Belagavi

ವಿದ್ಯಾಭಾರತಿ ಜಿಲ್ಲಾ ಮಟ್ಟದ ಖೋ-ಖೋ ಪಂದ್ಯಾವಳಿ: ಶಾಂತಿನಿಕೇತನ, ದೇವೇಂದ್ರ ಜೀನಗೌಡ, ಸಂತ ಮೀರಾ ಶಾಲೆಗಳು ಫೈನಲ್‌ಗೆ

Share

ಬೆಳಗಾವಿಯ ಸಂತ ಮೀರಾ ಇಂಗ್ಲಿಷ್ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿದ್ಯಾಭಾರತಿ ಜಿಲ್ಲಾ ಮಟ್ಟದ ಖೋ-ಖೋ ಪಂದ್ಯಾವಳಿಯ ವಿವಿಧ ವಿಭಾಗಗಳಲ್ಲಿ ಖಾನಾಪುರದ ಶಾಂತಿನಿಕೇತನ ಪಬ್ಲಿಕ್ ಸ್ಕೂಲ್, ಶಿಂದೊಳ್ಳಿಯ ದೇವೇಂದ್ರ ಜೀನಗೌಡ ಸ್ಕೂಲ್ ಮತ್ತು ಗಣೇಶಪುರದ ಸಂತ ಮೀರಾ ಸ್ಕೂಲ್ ತಂಡಗಳು ಭರ್ಜರಿ ಪ್ರದರ್ಶನ ನೀಡಿ ಅಂತಿಮ ಸುತ್ತಿಗೆ ಲಗ್ಗೆ ಇಟ್ಟಿವೆ.

ಸಂತ ಮೀರಾ ಅನಗೋಳದಲ್ಲಿ ನಡೆದ ಈ ಜಿಲ್ಲಾ ಮಟ್ಟದ ಖೋ-ಖೋ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಸಂತ ಮೀರಾ ಇಂಗ್ಲಿಷ್ ಶಾಲೆ ಗಣೇಶಪುರ ಹಿಂಡಲಗಾದ ಅಧ್ಯಕ್ಷರಾದ ಡಾ. ವಿಜಯಕುಮಾರ್ ಗೋವೇಕರ್, ಶಾಲೆಯ ಮುಖ್ಯೋಪಾಧ್ಯಾಯಿನಿ ಆರತಿ ಪಾಟೀಲ್, ಚಂದ್ರಕಾಂತ್ ಪಾಟೀಲ್, ಅನುರಾಧಾ ಪುರಿ, ಕ್ರೀಡಾ ಶಿಕ್ಷಕರಾದ ಶ್ರೀಕಾಂತ್ ಕಾಂಬಳೆ, ಶುಭಾಂಗಿ ಕಾಕತ್ಕರ್, ಶಿವಕುಮಾರ್ ಸುತಾರ್, ಗಂಗಾ ಗಾನಿಕೊಪ್ಪ ಮತ್ತು ಸಾಗರ್ ಕೋಲೇಕರ್ ಸೇರಿದಂತೆ ಹಲವು ಗಣ್ಯರು ಜಂಟಿಯಾಗಿ ಕ್ರೀಡಾಪಟುಗಳ ಪರಿಚಯ ಹಾಗೂ ಟಾಸ್ ಪ್ರಕ್ರಿಯೆ ನಡೆಸುವ ಮೂಲಕ ಸ್ಪರ್ಧೆಗೆ ಚಾಲನೆ ನೀಡಿದರು. ಈ ಪ್ರಸಂಗದಲ್ಲಿ ಸ್ವಾತಿ ಸಾವಂತ್, ಶಿವಕುಮಾರ್, ಪೂರ್ಣಿಮಾ ಬಾಳೇಕಾಯಿ, ಸುಜಿತ್ ನೇರುಲ್ಕರ್ ಹಾಗೂ ಸೂರಜ್ ದೇಸೂರ್ಕರ್ ಮುಂತಾದ ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಚಂದ್ರಕಾಂತ್ ಪಾಟೀಲ್ ನಿರೂಪಿಸಿದರೆ, ಶ್ರೀಕಾಂತ್ ಕಾಂಬಳೆ ವಂದಿಸಿದರು.

Tags:

error: Content is protected !!