hubbali

ಹುಬ್ಬಳ್ಳಿಯಲ್ಲಿ ಪೊಲೀಸರ ಭರ್ಜರಿ ಕಾರ್ಯಾಚರಣೆ : ಅಂತಾರಾಜ್ಯ ಡ್ರಗ್ಸ್ ಜಾಲ ಪತ್ತೆ

Share

ಹುಬ್ಬಳ್ಳಿಯಲ್ಲಿ ಗೋಕುಲ ರೋಡ್ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಅಂತಾರಾಜ್ಯ ಡ್ರಗ್ಸ್ ಜಾಲವೊಂದನ್ನು ಭೇದಿಸಿದ್ದಾರೆ.

​ಉದ್ಯಮ ನಗರದ ಬಳಿ ಅಕ್ರಮವಾಗಿ ಎಂಡಿಎಂಎ (MDMA) ಮಾತ್ರೆಗಳನ್ನು ಮಾರಾಟ ಮಾಡುತ್ತಿದ್ದ ಮೂವರು ಪೆಡ್ಲರ್‌ಗಳನ್ನು ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡು ಮೂಲದ ರಘುಕೃಷ್ಣನ್ ಅಲಿಯಾಸ್ ಕುಳ್ಳಿ, ರಾಜಕುಮಾರ್ ಹಾಗೂ ಹಳೆ ಹುಬ್ಬಳ್ಳಿಯ ಪ್ರವೀಣ ಶೆಟ್ಟಿ ಬಂಧಿತ ಆರೋಪಿಗಳು.

​ಇವರಿಂದ ಬರೋಬ್ಬರಿ 1 ಕೆ.ಜಿ. 300 ಗ್ರಾಂ ತೂಕದ ಎಂಡಿಎಂಎ ಮಾದಕ ಮಾತ್ರೆಗಳನ್ನು ಜಪ್ತಿ ಮಾಡಲಾಗಿದೆ. ಇನ್‌ಸ್ಪೆಕ್ಟರ್ ಸಂಗಮೇಶ ದಿಡಿಗಿನಾಳ ನೇತೃತ್ವದ ತಂಡದ ಈ ಯಶಸ್ವಿ ಕಾರ್ಯಾಚರಣೆಗೆ ಪೊಲೀಸ್ ಆಯುಕ್ತರು ಶ್ಲಾಘನೆ ವ್ಯಕ್ತಪಡಿಸಿ, ನಗದು ಬಹುಮಾನ ಘೋಷಿಸಿದ್ದಾರೆ.

Tags:

error: Content is protected !!