Dharwad

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಧಾರವಾಡದಲ್ಲಿ ಬೀದಿಗೆ ಇಳಿದ ಅಕ್ಷರದಾಶೋಹಿಗಳು..

Share

ರಾಜ್ಯ ಕಾಂಗ್ರೆಸ್ ಸರ್ಕಾರ ಈ ಹಿಂದೆ 7ಸಾವಿರ ರೂಪಾಯಿ ವೇತನ ಏರಿಕೆ ಮಾಡಬೇಕು ಹಾಗೂ ಇಸ್ಕಾನ್‌ಗೆ ಮಕ್ಕಳ ಬಿಸಿ ಊಟ ನೀಡುವ ಪ್ರಸ್ತಾಪ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ, ಧಾರವಾಡದಲ್ಲಿ ಅಕ್ಷರದಾಶೋಹಿಗಳು ಬೀದಿಗೆ ಇಳಿದು ಪ್ರತಿಭಟನೆ ಮಾಡುವ ಮೂಲಕ ಸರ್ಕಾರದ ವಿರುದ್ಧ ತಮ್ಮ ಅಸಮಧಾನ ಹೊರಹಾಕಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಕರ್ನಾಟಕ ರಾಜ್ಯ ಅಕ್ಷರದಾಸೋಹಿಗಳ ನೌಕರರ ಮಂಡಳಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಬಡ ದಾಸೋಹಿಗಳು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಈಗಾಗಲೇ ಅಕ್ಷರ ದಾಸೋಹ ಜಾರಿ ಮಾಡಿ 25 ವರ್ಷಗಳು ತುಂಬಿವೆ, ಆದರೆ ಬಿಸಿಯೂಟ ನೀಡುವ ಬಡ ಮಹಳಿಯರಿಗೆ ವೇತನ ಏರಿಕೆ ಮಾಡಿಲ್ಲ. ಈ ಹಿಂದೆ ಕಾಂಗ್ರೆಸ್ ಸರ್ಕಾರ ದಾಸೋಹಿಗಳಿಗೆ 7ಸಾವಿರ ರೂಪಾಯಿ ವೇತನ ನೀಡುವುದಾಗಿ ಹೇಳಿತ್ತು, ಆದರೆ ಅದೂ ಇದೂವರೆಗೂ ಜಾರಿ ಮಾಡಿಲ್ಲ. ಇದಲ್ಲದೆ ಈಗ ಸರ್ಕಾರ ಬಿಸಿಯೂಟ ಯೋಜನೆಯನ್ನು ಇಸ್ಕಾನವರಿಗೆ ನೀಡುವ ಹುನ್ನಾರ ನಡೆಸುತ್ತಿದೆ. ಅಕ್ಷರ ದಾಸೋಹಿಗಳ ಹೊಟ್ಟೆ ಮೇಲೆ ಹೊಡೆಯುವ ಕೆಲಸಕ್ಕೆ ಮುಂದಾಗಿದೆ. ಈ ಕೂಡಲೇ ಇಸ್ಕಾನಗೆ ಬಿಸಿಯೂಟ ನೀಡುವ ಪ್ರಸ್ತಾವನೆ ಕೈ ಬೀಡಬೇಕು, ಕೊಟ್ಟ ಮಾತಿನಂತೆ 7 ಸಾವಿರಕ್ಕೆ ವೇತನ ಏರಿಕೆ ಮಾಡಬೇಕು. ಜತೆಗೆ ನಮ್ಮ ಬೇಡಿಜೆಗಳುಗೆ ಸ್ಪಂದಿಸಬೇಕು ಎಂದು ಆಗ್ರಹಿಸಿದರು. ಒಂದುವೇಳೆ ಸ್ಒಂದನೆ ಸಿಗದಿದ್ದಲ್ಲಿ ಉಗ್ರ ಹೋರಾಟವನ್ನು ರಾಜ್ಯ ವ್ಯಾಪಿ ನಡೆಸಬೇಕಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದರು.

Tags:

error: Content is protected !!