ಆರ್ ಎಸ್ RSS ಸಭೆಯಾದಲ್ಲಿ ಹತ್ಯೆ ಆಗಿವೆ ಎಂಬ ಬಿ.ಕೆ. ಹರಿಪ್ರಸಾದ್ ಹೇಳಿಕೆ ವಿಚಾರವಾಗಿ ಧಾರವಾಡದಲ್ಲಿ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಅವರು ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. ಕಾಂಗ್ರೆಸ್‌ನವರ ಆರ್ ಎಸ್ ಎಸ್ ವಿರೋಧಿ ಧೋರಣೆಯನ್ನು ಕಟುವಾಗಿ ಟೀಕಿಸಿದ್ದಾರೆ.

ಜಿಬಿಎ ಚುನಾವಣೆ ಮುಂದೂಡಿಕೆ ವಿಚಾರವಾಗಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಬೊಮ್ಮಾಯಿ, ಸುಪ್ರೀಂ ಕೋರ್ಟ್ ಎರಡು ಬಾರಿ ಕೊನೆಯ ದಿನಾಂಕವನ್ನು ಸ್ಪಷ್ಟಪಡಿಸಿದ ನಂತರವೂ ಚುನಾವಣೆ ಮುಂದೂಡಲು ಅರ್ಜಿ ಸಲ್ಲಿಸಿರುವುದು ಸರ್ಕಾರದ ಹುನ್ನಾರವನ್ನು ತೋರಿಸುತ್ತದೆ ಎಂದರು. ಆಂತರಿಕವಾಗಿ ಗೆಲ್ಲಲು ಸಾಧ್ಯವಿಲ್ಲ ಎಂಬ ಭಯದಿಂದಲೇ ಎಸ್‌ಐಆರ್ ನೆಪವೊಡ್ಡಿ ಇಂತಹ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಬೆಂಗಳೂರಿನ ಜನತೆ ಈಗಾಗಲೇ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದು, ಕಾಗದದ ಮೇಲಷ್ಟೇ ಹಣದ ಬಿಡುಗಡೆ ಘೋಷಿಸಲಾಗುತ್ತಿದೆ. ಕಾಂಟ್ರಾಕ್ಟರ್‌ಗಳಿಗೆ ಹಳೆಯ ಬಿಲ್‌ಗಳನ್ನೇ ಪಾವತಿಸದ ಕಾರಣ ಯಾರೂ ಹೊಸ ಕೆಲಸಕ್ಕೆ ಮುಂದೆ ಬರುತ್ತಿಲ್ಲ. ಇದರ ನಡುವೆ ವರ್ಷಗಳಿಂದ ವಾಸವಿರುವ ಮನೆಗಳಿಗೆ ಹಣ ವಸೂಲಿ ಮಾಡಿ ಎ ಹಾಗೂ ಬಿ ಖಾತಾ ನೀಡುವ ದಂಧೆ ನಡೆಯುತ್ತಿದೆ ಎಂದು ಆರೋಪಿಸಿದರು.
ಆರ್ ಎಸ್ ಎಸ್ ಸಭೆಯಾದಲ್ಲಿ ಹತ್ಯೆಗಳಾಗಿವೆ ಎಂಬ ಬಿ.ಕೆ. ಹರಿಪ್ರಸಾದ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ, ಕಾಂಗ್ರೆಸ್‌ನವರು ಮೂಲತಃ ಆರ್ ಎಸ್ ಎಸ್ ವಿರೋಧಿಗಳಾಗಿದ್ದು, ಅವರಿಂದ ಯಾವುದೇ ಸಕಾರಾತ್ಮಕ ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎಂದರು. ಇಂತಹ ವಿರೋಧಿಗಳನ್ನು ಎದುರಿಸಿಯೇ ಸಂಘಟನೆ ಗಟ್ಟಿಯಾಗಿದ್ದು, ಇಂದಿರಾ ಗಾಂಧಿ ಅವರಿಗೇ ಸಂಘಟನೆಯನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ ಎಂದು ನೆನಪಿಸಿದರು. ಸಿದ್ದರಾಮಯ್ಯ ಅವರ ಸರ್ಕಾರ ಅಧಿಕಾರದಲ್ಲಿದ್ದಾಗಲೂ ಹತ್ಯೆ ಮಾಡಿದವರನ್ನು ಪತ್ತೆ ಹಚ್ಚಲು ಇವರಿಂದ ಸಾಧ್ಯವಾಗಿಲ್ಲ. ಕೊಲೆಗಾರರನ್ನು ಗುರುತಿಸಲಾಗದ ಇವರು ಸೆಕ್ಯುಲರ್ ಎಂದು ಹೇಳಿಕೊಳ್ಳುವುದು ಕೇವಲ ಸುಳ್ಳು. ಸೆಕ್ಯುಲರಿಸಂ ಎಂಬ ಪದವನ್ನು ಕೇವಲ ಮತಗಳನ್ನು ಸೆಳೆಯುವ ರಾಜಕೀಯ ಅಸ್ತ್ರವಾಗಿ ಬಳಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ರಾಜ್ಯದಲ್ಲಿ ತಲೆದೋರಿರುವ ಬರಗಾಲ ಮತ್ತು ಎಸ್‌ಐಆರ್ ಪರಿಸ್ಥಿತಿ ಕುರಿತು ಮಾತನಾಡಿದ ಅವರು, ಈಗಾಗಲೇ ಬಿಜೆಪಿಯ ಹಿರಿಯ ನಾಯಕರು ಜಿಲ್ಲಾವಾರು ಪ್ರವಾಸ ಹಮ್ಮಿಕೊಂಡು ಸಭೆಗಳನ್ನು ನಡೆಸುತ್ತಿದ್ದಾರೆ ಎಂದರು. ನಾನು ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಹಾವೇರಿ, ಧಾರವಾಡ ಹಾಗೂ ಬೆಳಗಾವಿ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದೇವೆ. ನಮ್ಮ ಪಕ್ಷದ ಅಧ್ಯಕ್ಷರು ಸಹ ಬರ ಅಧ್ಯಯನ ಪ್ರವಾಸದಲ್ಲಿದ್ದಾರೆ. ರಾಜ್ಯದ ಬರ ಪರಿಸ್ಥಿತಿ ಮತ್ತು ಎಸ್‌ಐಆರ್ ಪರಿಸ್ಥಿತಿಯನ್ನು ಜಂಟಿಯಾಗಿ ಸಮೀಕ್ಷೆ ನಡೆಸಿ, ನೊಂದ ಜನರಿಗೆ ನ್ಯಾಯ ಒದಗಿಸಲು ಬಿಜೆಪಿ ಬದ್ಧವಾಗಿದೆ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಸ್ಪಷ್ಟಪಡಿಸಿದರು.
