ಧಾರವಾಡದ ನವಲಗುಂದ ಸರ್ಕಾರಿ ಆಸ್ಪತ್ರೆಯಲ್ಲಿ ಪೆಂಟರಗೆ ಪೆಂಟಿಂಗ್ ಮಾಡುವ ವೇಳೆ ವಿದ್ಯುತ್ ತಗುಲಿದ್ದು, ಗುತ್ತಿಗೆದಾರ ಪೆಂಟರನನ್ನು ಆಸ್ಪತ್ರೆಗೆ ದಾಖಲಿಸಿದ ನಂತರ ಪರಾರಿಯಾದ ಘಟನೆ ನಡೆದಿದ್ದು, ಪೆಂಟರ್ ಜೀವನ ಮರಣದ ಮಧ್ಯೆ ಹೋರಾಟ ನಡೆಸಿದ್ದಾರೆ.

ಹೌದು…ಕಳೆದ ಐದು ದಿನಗಳ ಹಿಂದೆ ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕಿನ ತಾಲೂಕು ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಧಾರವಾಡದ ಕುಂದಗೋಳ ತಾಲೂಕಿನ ಸಂಶಿ ಮೂಲದ ಮಂಜುನಾಥ್ ವಿದ್ಯುತ್ ಶಾಕ್ ಹೊಡದು ಗಂಭೀರ ಗಾಯಗೊಂಡ ಪೆಂಟರ್‌ರಾಗಿದ್ದಾರೆ. ವಿದ್ಯುತ್ ಶಾಕ್ ಹೊಡೆದ ಹಿನ್ನೆಲೆ ಮೈಯಲ್ಲಾ ಸುಟ್ಟು ಗಾಯಗಳಾಗಿದ್ದು, ಸಾವು ಬದುಕಿನ ನಡುವೆ ಹೋರಾಟ ಮಂಜುನಾಥ್ ಹೋರಾಟ ನಡೆಸಿದ್ದಾರೆ. ಪೆಂಟರ್ ಗಂಭೀರ ಗಾಯವಾಗಿದ್ದಾನೆ ಎಂದು ಗೊತ್ತಿದ್ದರೂ ಗುತ್ತಿಗೆದಾರ ಆತನಿಗೆ ಹುಬ್ಬಳ್ಳಿ ಕಿಮ್ಸಗೆ ದಾಖಲಿಸಿ ಓಡಿ ಹೋಗಿದ್ದಾನೆ. ಈ ಹಿನ್ನೆಲೆಯಲ್ಲಿ ಗಾಯಗೊಂಡ ಮಂಜುನಾಥ್ ತಂದೆಯಿಂದ ಗುತ್ತಿಗೆದಾರ ಬಸವರಾಜ್ ವಿರುದ್ಧ ದೂರು ದಾಖಲು ಮಾಡಲಾಗಿದೆ.
