Belagavi

ಪೋಷಕರ ಸ್ಮರಣಾರ್ಥ ಭೋಬೆ ಬಂಧುಗಳಿಂದ ವಿಠ್ಠಲ ರಖುಮಾಯಿ ಮಂದಿರಕ್ಕೆ ದೇಣಿಗೆ ವಿತರಣೆ

Share

ಬೆಳಗಾವಿಯ ಬಾಪಟ್ ಗಲ್ಲಿಯ ಶ್ರೀ ವಿಠ್ಠಲ ರಖುಮಾಯಿ ಭಜನ ಮಂಡಳಕ್ಕೆ ಭೋಬೆ ಬಂಧುಗಳು ತಮ್ಮ ದಿವಂಗತ ಪೋಷಕರ ಸ್ಮರಣಾರ್ಥ ಅಗತ್ಯ ವಸ್ತುಗಳನ್ನು ದೇಣಿಗೆಯಾಗಿ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಮಂಡಳದ ಸದಸ್ಯರು ಹಾಗೂ ಸ್ಥಳೀಯ ಗಣ್ಯರು ಉಪಸ್ಥಿತರಿದ್ದರು.

ಬೆಳಗಾವಿಯ ಬಾಪಟ್ ಗಲ್ಲಿಯ ಕಾರ್ ಪಾರ್ಕಿಂಗ್ ಆವರಣದಲ್ಲಿರುವ ಶ್ರೀ ವಿಠ್ಠಲ ರಖುಮಾಯಿ ಭಜನ ಮಂಡಳಕ್ಕೆ ಡಾ. ಸಂತೋಷ ನರಹರಿ ಭೋಬೆ ಮತ್ತು ಬಬನ್ ಭೋಬೆ ಬಂಧುಗಳು ತಮ್ಮ ತಾಯಿ ದಿವಂಗತ ಜಯಶ್ರೀ ಭೋಬೆ ಹಾಗೂ ತಂದೆ ದಿವಂಗತ ನರಹರಿ ಭೋಬೆ ಅವರ ಸ್ಮರಣಾರ್ಥವಾಗಿ ಮಂದಿರಕ್ಕೆ 2 ಜಮಖಾನ್ ಮತ್ತು ನೈವೇದ್ಯಕ್ಕಾಗಿ 5 ತಟ್ಟೆಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಶ್ರೀಕಾಂತ ಸಾಂಬರೇಕರ, ಶ್ರೀ ಪುಣೇಕರ್ ಮಹಾರಾಜ್, ಪ್ರಭಾಕರ ಕಣಬರ್ಗಿ, ಉದಯ್ ಪಾಟೀಲ್, ಮಧು ಕಣಬರ್ಗಿ, ಬಂಡು ಕೇರವಾಡಕರ, ಪಾಂಡುರಂಗ ಪಾಟೀಲ್, ರಾಜು ಪವಾರ್ ಹಾಗೂ ಸದರೇ ಸೇರಿದಂತೆ ಮಂಡಳದ ಇತರ ಸದಸ್ಯರು ಮತ್ತು ಭಕ್ತಾದಿಗಳು ಪಾಲ್ಗೊಂಡಿದ್ದರು.

Tags:

error: Content is protected !!