ಧಾರವಾಡದ ಪ್ರಮುಖ ರಸ್ತೆಗಳಲ್ಲಿ ನಿತ್ಯ ಉಂಟಾಗುತ್ತಿರುವ ವಾಹನ ದಟ್ಟಣೆ ಹಾಗೂ ಸಾರ್ವಜನಿಕರು ಎದುರಿಸುತ್ತಿರುವ ತೊಂದರೆಗಳನ್ನು ಪರಿಶೀಲಿಸಲು, ಸ್ವತಃ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಭೂಷಣ್ ಜಿ. ಭೊರಸೆ ಅವರೇ ಫೀಲ್ಡ್‌ಗೆ ಇಳಿದು ವೀಕ್ಷಣೆ ನಡೆಸಿದ್ದಾರೆ.
ಧಾರವಾಡದ ಬಾಗಲಕೋಟೆ ಪೆಟ್ರೋಲ್ ಬಂಕ್ ಹಾಗೂ ವಿದ್ಯಾಗಿರಿಯ ಜೆಎಸ್‌ಎಸ್ ಕಾಲೇಜು ಬಳಿ ಇರುವ ಸಿಗ್ನಲ್‌ಗಳನ್ನು ಪರಿಶೀಲಿಸಿ, ಅಲ್ಲಿನ ಸಾರ್ವಜನಿಕರೊಂದಿಗೆ ಪೊಲೀಸ್ ಆಯುಕ್ತರು ಸಮಾಲೋಚನೆ ನಡೆಸಿದರು. ಎಲ್ಲೆಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿದೆ? ವಾಹನ ಸವಾರರು ಸಂಚಾರ ನಿಯಮಗಳನ್ನು ಪಾಲಿಸುತ್ತಿದ್ದಾರೆಯೇ? ಹಾಗೂ ಎಲ್ಲೆಲ್ಲಿ ಸಿಗ್ನಲ್‌ಗಳು ಕೈಕೊಟ್ಟಿವೆ? ಎಂಬುದರ ಕುರಿತಾಗಿ ಪೊಲೀಸ್ ಅಧಿಕಾರಿಗಳಿಂದಲೂ ಪೊಲೀಸ್ ಆಯುಕ್ತರು ಮಾಹಿತಿ ಪಡೆದುಕೊಂಡರು.
