ಖಾನಾಪೂರ ತಾಲೂಕಿನ ಅವರೊಳ್ಳಿ-ಬಿಳಕಿ ಗ್ರಾಮಸ್ಥರಿಂದ ಮಳೆಗಾಗಿ ದೇವರಿಗೆ ಮೊರೆ ಹೋಗುತ್ತಿದ್ದಾರೆ,ಗ್ರಾಮದ ಹೊರವಲಯದ ಅರಣ್ಯದಲ್ಲಿರುವ ಸಿದ್ಧೇಶ್ವರನಿಗೆ ಪಾದಯಾತ್ರೆ ಮೂಲಕ ತೆರಳಿ ಪೂಜೆ ಸಲ್ಲಿಸಿದರು

ಈ ಸಂದರ್ಭದಲ್ಲಿ ಮನೆ ಮನೆಯಿಂದ ಅಂಬಲಿ, ಅವರೆಕಾಳಿನ ಗುಗ್ಗರಿ ಮಾಡಿಕೊಂಡು ಹೋಗಿ ದೇವರಿಗೆ ಸಮರ್ಪಣೆ ಮಾಡಿ ಗುಡ್ಡದ ಸಿದ್ದೇಶ್ವರನಿಗೆ ಅಂಬಲಿ ಸಮರ್ಪಿಸಿ ಮಳೆಗಾಗಿ ಬೇಡಿಕೊಂಡರು ಗ್ರಾಮದ ರೈತರು
ಶಿವಭಜನೆ ಮೂಲಕ ಇಡೀ ದಿನ ದೇವರ ಧ್ಯಾನ ಮಾಡಿ,ದೇವಸ್ಥಾನದ ಪ್ರಾಂಗಣದಲ್ಲೇ ಮನೆ ಮನೆಯಿಂದ ತಂದಿದ್ದ ಬುತ್ತಿಗಂಟನ್ನು ನೇವೈದ್ಯ ಅರ್ಪಿಸಿ ಊಟ ಮಾಡಿ ಸಂಜೆ ಮನೆಗಳಿಗೆ ಮರಳಿದರು ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದಿರುವ ಪದ್ಧತಿಯನ್ನು ಈ ಸಲ ಮಲೆನಾಡಿನ ಖಾನಾಪುರದಲ್ಲೂ ಬರದ ಛಾಯೆ ಮೂಡಿದ್ದು
ಖಾನಾಪೂರ ತಾಲೂಕಿನ ಪೂರ್ವ ಭಾಗದಲ್ಲಿ ಮಳೆಯಿಲ್ಲದೇ ಒಣಗುತ್ತಿರುವ ಭತ್ತದ ಬೆಳೆಯಿಂದ ಸಂಪೂರ್ಣ ರೈತರು ಕಂಗಾಲಾಗಿದ್ದಾರೆ ಈ ಹಿನ್ನೆಲೆ ಗುಡ್ಡದ ಸಿದ್ದೇಶ್ವರನಿಗೆ ಮೊರೆ ಹೋದ ರೈತರು ಆದಷ್ಟು ಬೇಗ ಮಳೆಯಾಯನ ದರ್ಶನ್ ಭಾಗ್ಯ ದೊರೆಯಲ್ಲಿ ಉಳಿದ ಬೆಳೆಯಾದರೂ ಕೈಗೆ ಸಿಗಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ರೈತ ಎನ್.ಎಸ್.ಪಾಟೀಲ ಅವರು ಮಾತನಾಡಿ ಹಳೆಯ ಸಂಪ್ರದಾಯದಂತೆ ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು
