Belagavi

ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ಜ್ಯೋತಿ ಮಾಳಿಗೆ ಪ್ರಥಮ ಬಹುಮಾನ

Share

 

ಬೆಳಗಾವಿ: ಸವದತ್ತಿಯ ಸಹೃದಯ ಸಾಹಿತ್ಯ ಪ್ರತಿಷ್ಠಾನ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನವೆಂಬರ್ 22ರಂದು ಸವದತ್ತಿಯ ಡಿ. ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ಬೆಳಗಾವಿಯ ಕವಯಿತ್ರಿ ಜ್ಯೋತಿ ಮಾಳಿ ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ.

ಕವಿಗೋಷ್ಠಿಯಲ್ಲಿ ಕವಿಗಳು ವಾಚಿಸಿದ ಕವನಗಳಿಗೆ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ತಮ್ಮ ಕವನದ ಮೂಲಕ ಗಮನ ಸೆಳೆದ ಜ್ಯೋತಿ ಮಾಳಿ ಪ್ರಥಮ ಸ್ಥಾನ ಗಳಿಸಿ ಬೆಳಗಾವಿ ಜಿಲ್ಲೆಯ ಸಾಹಿತ್ಯ ವಲಯಕ್ಕೆ ಹೆಮ್ಮೆ ತಂದಿದ್ದಾರೆ.

ಪ್ರಥಮ ಬಹುಮಾನವು ನಗದು ಬಹುಮಾನ, ಎರಡು ಸಾಹಿತ್ಯ ಕೃತಿಗಳು, ನೆನಪಿನ ಕಾಣಿಕೆ ಹಾಗೂ ಗೌರವ ಸನ್ಮಾನವನ್ನು ಒಳಗೊಂಡಿತ್ತು. ಸಹೃದಯ ಸಾಹಿತ್ಯ ಪ್ರತಿಷ್ಠಾನದ ಅಧ್ಯಕ್ಷ ನಾಗೇಶ ನಾಯಕ್ ಹಾಗೂ ಅವರ ಪತ್ನಿ, ಪ್ರತಿಷ್ಠಾನದ ಸರ್ವ ಸದಸ್ಯರು ಮತ್ತು ಕವಿಗೋಷ್ಠಿಯ ಅಧ್ಯಕ್ಷ ವೈ. ಎಂ. ಯಾಕೊಳ್ಳಿ ಅವರು ಕವಿ ಮನಗಳ ಸಮ್ಮುಖದಲ್ಲಿ ಜ್ಯೋತಿ ಮಾಳಿ ಅವರಿಗೆ ಬಹುಮಾನ ನೀಡಿ ಗೌರವಿಸಿದರು.

ಜ್ಯೋತಿ ಮಾಳಿ ಅವರ ಈ ಸಾಹಿತ್ಯ ಸಾಧನೆಗೆ ಗಜಲ್ ಬಳಗ ಹಾಗೂ ಸಾಹಿತ್ಯ ಬಳಗದ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.

Tags:

error: Content is protected !!