Khanapur

ಖಾನಾಪೂರಕ್ಕೆ ಆಗಮಿಸಿದ ಸಚಿವ ಸತೀಶ ಜಾರಕಿಹೊಳಿಗೆ ಆತ್ಮೀಯ ಸ್ವಾಗತ: ಕಾಂಗ್ರೆಸ್ ಮುಖಂಡ ಸುರೇಶ್ ಜಾಧವ್ ಮತ್ತು ತೊಹೀದ ಚಾಂದಖಾನವರರಿಂದ ಸತ್ಕಾರ

Share

ಖಾನಾಪೂರ ಪಟ್ಟಣಕ್ಕೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಇಲಾಖೆಯ ಸಚಿವ ಸತೀಶ ಜಾರಕಿಹೊಳಿ ಅವರನ್ನು ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರಮುಖ ಮುಖಂಡರು ಆತ್ಮೀಯವಾಗಿ ಸ್ವಾಗತಿಸಿ ಸತ್ಕರಿಸಿದ್ದಾರೆ. ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಸಚಿವರಿಗೆ ಭವ್ಯ ಸ್ವಾಗತ ಕೋರಿದ್ದಾರೆ.

ಖಾನಾಪೂರ ಪಟ್ಟಣಕ್ಕೆ ಭೇಟಿ ನೀಡಿದ ಸಚಿವ ಸತೀಶ ಜಾರಕಿಹೊಳಿ ಅವರನ್ನು ಕಾಂಗ್ರೆಸ್ ಮುಖಂಡ ಸುರೇಶ್ ಜಾಧವ್ ಹಾಗೂ ಮೈನಾರಿಟಿ ವಿಭಾಗದ ಅಧ್ಯಕ್ಷ ತೊಹೀದ ಚಾಂದಖಾನವರ ನೇತೃತ್ವದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು. ತಾಲೂಕಿನಲ್ಲಿ ಅಗಾಧ ಅಭಿಮಾನಿ ಬಳಗವನ್ನು ಹೊಂದಿರುವ ಸಚಿವರಿಗೆ ಶುಭ ಹಾರೈಸಲು ನೂರಾರು ಸಂಖ್ಯೆಯಲ್ಲಿ ಜನಸಾಮಾನ್ಯರು ಹಾಗೂ ಪಕ್ಷದ ಕಾರ್ಯಕರ್ತರು ಹರಿದುಬಂದಿದ್ದರು. ಈ ವೇಳೆ ತಮ್ಮ ಆಪ್ತರು ಹಾಗೂ ಮುಖಂಡರೊಂದಿಗೆ ಕೆಲಕಾಲ ಸಮಾಲೋಚನೆ ನಡೆಸಿದ ಸತೀಶ ಜಾರಕಿಹೊಳಿ ಅವರು, ಬಳಿಕ ತಮ್ಮ ನಿರ್ಧರಿತ ಮುಂದಿನ ಕಾರ್ಯಕ್ರಮದ ಸ್ಥಳಕ್ಕೆ ತೆರಳಿದರು.

ಈ ಸ್ವಾಗತ ಮತ್ತು ಸತ್ಕಾರ ಸಮಾರಂಭದಲ್ಲಿ ಅಲ್ತಾಫ್ ಶೇಖ್, ಸದ್ದಾಂ ಬಡೇಘರ್ ಸೇರಿದಂತೆ ಸ್ಥಳೀಯ ಕಾಂಗ್ರೆಸ್ ಪಕ್ಷದ ಹಲವು ಪ್ರಮುಖ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದು, ಸಚಿವರ ಸಂಚಾರದ ವೇಳೆ ಉತ್ಸಾಹದ ವಾತಾವರಣವಿತ್ತು.

Tags:

error: Content is protected !!