Dharwad

*ಎಫ್.ಎ.ಕ್ಯೂ ಗುಣಮಟ್ಟದ ಸೋಯಾಬೀನ ಮತ್ತು ಹೆಸರುಕಾಳು ಉತ್ಪನ್ನ ಖರೀದಿ ಆರಂಭ: ಜಿಲ್ಲಾಧಿಕಾರಿ ಸ್ನೇಹಲ್ ಆರ್.*

Share

ಧಾರವಾಡ : 2026-27 ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ. ಗುಣಮಟ್ಟದ ಸೋಯಾಬೀನ ಉತ್ಪನ್ನವನ್ನು ಪ್ರತಿ ಕ್ವಿಂಟಾಲ್‍ಗೆ ರೂ.5,708 ರಂತೆ ಮತ್ತು ಹೆಸರುಕಾಳು ಉತ್ಪನ್ನಗಳನ್ನು ಪ್ರತಿ ಕ್ವಿಂಟಾಲ್‍ಗೆ ರೂ.8,780 ರಂತೆ ಖರೀದಿಸಲು ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದೆ ಎಂದು ಜಿಲ್ಲಾ ಟಾಸ್ಕ ಪೋರ್ಸ ಸಮಿತಿ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ಸ್ನೇಹಲ್ ಅವರು ತಿಳಿಸಿದ್ದಾರೆ.

 

ಈ ಕುರಿತು ಪ್ರಕಟಣೆ ನೀಡಿರುವ ಅವರು, ಬೆಂಬಲ ಬೆಲೆಯೋಜನೆಯಡಿ ಎಫ್.ಎ.ಕ್ಯೂ. ಗುಣಮಟ್ಟದ ಸೋಯಾಬೀನ ಉತ್ಪನ್ನವನ್ನು ಹಾಗೂ ಹೆಸರುಕಾಳು ಉತ್ಪನ್ನಗಳ ಮಾರಾಟಕ್ಕಾಗಿ ರೈತರಿಗೆ ನೋಂದಣಿ ಮಾಡಿಕೊಳ್ಳಲು ಅಕ್ಟೋಬರ್ 01, 2026 ರಿಂದ ಡಿಸೆಂಬರ್ 19, 2026 ರ (80 ದಿನಗಳ) ವರೆಗೆ ಹಾಗೂ ಧಾರವಾಡ ಜಿಲ್ಲೆಯ ನೋಂದಾಯಿತ ರೈತರಿಂದ ಮಾತ್ರ ಅಕ್ಟೋಬರ್ 01, 2026 ರಿಂದ ಡಿಸೆಂಬರ್ 29, 2026 ರ (90 ದಿನಗಳ) ಖರೀದಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

 

ಸೋಯಾಬೀನ್ ಖರೀದಿ ಕೇಂದ್ರಗಳ ವಿವರ: ಧಾರವಾಡ ತಾಲೂಕಿನಲ್ಲಿ ಧಾರವಾಡದ ಎ.ಪಿ.ಎಮ್.ಸಿ, ಶಿರೂರು ಓ.ಜಿ.ಸಿ.ಎಸ್ (ದೂ. ಸಂ:9611498476) ಮತ್ತು ಉಪ್ಪಿನಬೇಟಗೇರಿಯ ಪಿ.ಕೆ.ಪಿ.ಎಸ್ (ದೂ.ಸಂ:9620048221), ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿ ಓ.ಜಿ.ಸಿ.ಎಸ್ (ದೂ.ಸಂ: 953869718) ಮತ್ತು ನೂಲ್ವಿಯ ಪಿ.ಕೆ.ಪಿ.ಎಸ್ (ದೂ. ಸಂ:9743836535), ಹಳೇ ಹುಬ್ಬಳ್ಳಿ (ದೂ. ಸಂ: 9448424876),

ಕಲಘಟಗಿ ತಾಲೂಕಿನಲ್ಲಿ ಕಲಘಟಗಿಯ ಟಿ.ಎ.ಪಿ.ಸಿ.ಎಮ್.ಎಸ್ (ದೂ.ಸಂ: 8722006738), ಮುತ್ತಗಿಯ ಹುಲ್ಲಂಬಿ ಕೃಷಿ ಜ್ಯೋತಿ ಎಫ್.ಪಿ.ಓ (ದೂ.ಸಂ:7676236737), ಹಿರೇಹೊನ್ನಳ್ಳಿಯ ಚನ್ನಬಸವೇಶ್ವರ ಎಫ್.ಪಿ.ಓ (ದೂ.ಸಂ:9591329847), ಕಲಘಟಗಿಯ ಎಫ್.ಪಿ.ಒ (ದೂ.ಸಂ:7411512064) ಹಾಗೂ ಕುಂದಗೋಳ ತಾಲೂಕಿನಲ್ಲಿ ಕಳಸದ ಓ.ಜಿ.ಎಸ್.ಸಿ.ಎಸ್ (ದೂ. ಸಂ: 8123472931), ಯಲಿವಾಳ (ದೂ.ಸಂ:9945163891), ಸಂಶಿಯ ಕುಂದಗೋಳ ರೈತ ಉತ್ಪಾದಕರ ಕಂಪನಿ (ದೂ. ಸಂ:7411512065), ಕಮಡೊಳ್ಳಿಯ ಓ.ಜಿ.ಸಿ.ಎಸ್ (ದೂ.ಸಂ: 8792301165), ಕುಂದಗೊಳ ಎ.ಪಿ.ಎಮ್.ಸಿ. ಯರಗುಪ್ಪಿ ಓ.ಜಿ.ಸಿ.ಎಸ್ (ದೂ.ಸಂ: 9901583895), ಹಿರೇಹರಕುಣಿಯ ಓ.ಜಿ.ಎಸ್.ಸಿ.ಎಸ್ (ದೂ. ಸಂ:9844198169) ಖರೀದಿ ಸಂಸ್ಥೆಗಳಾಗಿರುತ್ತವೆ ಎಂದು ಅವರು ತಿಳಿಸಿದ್ದಾರೆ.

 

ಹೆಸರುಕಾಳು ಖರೀದಿ ಕೇಂದ್ರಗಳ ವಿವರ: ಧಾರವಾಡ ತಾಲೂಕಿನಲ್ಲಿ ಧಾರವಾಡದ ಟಿ.ಎ.ಪಿ.ಸಿ.ಎಮ್.ಎಸ್ (ದೂ.ಸಂ:9916259625) ಮತ್ತು ಉಪ್ಪಿನಬೇಟಗೇರಿಯ ಪಿ.ಕೆ.ಪಿ.ಎಸ್ (ದೂ.ಸಂ:9620048221), ಹೆಬ್ಬಳ್ಳಿ, ಹಳೇ ಹುಬ್ಬಳ್ಳಿಯ ಪಿ.ಕೆ.ಪಿ.ಎಸ್ (ದೂ. ಸಂ: 9448424876), ಹುಬ್ಬಳ್ಳಿ ತಾಲೂಕಿನಲ್ಲಿ ಟಿ.ಎ.ಪಿ.ಸಿ.ಎಮ್.ಎಸ್ (ದೂ.ಸಂ:6360506861), ಬ್ಯಾಹಟ್ಟಿಯ ಪಿ.ಕೆ.ಪಿ.ಎಸ್ (ದೂ.ಸಂ:9986211378), ಹೆಬಸೂರ ಪಿ.ಕೆ.ಪಿ.ಎಸ್ (ದೂ.ಸಂ:9945894870), ಕೋಳಿವಾಡ ನಂ-1 ಪಿ.ಕೆ.ಪಿ.ಎಸ್ (ದೂ.ಸಂ:9945846878), ನೂಲ್ವಿ ಪಿ.ಕೆ.ಪಿ.ಎಸ್ (ದೂ.ಸಂ: 9743836535).

ನವಲಗುಂದ ತಾಲೂಕಿನಲ್ಲಿ ಹೆಬ್ಬಾಳ ಪಿ.ಕೆ.ಪಿ.ಎಸ್ (ದೂ.ಸಂ:9449065613), ತಿರ್ಲಾಪುರ ಪಿ.ಕೆ.ಪಿ.ಎಸ್ (ದೂ.ಸಂ:8494801475), ಆರೇಕುರಹಟ್ಟಿ ಪಿ.ಕೆ.ಪಿ.ಎಸ್ (ದೂ.ಸಂ: 9845822903), ಶಿರೂರು ಎಫ್.ಪಿ.ಓ (ದೂ.ಸಂ:9900189128), ಮೊರಬ ಕೆ.ಎಸ್.ಎಫ್.ಪಿ.ಓ (ದೂ.ಸಂ:9620107330), ಮೊರಬ ಪಿ.ಕೆ.ಪಿ.ಎಸ್ (ದೂ.ಸಂ:8431012192), ಹಾಲಕುಸುಗಲ್ ಪಿ.ಕೆ.ಪಿ.ಎಸ್ (ದೂ.ಸಂ:8123836380), ನವಲಗುಂದ ಪಿ.ಕೆ.ಪಿ.ಎಸ್ (ದೂ.ಸಂ:9886491644), ನವಲಗುಂದದ ಅಣ್ಣಿಗೇರಿಯ ಟಿ.ಎ.ಪಿ.ಸಿ.ಎಮ್.ಎಸ್. (ದೂ.ಸಂ:8861008191), ಶಿರಕೊಳ ಪಿ.ಕೆ.ಪಿ.ಎಸ್ (ದೂ.ಸಂ:8150834048). ಅಣ್ಣಿಗೇರಿ ತಾಲೂಕಿನಲ್ಲಿ ಅಣ್ಣಿಗೇರಿಯ ಪಿ.ಕೆ.ಪಿ.ಎಸ್ (ದೂ.ಸಂ:7760184669), ಅಣ್ಣಿಗೇರಿ ಟಿ.ಎ.ಪಿ.ಸಿ.ಎಮ್.ಎಸ್ (ದೂ.ಸಂ:8861008191) ಕುಂದಗೋಳ ತಾಲೂಕಿನಲ್ಲಿ ಯಳಿವಾಳ ಪಿ.ಕೆ.ಪಿ.ಎಸ್ (ದೂ.ಸಂ:9945163891), ಯರಗುಪ್ಪಿಯ ಪಿ.ಕೆ.ಪಿ.ಎಸ್ (ದೂ.ಸಂ:9845169206), ಕುಂದಗೋಳ ರೈತ ಉತ್ಪಾದಕರ ಕಂಪನಿ (ದೂ.ಸಂ: 7411512065) ಖರೀದಿ ಸಂಸ್ಥೆಗಳಾಗಿವೆ ಎಂದು ಅವರು ತಿಳಿಸಿದ್ದಾರೆ.

ಉತ್ಪನ್ನವನ್ನು ಖರೀದಿಸಲು ಅಗತ್ಯವಿರುವ ದಾಖಲೆಗಳು: ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಎಫ್.ಎ.ಕ್ಯೂ ಗುಣಮಟ್ಟದ ಸೋಯಾಬೀನ್ ಮತ್ತು ಹೆಸರಕಾಳು ಉತ್ಪನ್ನಗಳನ್ನು ಮಾರಾಟ ಮಾಡಲು ರೈತರು ನೋಂದಣಿಗಾಗಿ ತಮ್ಮ ಆಧಾರ ಗುರುತಿನ ಚೀಟಿಯ ಮೂಲ ಪ್ರತಿ ಹಾಗೂ ಅದರ ನಕಲು ಪ್ರತಿ, ಪಹಣಿ ಪತ್ರಿಕೆಯಲ್ಲಿರುವ ಹೆಸರಿನ ರೈತರ ಆಧಾರ ಸಂಖ್ಯೆ ಜೋಡಣೆಗೊಂಡ ಬ್ಯಾಂಕ್ ಖಾತೆ ಪಾಸ್ ಪುಸ್ತಕದ ನಕಲು ಪ್ರತಿಯನ್ನು ಸಲ್ಲಿಸಬೇಕು ಎಂದು ಅವರು ತಿಳಿಸಿದ್ದಾರೆ.

ಎಫ್.ಎ.ಕ್ಯೂ. ಗುಣಮಟ್ಟದ ಸೋಯಾಬೀನ ಮತ್ತು ಹೆಸರುಕಾಳು ಉತ್ಪನ್ನವನ್ನು ಖರೀದಿಸಲು ಅನುಸರಿಸುವ ಕ್ರಮಗಳು: ಸೋಯಾಬೀನ ಮತ್ತು ಹೆಸರುಕಾಳು ಉತ್ಪನ್ನವು ಚೆನ್ನಾಗಿ ಒಣಗಿರಬೇಕು, ತೇವಾಂಶವು ಶೇ.12 ಕ್ಕಿಂತ ಕಡಿಮೆ ಇರಬೇಕು, ಸೋಯಾಬೀನ್ ಮತ್ತು ಹೆಸರುಕಾಳು ಉತ್ಪನ್ನವು ಗುಣಮಟ್ಟದ ಗಾತ್ರ, ಬಣ್ಣ ಮತ್ತು ಆಕಾರವನ್ನು ಹೊಂದಿರಬೇಕು, ಗಟ್ಟಿಯಾಗಿರಬೇಕು ಮತ್ತು ಮಣ್ಣಿನಿಂದ ಬೇರ್ಪಡಿಸಲ್ಪಟ್ಟು ಸ್ವಚ್ಛವಾಗಿರಬೇಕು, ಸಾಣಿಗೆಯಿಂದ ಸ್ವಚ್ಛಗೊಳಿಸಿರಬೇಕು.

ಕ್ರಿಮಿಕೀಟಗಳಿಂದ ಮುಕ್ತವಾಗಿರಬೇಕು, ರೈತರಿಗೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದವರು ನೀಡುವ ಗೋಣಿ ಚೀಲದಲ್ಲಿ 50 ಕೆ.ಜಿ. ಪ್ರಮಾಣದಲ್ಲಿ ತುಂಬಬೇಕು, ಸೋಯಾಬೀನ್ ಪ್ರತಿ ಎಕರೆಗೆ 05 ಕ್ವಿಂಟಾಲ್ ಗರಿಷ್ಟ ಪ್ರಮಾಣ ಹಾಗೂ ಪ್ರತಿ ರೈತರಿಂದ ಗರಿಷ್ಟ 25 ಕ್ವಿಂಟಾಲ್ ಪ್ರಮಾಣದ ಎಫ್‍ಎಕ್ಯೂ ಗುಣಮಟ್ಟದ ಉತ್ಪನ್ನವನ್ನು ಖರೀದಿಸಲಾಗುವುದು. ಹೆಸರುಕಾಳು ಪ್ರತಿ ಎಕರೆಗೆ 04 ಕ್ವಿಂಟಾಲ್ ಗರಿಷ್ಟ ಪ್ರಮಾಣ ಹಾಗೂ ಪ್ರತಿ ರೈತರಿಂದ ಗರಿಷ್ಟ 20 ಕ್ವಿಂಟಾಲ್ ಪ್ರಮಾಣದ ಎಫ್‍ಎಕ್ಯೂ ಗುಣಮಟ್ಟದ ಉತ್ಪನ್ನವನ್ನು ಖರೀದಿಸಲಾಗುವುದು. ಸರ್ಕಾರದ ಬೆಂಬಲ ಬೆಲೆ ಪ್ರತಿ ಕ್ವಿಂಟಾಲೆಗೆ ರೂ. 5,708 ರಂತೆ ಸೋಯಾಬೀನ್ ಖರೀದಿಸಲಾಗುವುದು ಹಾಗೂ ರೂ. 8,780 ರಂತೆ ಹೆಸರುಕಾಳು ಖರೀದಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸರ್ಕಾರಿ ರಜೆ ದಿನಗಳನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ಬೆಳಿಗ್ಗೆ 8 ರಿಂದ ಸಾಯಂಕಾಲ 6 ಗಂಟೆಯವರೆಗೆ ಮಾತ್ರ ಖರೀದಿಸಲಾಗುವುದು. ಧಾರವಾಡ ಜಿಲ್ಲೆಯ ರೈತರು ಇದರ ಸದುಪಯೋಗಪಡಿಸಿಕೊಳ್ಳಬೇಕು. ಯಾವುದೇ ಸಂದರ್ಭದಲ್ಲಿ ರೈತರು ಮಧ್ಯವರ್ತಿಗಳ ಮೊರೆ ಹೋಗಬಾರದು. ಇದರ ಉಪಯೋಗವನ್ನು ರೈತರೇ ನೇರವಾಗಿ ಪಡೆಯಬೇಕು.

Tags:

error: Content is protected !!