Dharwad

ನವಲಗುಂದದ ಅಮರಗೋಳ ಬಳಿ ಕಾರ್ ಹಾಗೂ ಲಾರಿ ನಡುವೆ ನಡೆದ ಭೀಕರ ಅಪಘಾತ,ನಾಲ್ವರು ಸಾವು!!!

Share

ನವಲಗುಂದ: ಸ್ವಿಫ್ಟ್ ಕಾರ್ ಹಾಗೂ ಕ್ಯಾಂಟರ್ ಲಾರಿ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಧಾರುಣವಾಗಿ ಸಾವನಪ್ಪಿರುವ ಘಟನೆ ನವಲಗುಂದದ ಅಮರಗೋಳ ಬಳಿ ನಡೆದಿದೆ.

ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕಿನ ಅಮರಗೋಳ ಗ್ರಾಮದ ಬಳಿ ಈ ದುರ್ಘಟನೆ ಸಂಭವಿಸಿದೆ. ಅಜೀತ್, ರಾಕೇಶ್, ಸಂದೀಪ್, ಮತ್ತು ಶೃತಿ ಸಾವನ್ನಪ್ಪಿದ ದುರ್ದೈವಿಗಳೆಂದು ಗುರುತಿಸಲಾಗಿದೆ. ಹುಬ್ಬಳ್ಳಿ ಕಡೆಯಿಂದ ಬರುತಿದ್ದ ಕಾರು ಎದುರಿಗೆ ಬರುತ್ತಿದ್ದ ಕ್ಯಾಂಟರ್ ವಾಹನ ಸಭಸವಾಗಿ ಎರಡು ವಾಹನಗಳು ಡಿಕ್ಕಿಯಾಗಿವೆ.‌ ಸ್ಥಳೀಯರ ಮಾಹಿತಿ ಮೇರೆಗೆ ಘಟನಾ ಸ್ಥಳಕ್ಕೆ ನವಲಗುಂದ ಠಾಣೆಯ ಪೊಲೀಸರು ಭೇಡಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ. ಈ ಕುರಿತು ನವಲಗುಂದ ಪೊಲೀಸ್ ಠಾಣೆ ಯಲ್ಲಿ ಪ್ರಲರಣ ದಾಖಲಾಗಿದೆ.

Tags:

error: Content is protected !!