khanapur

ಸರ್ಕಾರಿ ಜಮೀನು ಅಕ್ರಮ ಒತ್ತುವರಿ ಖಂಡಿಸಿ ಖಾನಾಪೂರದಲ್ಲಿ ಕರವೇ ವತಿಯಿಂದ ಧರಣಿಗೆ ಕರೆ

Share

ಸರ್ಕಾರಿ ಭೂಮಿಯನ್ನು ಕಾನೂನುಬಾಹಿರವಾಗಿ ಖಾಸಗಿ ವ್ಯಕ್ತಿಗಳ ಹೆಸರಿಗೆ ದಾಖಲಿಸಲಾಗಿದೆ ಎಂದು ಆರೋಪಿಸಿ, ಕೂಡಲೇ ಆ ಭೂಮಿಯನ್ನು ಸರ್ಕಾರದ ವಶಕ್ಕೆ ಪಡೆಯಬೇಕು ಎಂದು ಒತ್ತಾಯಿಸಿ ಮೂಕಬಸವನಗರ ಗ್ರಾಮಸ್ಥರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಅಕ್ಟೋಬರ್ 8 ರಂದು ಖಾನಾಪೂರ ತಹಶೀಲ್ದಾರ್ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲು ಕರೆ ನೀಡಿದ್ದಾರೆ.

ಕೇರವಾಡ ಮತ್ತು ಸುರಾಪುರ ಗ್ರಾಮಗಳ ಒಟ್ಟು 20 ಎಕರೆ 12 ಗುಂಟೆ ಸರ್ಕಾರಿ ಜಮೀನು ಅಕ್ರಮವಾಗಿ ವರ್ಗಾವಣೆಯಾಗಿದ್ದು, ಸಾರ್ವಜನಿಕ ಬಳಕೆಯಲ್ಲಿರುವ ಈ ಭೂಮಿಯನ್ನು ರಕ್ಷಿಸುವಂತೆ ಆಗ್ರಹಿಸಿ ಹಲವು ಬಾರಿ ಮನವಿ ಸಲ್ಲಿಸಿದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕರವೇ ತಾಲ್ಲೂಕು ಅಧ್ಯಕ್ಷ ವಿಠ್ಠಲ ಹಿಂಡಲಕರ ದೂರಿದ್ದಾರೆ.ವಿಶೇಷವಾಗಿ ಕೇರವಾಡ ಗ್ರಾಮದ ಸರ್ವೆ ನಂಬರ್ ಜಮೀನಿನಲ್ಲಿ ಬಸವೇಶ್ವರ ದೇವಸ್ಥಾನ, ಆಟದ ಮೈದಾನ ಹಾಗೂ ಸಾರ್ವಜನಿಕರ ಹಿತಾಸಕ್ತಿ ಅಡಗಿದ್ದು, ಜಾನುವಾರುಗಳ ಮೇವಿಗೂ ಇದು ಬಳಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಕ್ರಮ ದಾಖಲಾತಿಗಳನ್ನು ರದ್ದುಪಡಿಸಿ ಜಮೀನನ್ನು ಮರುಪಡೆಯುವಂತೆ ಒತ್ತಾಯಿಸಿರುವ ಪ್ರತಿಭಟನಾಕಾರರು, ನಾಳೆ ಬೆಳಿಗ್ಗೆ 11 ಗಂಟೆಗೆ ತಹಶೀಲ್ದಾರ್ ಕಚೇರಿ ಎದುರು ಬೃಹತ್ ಧರಣಿ ಹಮ್ಮಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಸಂದೀಪ ಚಲವಾದಿ ಸೇರಿದಂತೆ ಅನೇಕ ಕರವೇ ಹಾಗೂ ಮೂಕಬಸವ ನಗರದ ಕಾರ್ಯಕರ್ತರು ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಲಾಗಿದೆ

Tags:

error: Content is protected !!