Vijaypura

ಸಮುದ್ರದ ಅಲೆಗಳ ಅಬ್ಬರಕ್ಕೆ ಸಿಲುಕಿ ದೇವರಹಿಪ್ಪರಗಿ ಯುವಕನ ಸಾವು; ವಿಡಿಯೋ ವೈರಲ್

Share

ಸಮುದ್ರದ ಅಲೆಗಳ ಅಬ್ಬರಕ್ಕೆ ಸಿಲುಕಿ ದೇವರಹಿಪ್ಪರಗಿ ಯುವಕನ ಸಾವನ್ನಪ್ಪಿದ ದುರ್ಘಟನೆ ಸಂಭವಿಸಿದೆ. ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ಪಟ್ಟಣದ ಯುವಕನೋರ್ವ ಸಮುದ್ರ ಪಾಲಾದ ಘಟನೆ ಗೋವಾದ ಬಾಗಾ ಬೀಚ್‌ನಲ್ಲಿ ನಡೆದಿದೆ. ದೇವರಹಿಪ್ಪರಗಿಯ ಅಸ್ಪಾಕ್ ಮಸಳಿ (34) ಮೃತ ಯುವಕ. ಗೋವಾ ಪ್ರವಾಸಕ್ಕೆ ಹೋಗಿದ್ದ ಸಮಯದಲ್ಲಿ ಅಪಾಯಕಾರಿ ಜಾಗದ ಮೇಲೆ ಕುಳಿತು ಸಮುದ್ರದ ಅಲೆಗಳ ಅಬ್ಬರಕ್ಕೆ ಸಿಲುಕಿ ದುರಂತ ಸಂಭವಿಸಿದೆ. ಮೃತರಿಗೆ ಪತ್ನಿ ಮೂವರು ಮಕ್ಕಳಿದ್ದಾರೆ. ಹುಡುಕಾಟದ ಕಾರ್ಯಾಚರಣೆಯ ನಂತರ ಅವರ ಮೃತದೇಹ ಪತ್ತೆಯಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಲೆಗಳು ಅವರನ್ನು ನುಂಗುವ ಮುನ್ನ ಅವರು ಅಪಾಯಕಾರಿ ಜಾಗದಲ್ಲಿ ಕುಳಿತಿರುವುದು ಗೊತ್ತಾಗಿದೆ. ಮೃತ ಅಸ್ಪಾಕ್ ಮೃತದೇಹ ಗುರುವಾರ ರಾತ್ರಿ ಪಟ್ಟಣಕ್ಕೆ ಬರಲಿದ್ದು, ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ಅಪಾಯದ ಜಾಗೆಯಲ್ಲಿ ಯುವಕರು ಜಾಗೃತರಾಗಿರಬೇಕೆನ್ನುವುದು ಈ ವೈರಲ್ ವಿಡಿಯೋ ಜಾಗೃತಿ ಮೂಡಿಸುತ್ತಿದೆ.

Tags:

error: Content is protected !!