BELAGAVI

ಬೆಳಗಾವಿಯ ಪ್ರತಿಷ್ಠಿತ ‘ರಾಣಿ ಚೆನ್ನಮ್ಮ ಕಾಲೇಜಿನಲ್ಲಿ’ ಪ್ರವೇಶಾತಿ ಆರಂಭ

Share

ಬೆಳಗಾವಿಯ ಕೆ.ಆರ್.ಇ ಟ್ರಸ್ಟ್’ನ ಪ್ರತಿಷ್ಠಿತ ರಾಣಿ ಚೆನ್ನಮ್ಮ ಕಾಲೇಜಿನಲ್ಲಿ ಪ್ರಸಕ್ತ ಸಾಲಿನ ಪ್ರವೇಶಾತಿ ಪ್ರಕ್ರಿಯೆ ಅಧಿಕೃತವಾಗಿ ಆರಂಭಗೊಂಡಿದೆ. ಮಾಹಿತಿ ತಂತ್ರಜ್ಞಾನ (IT) ಕ್ಷೇತ್ರದಲ್ಲಿ ಅದ್ಭುತ ಕೆರಿಯರ್ ರೂಪಿಸಿಕೊಳ್ಳಲು ಬಯಸುವ ವಿದ್ಯಾರ್ಥಿಗಳಿಗಾಗಿ *ಈ ವರ್ಷದಿಂದಲೇ ನೂತನವಾಗಿ ಬಿಸಿಎ ಕೋರ್ಸ್ ಅನ್ನು ಆರಂಭಿಸಲಾಗಿದ್ದು, ಇದರೊಂದಿಗೆ ಅತ್ಯುನ್ನತ ಔಷಧೀಯ ಶಿಕ್ಷಣ ನೀಡುತ್ತಿರುವ ಡಿ.ಫಾರ್ಮಸಿ, ಬಿ.ಫಾರ್ಮಸಿ ಹಾಗೂ ಎಂ.ಫಾರ್ಮಸಿ ಕೋರ್ಸ್‌ಗಳಿಗೂ ಅಡ್ಮಿಷನ್ ಓಪನ್ ಆಗಿದೆ. ಭಾರತೀಯ ಫಾರ್ಮಸಿ ಕೌನ್ಸಿಲ್ ಸೇರಿದಂತೆ ಶೈಕ್ಷಣಿಕ ಮಂಡಳಿಗಳ ಅಧಿಕೃತ ಅನುಮೋದನೆ ಪಡೆದಿರುವ ಈ ಸಂಸ್ಥೆಯು ಬೆಳಗಾವಿಯಲ್ಲಿ ಶಿಕ್ಷಣ ಕ್ರಾಂತಿ ಸೃಷ್ಟಿಸುತ್ತಿದೆ.

ಕರ್ನಾಟಕ ರೂರಲ್ ಎಜುಕೇಷನಲ್ ಟ್ರಸ್ಟ್ ಅಡಿಯಲ್ಲಿ 2001 ರಲ್ಲಿ ಸ್ಥಾಪನೆಯಾದ ಪ್ರತಿಷ್ಠಿತ ರಾಣಿ ಚೆನ್ನಮ್ಮ ಕಾಲೇಜು ಇಂದು ಶೈಕ್ಷಣಿಕ, ಸಂಶೋಧನೆ ಹಾಗೂ ಸಮುದಾಯ ಸೇವೆಯಲ್ಲಿ ಅತ್ಯುನ್ನತ ಸಂಸ್ಥೆಯಾಗಿ ಹೊರಹೊಮ್ಮಿದೆ. ಆರಂಭದಲ್ಲಿ ಡಿ.ಫಾರ್ಮಾ ಕೋರ್ಸ್‌ನೊಂದಿಗೆ ಆರಂಭವಾದ ಈ ಸಂಸ್ಥೆಯು, ಪ್ರಸ್ತುತ ಬಿ.ಫಾರ್ಮಾ ಹಾಗೂ ಫಾರ್ಮಸ್ಯುಟಿಕ್ಸ್, ಫಾರ್ಮಕಾಲಜಿ ಮತ್ತು ಇತ್ತೀಚಿನ ಕ್ವಾಲಿಟಿ ಅಶ್ಯುರೆನ್ಸ್ ವಿಷಯಗಳಲ್ಲಿ ಎಂ.ಫಾರ್ಮಾ ಸ್ನಾತಕೋತ್ತರ ಕೋರ್ಸ್‌ಗಳನ್ನು ಯಶಸ್ವಿಯಾಗಿ ನಡೆಸುತ್ತಾ ಬಂದಿದೆ. ಇದಕ್ಕೆ ಪೂರಕವಾಗಿ *ಪ್ರಸಕ್ತ ಸಾಲಿನಿಂದ ಐಟಿ ಉದ್ಯೋಗದ ಕನಸು ಹೊತ್ತವರಿಗಾಗಿ ಬಿಸಿಎ (BCA) ಕೋರ್ಸ್ ಅನ್ನೂ ಸಹ ಜೋಡಿಸಲಾಗಿದೆ

ಈ ಸಂಸ್ಥೆಯು ಭಾರತೀಯ ಫಾರ್ಮಸಿ ಕೌನ್ಸಿಲ್ (PCI) ಅನುಮೋದನೆ, ಕರ್ನಾಟಕ ಸರ್ಕಾರ ಹಾಗೂ ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ (RGUHS) ಸಂಯೋಜನೆ ಪಡೆದುಕೊಂಡಿದೆ. ಈ ಸಂಸ್ಥೆಯಲ್ಲಿ ಪ್ರಸ್ತುತ 600 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದು, ಅವರಿಗೆ 38 ನಿಪುಣ ಬೋಧಕ ಸಿಬ್ಬಂದಿ ಮಾರ್ಗದರ್ಶನ ನೀಡುತ್ತಿದ್ದಾರೆ. ವಿಶ್ವವಿದ್ಯಾಲಯದ ಅತ್ಯುತ್ತಮ ಫಲಿತಾಂಶಗಳು, GPAT ಮತ್ತು GATE ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳ ಸಾಧನೆ, ಸಂಶೋಧನಾ ಪ್ರಬಂಧಗಳು, ಪೇಟೆಂಟ್‌ಗಳು, ಧನಸಹಾಯ ಪಡೆದ ಯೋಜನೆಗಳು ಹಾಗೂ ಕ್ರೀಡೆ ಮತ್ತು ಶೈಕ್ಷಣಿಕ ಚಟುವಟಿಕೆಗಳಲ್ಲಿ ಕಾಲೇಜು ನಿರಂತರ ಮುಂಚೂಣಿಯಲ್ಲಿದೆ.

ಈಗಾಗಲೇ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ 2 ವರ್ಷದ ಡಿ ಫಾರ್ಮಸಿ, 4 ವರ್ಷದ ಬಿ. ಫಾರ್ಮಸಿಗೆ ಪ್ರವೇಶಾತಿಗಳು ಆರಂಭಗೊಂಡಿವೆ. ಅಲ್ಲದೇ ಬಿ. ಫಾರ್ಮಸಿ ಉತ್ತೀರ್ಣರಿಗೆ ಎಂ. ಫಾರ್ಮಸಿಗೆ ಪ್ರವೇಶಾತಿ ಸಿಗಲಿದ್ದು, ಡಿಪ್ಲೋಮಾ ವಿದ್ಯಾರ್ಥಿಗಳಿಗೆ ನೇರವಾಗಿ 2ನೇ ವರ್ಷಕ್ಕೆ ಪ್ರವೇಶಾತಿ ಸಿಗಲಿದೆ. ಇದರೊಂದಿಗೆ ಯಾವುದೇ ಪಿಯುಸಿ (ವಿಜ್ಞಾನ/ಕಲಾ/ವಾಣಿಜ್ಯ) ಮುಗಿಸಿದ ವಿದ್ಯಾರ್ಥಿಗಳಿಗೆ ಐಟಿ ಕ್ಷೇತ್ರದಲ್ಲಿ ಭವಿಷ್ಯ ಕಂಡುಕೊಳ್ಳಲು ಹೊಸ ಬಿಸಿಎ ಕೋರ್ಸ್ ಲಭ್ಯವಿದೆ. ಸುಸಜ್ಜ ಗ್ರೀನರಿ ಕ್ಯಾಂಪಸ್ ನಿರ್ಮಿಸಿದ್ದು, ಸುಸಜ್ಜಿತ ಕಂಪ್ಯೂಟರ್ ಮತ್ತು ಸೈನ್ಸ್ ಪ್ರಯೋಗಾಲಯ, ಆಧುನಿಕ ಉಪಕರಣ ಮತ್ತು ನುರಿತ ಉಪನ್ಯಾಸಕರನ್ನು ಮಹಾವಿದ್ಯಾಲಯವು ಹೊಂದಿದೆ ಎಂದು ಕಾಲೇಜಿನ ಪ್ರಾಚಾರ್ಯರಾದ ಡಾ. ಎಸ್.局. ವಸಂತರಾಜು ಅವರು ಇನ್ ನ್ಯೂಸ್’ಗೆ ತಿಳಿಸಿದರು.

ಇನ್ನು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಜ್ಞಾನ ನೀಡಲು ಕಾರ್ಯಾಗಾರಗಳು, ಕೈಗಾರಿಕಾ ಭೇಟಿಗಳು, ಸೆಮಿನಾರ್‌ಗಳು ಮತ್ತು ಸಾಮಾಜಿಕ ಜವಾಬ್ದಾರಿಯ ಅಂಗವಾಗಿ ಸಮುದಾಯ ತಲುಪುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ವಿಶೇಷವಾಗಿ 2015 ರಿಂದ ಜಾರಿಯಲ್ಲಿರುವ “ಅಕ್ಷಯ ಪಾತ್ರ – ಅರ್ನ್ ವೈಲ್ ಯೂ ಲರ್ನ್” (ಗಳಿಸುತ್ತಾ ಕಲಿಯಿರಿ) ವಿದ್ಯಾರ್ಥಿವೇತನ ಯೋಜನೆಯಡಿ ವಿದ್ಯಾರ್ಥಿಗಳಿಗೆ ಹಣಕಾಸು ಮತ್ತು ಹೂಡಿಕೆ ಅಭ್ಯಾಸಗಳ ಜ್ಞಾನದ ಜೊತೆಗೆ ಆರ್ಥಿಕ ನೆರವು ನೀಡಲಾಗುತ್ತಿದ್ದು, 2024-25 ನೇ ಸಾಲಿನಲ್ಲಿ ಒಂದೇ ವರ್ಷದಲ್ಲಿ ಬರೋಬ್ಬರಿ 14.3 ಲಕ್ಷ ರೂ. ಮೌಲ್ಯದ ವಿದ್ಯಾರ್ಥಿವೇತನವನ್ನು ಅರ್ಹ ವಿದ್ಯಾರ್ಥಿಗಳಿಗೆ ವಿತರಿಸಲಾಗಿದೆ.

ನುರಿತರಿಂದ ಮಾರ್ಗದರ್ಶನ, ಶಿಕ್ಷಣಕ್ಕೆ ಪೂರಕವಾದ ವಾತಾವರಣವೂ ಪರಿಣಾಮಕಾರಿ ಶಿಕ್ಷಣವನ್ನು ಪಡೆಯಲೂ ಸಹಾಯಕವಾಗಿದೆ. ಈ ಮಹಾವಿದ್ಯಾಲಯದಲ್ಲಿ ಪ್ರವೇಶಾತಿಯನ್ನು ಪಡೆದಿದ್ದು ಸಂತಸವನ್ನು ತಂದಿದೆ ಎಂದು ಇನ್ನೋರ್ವ ವಿದ್ಯಾರ್ಥಿನಿ ಹೇಳಿದರು.ಶಿಕ್ಷಣವನ್ನು ಪಡೆಯಲೂ ಬೇಕಾದ ಅವಶ್ಯಕ ವಸ್ತುಗಳು ಮತ್ತು ಸುಸಜ್ಜಿತ ಪ್ರಯೋಗಾಲಯ ಇಲ್ಲಿದ್ದು, ಇಲ್ಲಿರುವ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಮನದಟ್ಟಾಗುವಂತೆ ತರಬೇತಿಯನ್ನು ನೀಡುತ್ತಾರೆ ಎಂದು ವಿದ್ಯಾರ್ಥಿನಿಯೋರ್ವಳು ತಿಳಿಸಿದಳು.

Tags:

error: Content is protected !!