ನಡೆದು 12 ಗಂಟೆ ಕಳೆದರೂ ಪೊಲೀಸರು ಮಾಹಿತಿ ನೀಡದೆ ದಿವ್ಯ ಮೌನ ವಹಿಸಿರುವುದು ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಗಲಾಟೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದರೂ, ಸ್ಥಳೀಯ ಜಮಖಂಡಿ ಡಿವೈಎಸ್ಪಿ ಹಾಗೂ ಸಿಪಿಐ ಅವರಿಗೆ ಫೋನ್ ಮಾಡಿದರೂ ಯಾವುದೇ ಸ್ಪಷ್ಟ ಮಾಹಿತಿ ಒದಗಿಸುತ್ತಿಲ್ಲ. ಈ ಕುರಿತು ಬಾಗಲಕೋಟೆ ಎಸ್ಪಿ ಸಿದ್ದಾರ್ಥ್ ಗೋಯಲ್ ಅವರನ್ನು ಸಂಪರ್ಕಿಸಿದರೆ, ಎಫ್‌ಐಆರ್ ದಾಖಲಾಗದೆ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಜಾರಿಕೊಂಡಿದ್ದಾರೆ. ವಿಡಿಯೋ ಆಧಾರದ ಮೇಲೆ ಸುಮೋಟೋ ಕೇಸ್ ದಾಖಲಿಸಲು ಅವಕಾಶವಿದ್ದರೂ ಪೊಲೀಸರು ದೂರು ದಾಖಲಾಗುವವರೆಗೆ ಕಾಯುತ್ತಿರುವುದು, ಸ್ಥಳೀಯ ಬಿಜೆಪಿ ಶಾಸಕರೊಂದಿಗೆ ಪೊಲೀಸರು ಹೊಂದಾಣಿಕೆ ಮಾಡಿಕೊಂಡಿದ್ದಾರೆಯೇ ಎಂಬ ಅನುಮಾನವನ್ನು ದಟ್ಟವಾಗಿಸಿದೆ.

Tags:

error: Content is protected !!