Belagavi

ಜಿತೋ ಸಂಸ್ಥೆ ಜೈನ ಸಮಾಜದ ಅಕ್ಷಯ ಪಾತ್ರೆ : ಶಾಸಕ ಅಭಯ ಪಾಟೀಲ

Share

ಜೈನ ಸಮಾಜದಲ್ಲಿನ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಸಕಾಲದಲ್ಲಿ ಎಲ್ಲ ರೀತಿಯ ಸಹಾಯ ಹಸ್ತ ನೀಡುತ್ತ ಬಂದಿರುವ ಜಿತೋ ಸಂಸ್ಥೆ ಜೈನ ಸಮಾಜದ ಅಕ್ಷಯ ಪಾತ್ರೆಯಾಗಿದೆ ಎಂದು ಶಾಸಕ ಅಭಯ ಪಾಟೀಲ ಅವರು ಹೇಳಿದರು.
ಬೆಳಗಾವಿ ಫೌಂಡ್ರಿ ಕ್ಲಸ್ಟರ ಸಭಾಗೃಹದಲ್ಲಿ ರವಿವಾರ ಸಾಯಂಕಾಲ ಜೈನ ಇಂಟರ್ನ್ಯಾಷನಲ್ ಟ್ರೆಡ ಆರ್ಗನೈಸೇಶನ್ ಸಂಸ್ಥೆಯ ಬೆಳಗಾವಿ ಘಟಕದ 2026 – 28 ನೇ ಸಾಲಿನ
ನೂತನ ಆಡಳಿತ ಮಂಡಳಿಯ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡುತ್ತಿದ್ದರು.

ಜೈನ ಸಮಾಜದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ , ಯುಪಿಎಸ್ಸ್ ಸಿ ಪರೀಕ್ಷೆಯ ಸಿದ್ದತೆ , ವಸತಿ ನಿಲಯಗಳ ಸ್ಥಾಪನೆ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೆ ತಂದು ಅವುಗಳನ್ನು ಸಮಾಜದ ಕಟ್ಡಕಡೆಯ ವ್ಯಕ್ತಿಗೆ ತಲುಪಿಸುತ್ತಿರುವ ಜಿತೋ ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಅತಿಥಿಯಾಗಿ ಆಗಮಿಸಿದ ಮಾಜಿ ಶಾಸಕ ಸಂಜಯ ಪಾಟೀಲ ಅವರು ಮಾತನಾಡಿ, ಸಮಾಜದಲ್ಲಿ ಒಳ್ಳೆಯ ಕಾರ್ಯಗಳನ್ನು ಮಾಡುತ್ತ ಸಮಾಜವನ್ನು ಅತ್ಯುನ್ನತ ಸ್ಥಾನಕ್ಕೆ ತರಲು ಸದಾ ಶ್ರಮಿಸುತ್ತಿರುವ ಜಿತೋ ಸಂಸ್ಥೆ ಇಂದು ಜೈನ ಸಮಾಜದ ಹೆಮ್ಮೆಯ ಸಂಸ್ಥೆಯಾಗಿದೆ ಎಂದರು ‌ .
ಇನ್ನೋರ್ವ ಅತಿಥಿ ಹಿರಿಯ ನ್ಯಾಯವಾದಿ ರವಿರಾಜ ಪಾಟೀಲ ಅವರು ಮಾತನಾಡಿ, ಜಿತೋ ಸಂಸ್ಥೆಯ ಕಾರ್ಯಗಳು ಇಂದು ಗ್ರಾಮೀಣ ಮಟ್ಟದಲ್ಲಿ ತಲುಪಿದ್ದು ಇದರಿಂದ ಸಮಾಜಕ್ಕೆ ಹೆಚ್ಚು ಅನಕೂಲಕರವಾಗಿದೆ ಎಂದರು.

ಸಮಾರಂಭದಲ್ಲಿ ಜಿತೋ ಅಪೆಕ್ಸ ಕಾರ್ಯದರ್ಶಿ ವಿನೋದಜಿ ಪೋಖರನಾ, ಜಿತೋ ಕೆಕೆಜಿ ವಲಯದ ಚೇರಮನ ವಿಮಲಜೀ‌ ಕಟಾರಿಯಾ, ಜಿತೋ ಅಪೆಕ್ಸ ನಿರ್ದೇಶಕ ನಿತಿನಜಿ ಲೂನಿಯಾ ಅವರು ಮಾತನಾಡಿದರು.

ಸಮಾರಂಭದಲ್ಲಿ ಜಿತೋ ಬೆಳಗಾವಿ ಘಟಕದ ಅಧ್ಯಕ್ಷರಾಗಿ ಮಹೇಂದ್ರ ಪರಮಾರ, ಉಪಾಧ್ಯಕ್ಷ ರಾಗಿ ವಿಜಯ ಪಾಟೀಲ, ಅಂಕಿತ ಖೋಡಾ, ಪ್ರಧಾನ ಕಾರ್ಯದರ್ಶಿ ಅಭಿಜೀತ ಭೊಜನ್ನವರ, ನಿರ್ದೇಶಕರಾಗಿ ಸುನಿಲ್ ಕಟಾರಿಯಾ, ಪ್ರವೀಣ ಸಾಮಸುಖಾ, ಅಭಯ ಆದಿಮನಿ,
ಕಾರ್ಯದರ್ಶಿ ಜಯಕುಮಾರ ಪಾಟೀಲ, ಆಶೀಷ ಮಗದುಮ್ಮ, ಖಜಾಂಚಿಯಾಗಿ ಯಶ ಮೆಹತಾ, ಸಹ ಖಜಾಂಚಿ ಧನಸುಖ ಜೈನ , ಸದಸ್ಯರಾಗಿ ವಿಕ್ರಮ ಜೈನ , ಆಕಾಶ ಪಾಟೀಲ ಇವರು ಆಯ್ಕೆಯಾಗಿದ್ದು, ತಮ್ಮ ಅಧಿಕಾರ ಸ್ವೀಕರಿಸಿದರು.

ಸಮಾರಂಭದಲ್ಲಿ ಜಿತೋ ಸಂಸ್ಥೆಯ ಉನ್ನತ ಪದಾಧಿಕಾರಿಗಳು, ವಿವಿಧ ಘಟಕದ ಅಧ್ಯಕ್ಷರು ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
ಮಾಜಿ ಅಧ್ಯಕ್ಷ ಹರ್ಷವರ್ಧನ ಇಂಚಲ ಅತಿಥಿಗಳನ್ನು ಸ್ವಾಗತಿಸಿದರು ‌‌ . ಅಭಯ ಆದಿಮನಿ ವಂದಿಸಿದರು. ಅಮಿತ ದೋಷಿ ಕಾರ್ಯಕ್ರಮ ನಿರೂಪಿಸಿದರು.

Tags:

error: Content is protected !!