Khanapur

ಅವರೊಳ್ಳಿ ಗ್ರಾಮದಿಂದ ಬಿಳಕಿ ಗ್ರಾಮದವರೆಗೆ ರಸ್ತೆ ಅಭಿವೃದ್ಧಿ ಮಾಡಲು ಯುವ ಕಾಂಗ್ರೆಸ್ ಮುಖಂಡ ಭರತೇಶ ತೊರೋಜಿ ಜಿಲ್ಲಾ ಉಸ್ತುವಾರಿ ಮತ್ತು ಲೋಕೋಪಯೋಗಿ ಇಲಾಖೆಯ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಮನವಿ

Share

ಖಾನಾಪೂರ ತಾಲೂಕಿನ ಅವರೊಳ್ಳಿ ಗ್ರಾಮದಿಂದ ಬಿಳಕಿ ಗ್ರಾಮದವರೆಗೆ ಮೂರು ಕಿಲೋಮೀಟರ್ ದ ರಸ್ತೆ ಸಂಪೂರ್ಣ ಹಾಳಾಗಿದ್ದು ಇದನ್ನು ಅಭಿವೃದ್ಧಿ ಪಡಿಸುವಂತೆ ಮತ್ತು ಪಾರಿಶ್ವಾಡ ದಿಂದ ಇಟಗಿ ರಸ್ತೆ ಕೂಡಾ ತೆಗ್ಗು ಗುಂಡಿಗಳಿಂದ ರಸ್ತೆ ಹಾಳಾಗಿದೆ ಇದನ್ನು ಕೂಡಾ ಅಭಿವೃದ್ಧಿ ಪಡಿಸುವಂತೆ ಜಿಲ್ಲಾ ಉಸ್ತುವಾರಿ ಮತ್ತು ಲೋಕೋಪಯೋಗಿ ಇಲಾಖೆಯ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಖಾನಾಪೂರ ಯುವ ಕಾಂಗ್ರೆಸ್ ಮುಖಂಡ ಭರತೇಶ ತೊರೋಜಿ ಅವರು ಮನವಿ ಸಲ್ಲಿಸಿದರು ಈ ಸಂದರ್ಭದಲ್ಲಿ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದ್ಯಾಮಣ್ಣ ಬಸರೀಕಟ್ಟಿ ಅವರು ಉಪಸ್ಥಿತರಿದ್ದರು ಮನವಿ ಸ್ವೀಕರಿಸಿದ ಸಚಿವರು ಈ ರಸ್ತೆಗಳ ಅಭಿವೃದ್ಧಿಗೆ ಅನುದಾನ ಮಂಜೂರಾತಿ ಮಾಡುವ ಭರವಸೆ ನೀಡಿದರು.

ಅಲ್ತಾಫ್ ಎಂ ಬಸರೀಕಟ್ಟಿ
ಇನ್ ನ್ಯೂಸ್ ಖಾನಾಪೂರ

Tags:

error: Content is protected !!