State

ನಮ್ಮ ಭಾಷೆ, ನಾಡಿನ ವಿಚಾರದಲ್ಲಿ ಕೈಯಾಡಿಸಿದ್ರೆ ಸುಮ್ಮನಿರಲ್ಲ: ಮಹಾರಾಷ್ಟ್ರ ಸಿಎಂಗೆ ಪ್ರಿಯಾಂಕ್ ಖರ್ಗೆ ಖಡಕ್ ಎಚ್ಚರಿಕೆ!

Share

ಬೆಳಗಾವಿ ಗಡಿ ಬಗ್ಗೆ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಅವರ ನಡೆ ವಿಚಾರವಾಗಿ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್ ಖರ್ಗೆ, ‘ನೀವು ಯಾರಿಗಾದ್ರೂ ಸಪೋರ್ಟ್ ಮಾಡಿ, ಆದರೆ ನಿಮ್ಮ ಪ್ರೋತ್ಸಾಹದಿಂದ ನಮಗೆ ಅಡ್ಡಿಯಾಗಬಾರದು. ನಮ್ಮ ಭಾಷೆ, ನಾಡಿನ ವಿಚಾರದಲ್ಲಿ ಕೈಯಾಡಿಸಿದ್ರೆ ನಾವು ಸುಮ್ಮನಿರುವವರಲ್ಲ, ಮಾತನಾಡುವಾಗ ನೋಡಿ ಮಾತನಾಡಿ’ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಬೆಳಗಾವಿ ಗಡಿ ಬಗ್ಗೆ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ನಡೆ ವಿಚಾರವಾಗಿ ಮಾತನಾಡಿ, ‘ನೀವು ಯಾರಿಗಾದ್ರೂ ಸಪೋರ್ಟ್ ಮಾಡಿ. ನಿಮ್ಮಿಂದ ಹಾಗೂ ನಿಮ್ಮ ಪ್ರೋತ್ಸಾಹದಿಂದ ಅಡ್ಡಿಯಾಗಬಾರದು. ನಮ್ಮ ಭಾಷೆ,ನಾಡಿನ ವಿಚಾರದಲ್ಲಿ ಕೈಯಾಡಿಸಿದ್ರೆ ಆಗಲ್ಲ. ನಾವು ಅದಕ್ಕೆಲ್ಲ ಸುಮ್ಮನಿರುವವರಲ್ಲ’ಎಂದು ಎಚ್ಚರಿಕೆ ನೀಡಿದರು. ನಿಮಗೆ ನಿಮ್ಮ ರಾಜ್ಯದ ಪ್ರೀತಿ ಎಷ್ಟಿದೆ, ಅದಕ್ಕಿಂತ ಹೆಚ್ಚಾಗಿ ನಮ್ಮ ರಾಜ್ಯದ ಬಗ್ಗೆ ನಮಗಿದೆ. ನಮ್ಮ ಕನ್ನಡಿಗರ ಬಗ್ಗೆ ನಮಗಿದೆ, ಮಾತನಾಡುವಾಗ ನೋಡಿ ಮಾತನಾಡಿ. ಕಾನೂನು ಸುವ್ಯವಸ್ಥೆ ನೋಡಿ ಮಾತನಾಡಿ ಎಂದು ತಿರುಗೇಟು ನೀಡಿದರು. ಕೇಂದ್ರ, ಸುಪ್ರೀಂ ಕೋರ್ಟ್ ಇದೆ. ಕಾನೂನು ಪ್ರಕಾರ ಅಲ್ಲಿಗೆ ಹೋಗಿ. ಸುಮ್ಮನೆ ಮನಸ್ಸಿಗೆ ಬಂದಂತೆ ಹೇಳೋದಲ್ಲ ಎಂದು ಫಡ್ನವಿಸ್ ಗೆ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದರು.

ರಾಮಮಂದಿರ ದೇಣಿಗೆ ಲೂಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ ಎಸ್ ಎಸ್ ಬೈಠಕ್ ನಲ್ಲಿ ಕೈಗೊಂಡ ನಿರ್ಣಯ ಚರ್ಚೆ ವಿಚಾರವಾಗಿ ಇದೇ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿ, ‘ಅವರು ಬೆಳಗಾವಿಯಲ್ಲಿ ಬೈಠಕ್ ಮಾಡಿಕೊಳ್ಳಲಿ. ದೇಣಿಗೆ ವಿಚಾರವಾಗಿ ಪಾರದರ್ಶಕತೆ ತರಲಿ. ಎಲ್ಲದರಲ್ಲೂ ಕ್ರೆಡಿಟ್ ತೆಗೆದುಕೊಳ್ತಾರೆ. ರಾಮಮಂದಿರದ ಬಗ್ಗೆಯೂ ತೆಗೆದುಕೊಳ್ಳಿ ಎಂದರು. ಚಂಪತ್ ರಾಯ್ ಕಂಪನಿ ಬಗ್ಗೆ ಮಾತನಾಡಿ, ಲೂಟಿಯಲ್ಲಿ ನಿಮಗೆ ಎಷ್ಟು ಪಾಲು ಬಂದಿದೆ. ಭಕ್ತರಿಗೆ ಆಗಿರುವ ನೋವು ಹೇಳಬೇಕಲ್ಲ. ಕಳ್ಳತನ ಆಗಿರೋದಕ್ಕೆ ಕಾರಣ ಕೊಡಿ. ಯಾವುದೋ ಒಂದು ಚಾನಲ್ ಗೆ ಹೇಳೋದಲ್ಲ. ಅದನ್ನು ಸೋಷಿಯಲ್ ಮಿಡಿಯಾದಲ್ಲಿ ಹಾಕೋದಲ್ಲ.
ಲೂಟಿಯಲ್ಲಿ ನಿಮಗೆ ಎಷ್ಟು ಪಾಲು ಬಂದಿದೆ. ಭಕ್ತರಿಗೆ ಆಗಿರುವ ನೋವು ಹೇಳಬೇಕಲ್ಲ. ಕಳ್ಳತನ ಆಗಿರೋದಕ್ಕೆ ಕಾರಣ ಕೊಡಿ. ಆಮೇಲೆ ಯಾವ ನಿರ್ಣಯ ಬೇಕಾದ್ರೂ ತೆಗೆದುಕೊಳ್ಳಿ ಎಂದರು. ಯಾರ್ಯಾರು ಎಷ್ಟು ದೇಣಿಗೆ ಪಡೆದಿದ್ದೀರಾ? ರಿಜಿಸ್ಟರ್ ಇಲ್ಲ ಅಂದ್ರೆ ದಕ್ಷಿಣೆ ಹೇಗೆ ಪಡೆದ್ರಿ? ಯಾರ್ಯಾರು ಎಷ್ಟೆಷ್ಟು ತೆಗೆದುಕೊಂಡಿದ್ದೀರಿ? ಇದರ ಬಗ್ಗೆ ಹೇಳಬೇಕಲ್ಲ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಇನ್ನು ಲೋಪಗಳು, ನೂನ್ಯತೆಗಳನ್ನು ಸರಿಪಡಿಸಿ ಎಸ್.ಐ.ಆರ್ ಪಾರದರ್ಶಕವಾಗಿ ಆಗಲಿ. ಚುನಾವಣೆ ಆಯೋಗಕ್ಕೆ ಹೋಗಿ ಬಿಜೆಪಿಗರು ದೂರು ನೀಡಿದ್ದಾರೆ. ಮನ ಬಂದಂತೆ ಹೆಸರುಗಳನ್ನು ತೆಗೆಯುತ್ತಿದ್ದಾರೆ. ಬಿಜೆಪಿಗರನ್ನು ಗೆಲ್ಲಿಸಲು ಇದು ಸಂಚಾಗಿದೆ. ಪಾಸಪೋರ್ಟ್ ಟ್ರಾವೆಲ್ಸ್ ಕಾಗದ, ಆಧಾರ ಬೇಡ ಎಲ್ಲವನ್ನು ನೀಡಿದರೂ ಸರಿಯಿಲ್ಲ ಎನ್ನುತ್ತಿದ್ದೀರಿ. ಇದು ಸರ್ಕಾರ ನಡೆಸುವ ರೀತಿಯೇ? ಬಿಜೆಪಿ-ಜೆಡಿಎಸ್’ನವರು ತಮ್ಮ ನಾಯಕತ್ವ ಉಳಿಸಿಕೊಳ್ಳಲು ನೋಡುತ್ತಿದ್ದಾರೆ. ಅಡ್ಡ ಮತದಾನ ಬಿಜೆಪಿಗೆ ಮುಖಭಂಗವಾಗಿದೆ ಎಂದರು.

Tags:

error: Content is protected !!