Vijaypura

ಆಧ್ಯಾತ್ಮ ಭಾರತೀಯರ ಉಸಿರು: ಸಂಗಮೇಶ ಬಬಲೇಶ್ವರ

Share

“ಜಗತ್ತಿಗೆ ವೇದೋಪನಿಷತ್ತುಗಳು ಹಾಗೂ ವಚನ ಸಾಹಿತ್ಯವನ್ನು ಕೊಟ್ಟವರು ಭಾರತೀಯರು, ಆಧ್ಯಾತ್ಮ ನಮ್ಮ ಉಸಿರು ಸಂಸ್ಕಾರಯುದ್ಧ ಜೀವನ ನಮ್ಮ ಬಾಳಿನ ಬೆಳಕು ಹಾಗಾಗಿ ನಮ್ಮ ದೇವಾಲಯಗಳು ನಮ್ಮ ಉಸಿರು ಹಾಗೂ ನಮ್ಮೆಲ್ಲರ ಬಾಳಿಗೆ ಬೆಳಕು ಚೆಲ್ಲುವ ಆಧ್ಯಾತ್ಮಿಕತೆಯ ಶ್ರದ್ಧಾ ಕೇಂದ್ರಗಳಾಗಿವೆ” ಎಂದು ಕರ್ನಾಟಕ ರಾಜ್ಯ ಬಾಲವಿಕಾಸ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು. ಅವರು ವಿಜಯಪುರ ನಗರದ ಅಭಿವೃದ್ಧಿ ಬಡಾವಣೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಅಭಯಾಂಜನೇಯ ದೇವಾಲಯದ ಮೂರ್ತಿ ಪ್ರತಿಷ್ಠಾಪನೆ ಕಳಸಾರೋಹನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

” ಪ್ರತಿ ಬಡಾವಣೆಯಲ್ಲಿರುವ ದೇವಾಲಯಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಭಗವಂತನ ನಿಜವಾದ ಸ್ವರೂಪವಾಗಿರುವ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ, ಅವರ ಪ್ರತಿಭೆಯ ಅಭಿವ್ಯಕ್ತಿಗೆ ಸಹಕಾರಿಯಾಗಬಹುದಾದ ಕಾರ್ಯಕ್ರಮಗಳನ್ನು ಪ್ರತಿ ವರ್ಷ ರೂಪಿಸಬೇಕೆಂದು ಮನವಿ ಮಾಡಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ಹುಬ್ಬಳ್ಳಿಯ ಎರಡೇತ್ತಿನ ಮಠ ಹಾಗೂ ನಿಡೋನಿಯ ಶ್ರೀಮಠದ ಪರಮಪೂಜ್ಯಶ್ರೀ ಸಿದ್ದಲಿಂಗೇಶ್ವರ ಮಹಾಸ್ವಾಮಿಜಿಗಳು ಆಶೀರ್ವಚನ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಸ್ಥಾನದ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀ ಎಸ್ ಎನ್ ಅರಿಕೇರಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿಜಯಪುರ ಮಹಾನಗರ ಪಾಲಿಕೆಯ ಮಹಾಪೌರ ಶ್ರೀ ಎಂ ಎಸ್ ಕರಡಿ, ವಿ ಡಿ ಏ ಅಧ್ಯಕ್ಷ ಡಾ ಗಂಗಾಧರ ಸಂಬಂಣ್ಣಿ, ಮಹಾನಗರ ಪಾಲಿಕೆಯ ಸದಸ್ಯರುಗಳಾದ ಶ್ರೀ ಪ್ರೇಮಾನಂದ ಬಿರಾದಾರ್ ಗಿರೀಶ್ ಬಿರಾದಾರ್,ಹಾಗೂ ಅಹಿಂದ ಮುಖಂಡರಾದ ಸೋಮನಾಥ ಕಳ್ಳಿಮನಿ, ಗುರುಲಿಂಗಪ್ಪ ಅಂಗಡಿ ,ಡಿ. ಜಿ ಬಿರಾದಾರ, ಉಮೇಶ್ ವಂದಾಲ, ಸಂತೋಷ ತಳಕೇರಿ, ರತ್ನಾಕರ ಕುಲಕರ್ಣಿ, ವೈಕೆ ಕುಲಕರ್ಣಿ, ಜಗದೀಶ್ ಇಂಡಿ, ಡಾ ಸೋಮು ನಿಡೋಣಿ, ಬಸವರಾಜ್ ಬಂಗಾರಿ, ಕೊಟ್ರೇಶ್ ಹರನಾಳ, ವಿರೇಶ್ ಬಂಗಾರಿ ಉಪಸ್ಥಿತರಿದ್ದರು ಶ್ರೀಮತಿ ಆಶಾ ನಿಡೋಣಿ ಶ್ರೀಮತಿ ಭಾರತಿ ಮುಚ್ಚಂಡಿ ಕಾರ್ಯಕ್ರಮ ನಿರೂಪಿಸಿದರು. ಬಾಲಾಜಿ ಸಿಂಗ್ ರಾಥೋಡ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಾಗೂ ಅಪಾರ ಸಂಖ್ಯೆಯ ಸದ್ಭಕ್ತರು ಪಾಲ್ಗೊಂಡಿದ್ದರು.

Tags:

error: Content is protected !!