-ಖಾನಾಪೂರದ ಮಾಜಿ ಶಾಸಕಿ ಹಾಗೂ ಎಐಸಿಸಿ ಕಾರ್ಯದರ್ಶಿಗಳಾದ *ಡಾ. ಅಂಜಲಿತಾಯಿ ಹೇಮಂತ ನಿಂಬಾಳ್ಕರ್* ಅವರ ಸೂಚನೆಯ ಮೇರೆಗೆ ಈ ಸಂದೇಶವನ್ನು ಎಲ್ಲರಿಗೂ ಕಳುಹಿಸಲಾಗುತ್ತಿದೆ.
ಖಾನಾಪೂರ ತಾಲೂಕು ಬ್ಲಾಕ್ ಕಾಂಗ್ರೆಸ್ ವತಿಯಿಂದ ಎಲ್ಲಾ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು, ಮಹಿಳೆಯರು ಹಾಗೂ ಯುವಕರಿಗೆ ವಿನಂತಿಸುವುದೇನೆಂದರೆ, ಜಿ.ಪಂ. ಮತ್ತು ತಾ.ಪಂ. ಚುನಾವಣೆಗೆ ಸ್ಪರ್ಧಿಸಲು ಆಸಕ್ತಿ ಹೊಂದಿರುವವರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.
ಅರ್ಜಿಯಲ್ಲಿ ಈ ಕೆಳಗಿನ ಮಾಹಿತಿಯನ್ನು ನೀಡಬೇಕಾಗಿದೆ:
– ಆಕಾಂಕ್ಷಿ ಅಭ್ಯರ್ಥಿಯ ಹೆಸರು, ವಿಳಾಸ ಮತ್ತು ಮೊಬೈಲ್ ಸಂಖ್ಯೆ.
– ಸ್ಪರ್ಧಿಸಲು ಇಚ್ಛಿಸುವ ಜಿ.ಪಂ. / ತಾ.ಪಂ. ಕ್ಷೇತ್ರದ ಹೆಸರು.
– ತಮ್ಮ ಸಂಕ್ಷಿಪ್ತ ಪರಿಚಯ ಹಾಗೂ ಬಯೋಡೇಟಾವನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು.
ಎಲ್ಲಾ ಅರ್ಜಿಗಳನ್ನು ಆಸಕ್ತ ಅಭ್ಯರ್ಥಿಗಳು *8 ದಿನಗಳೊಳಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ* ಸಲ್ಲಿಸಬೇಕೆಂದು ತಿಳಿಸಲಾಗಿದೆ
ಅಲ್ತಾಫ್ ಎಂ ಬಸರೀಕಟ್ಟಿ
ಇನ್ ನ್ಯೂಸ್ ಖಾನಾಪೂರ
