Dharwad

ಧಾರವಾಡ: ಪಂಪ್ ಹೌಸ್ ಟ್ಯಾಂಕ್‌ಗೆ ಬಿದ್ದ ಹಸು – ಅಗ್ನಿಶಾಮಕ ಸಿಬ್ಬಂದಿಯಿಂದ ಜಾನುವಾರು ರಕ್ಷಣೆ

Share

ಧಾರವಾಡ ವನಶ್ರೀನಗರದಲ್ಲಿ ಪಂಪ್ ಹೌಸ್‌ಗೆ ಬಿದ್ದ ಹಸು: ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ – ಸ್ಥಳೀಯರ ಸಹಕಾರದಿಂದ ಹಸುವನ್ನು ಸುರಕ್ಷಿತವಾಗಿ ಮೇಲೆತ್ತಿದ ಅಗ್ನಿಶಾಮಕ ಸಿಬ್ಬಂದಿ.

ಆ್ಯಂಕರ್: ನಿರ್ಮಾಣ ಹಂತದ ಕಟ್ಟಡದ ಪಂಪ್ ಹೌಸ್ ಟ್ಯಾಂಕ್‌ಗೆ ಹಸವೊಂದು ಬಿದ್ದು ಒದ್ದಾಡುತ್ತಿರುವುದನ್ನು ನೋಡಿದ ಸಾರ್ವಜನಿಕರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಸ್ಥಳಕ್ಕೆ ತೆರಳಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಸುವನ್ನು ಸುರಕ್ಷಿತವಾಗಿ ಮೇಲೆತ್ತಿರುವ ಘಟನೆ ಧಾರವಾಡದ ವನಶ್ರೀನಗರದಲ್ಲಿ ನಡೆದಿದೆ.

ಧಾರವಾಡದ ವನಶ್ರೀನಗರದಲ್ಲಿನ ನಿರ್ಮಾಣ ಹಂತದ ಕಟ್ಟಡದ ಪಂಪ್ ಹೌಸ್‌ಗೆ ಹಸು ಬಿದ್ದಿತ್ತು. ಹಸುವಿನ ಕಿರುಚಾಟ ಗಮನಿಸಿದ ಸ್ಥಳೀಯರು ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ಸ್ಥಳೀಯರ ಸಹಕಾರದೊಂದಿಗೆ ಟ್ಯಾಂಕ್‌ನಲ್ಲಿ ಬಿದ್ದಿದ್ದ ಹಸುವನ್ನು ಅರ್ಧ ಗಂಟೆಯ ಸುದೀರ್ಘ ಕಾರ್ಯಾಚರಣೆ ನಡೆಸಿ, ಕೊನೆಗೆ ಹಸುವಿಗೆ ಯಾವುದೇ ಗಾಯಗಳಾಗದಂತೆ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಧಾರವಾಡ ಅಗ್ನಿಶಾಮಕ ದಳದ ಸಿಬ್ಬಂದಿಯ ತುರ್ತು ಕರೆ ಸ್ಪಂದನೆ ಹಾಗೂ ಮೂಕ ಜಾನುವಾರಿನ ರಕ್ಷಣಾ ಕಾರ್ಯಾಚರಣೆಗೆ ಸ್ಥಳೀಯರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Tags:

error: Content is protected !!