ಖಾನಾಪೂರ ತಾಲೂಕಾ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸಭೆ ತಾಲೂಕಾ ಅಧ್ಯಕ್ಷ ಸೂರ್ಯಕಾಂತ ಕುಲಕರ್ಣಿ ಅವರ ಅಧ್ಯಕ್ಷತೆಯಲ್ಲಿ ತಾಲೂಕಾ ಪಂಚಾಯತ್ ಕಛೇರಿಯ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸಭಾಗೃಹದಲ್ಲಿ ನಡೆಯಿತು
ಈ ಸಂದರ್ಭದಲ್ಲಿ ಮಾತನಾಡಿದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸದಸ್ಯ ಇಸಾಕ್ ಖಾನ್ ಪಠಾಣ್ ಅವರು ಇನ್ನೂ ವರೆಗೂ ಗೃಹ ಲಕ್ಷ್ಮೀ ಫಲಾನುಭವಿಗಳಿಗೆ ಬರಬೇಕಾದ ಬಾಕಿ ಹಣ ಬಂದಿಲ್ಲ ಮತ್ತು ಹೊಸ ಅರ್ಜಿ ಹಾಕುವುದು ಯಾವಾಗ ಎಂದು ಪ್ರಶ್ನೆ ಉದ್ಭವಿಸಿದರು ಇದಕ್ಕೆ ಸಂಬಂಧಿಸಿದಂತೆ ಸಿಡಿಪಿಒ ಇಲಾಖೆಯ ಅಧಿಕಾರಿಗಳು ಆದಷ್ಟು ಬೇಗ ಬಾಕಿ ಉಳಿದ ಹಣ ಜಮಾ ವಾಗಲಿದೆ ಎಂದು ಮಾಹಿತಿ ನೀಡಿದರು ಅದರಂತೆಯೇ ಅಧ್ಯಕ್ಷ ಸೂರ್ಯಕಾಂತ ಕುಲಕರ್ಣಿ ಅವರು ಮಾತನಾಡಿ ಫಲಾನುಭವಿಗಳ ಪರಿಶೀಲನೆ ನಡೆದ ನಂತರವೇ ಹೊಸ ಅರ್ಜಿ ಹಾಕುವ ಪ್ರಕ್ರಿಯೆ ನಡೆಯಲಿದೆ ಎಂದರು. ತದನಂತರದಲ್ಲಿ ಹೆಸ್ಕಾಂ, ಸಾರಿಗೆ ಸೇರಿದಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗಳಿಗೆ ಸಂಬಂಧಿಸಿದ ವಿಷಯಗಳು ಚರ್ಚೆಗೆ ಬಂದು ಆಯಾ ಇಲಾಖೆಯ ವತಿಯಿಂದ ಮಾಹಿತಿ ಪಡೆದುಕೊಂಡರು ಈ ಸಂದರ್ಭದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸದಸ್ಯರು ಇದಕ್ಕೆ ಸಂಬಂಧಿಸಿತ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಕಾರ್ಯದರ್ಶಿ ರಮೇಶ್ ಮೇತ್ರಿ ಅವರು ಸ್ವಾಗತಿಸಿ ಸರ್ಕಾರದ ಆದೇಶಗಳನ್ನು ಓದಿ ತಿಳಿಸಿದರು.
ಅಲ್ತಾಫ್ ಎಂ ಬಸರೀಕಟ್ಟಿ
ಇನ್ ನ್ಯೂಸ್ ಖಾನಾಪೂರ
