Dharwad

ಧಾರವಾಡ ಪ್ರತ್ಯೇಕ ಪಾಲಿಕೆ ಹೋರಾಟ ಅಖಾಡಕ್ಕೆ ಕೇಂದ್ರ ಸಚಿವ ಜೋಶಿ ಎಂಟ್ರಿ.

Share

ಧಾರವಾಡ ಪ್ರತ್ಯೇಕ ಪಾಲಿಕೆ ಹೋರಾಟ ದಿನ ಕಳೆದಂತೆ ತೀವ್ರಗೊಳ್ಳುತ್ತಿದ್ದು, ಈ ಹೋರಾಟಕ್ಕೆ ಈಗ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಎಂಟ್ರಿಯಾಗಿದೆ. ಪ್ರತ್ಯೇಕ ಪಾಲಿಕೆ ವಿಚಾರವಾಗಿ ಚರ್ಚೆ ನಡೆಸಲು ಸಮಯ ಕೋರಿ ಜೋಸಿಯವರು ಈಗ ರಾಜ್ಯಪಾಲರಿಗೆ ಪತ್ರ ಬರೆದಿದ್ದು, ಈ ವಿಷಯ ಹೋರಾಟಗಾರ ಹಿರಿಯ ನ್ಯಾಯವಾದಿ ಬಿಡಿ ಹಿರೇಮಠರೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಹೌದು ಧಾರವಾಡ ಪ್ರತ್ಯೇಕ ಪಾಲಿಕೆ ಆಗ್ರಹಿಸಿ ಈಗಾಗಲೇ ಧಾರವಾಡದ ಹುಬ್ಬಳ್ಳಿ ಧಾರವಾಡ ಮಾಹಾನಗರ ಪಾಲಿಕೆ ಮುಂಭಾಗದಲ್ಲಿ ಹೋರಾಟ ನಡೆಯುತ್ತಿದ್ದು, ಹೋರಾಟದ ಬಗ್ಗೆ ಮಾಹಿತಿ ಪಡೆದುಕೊಂಡ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ರಾಜ್ಯಪಾಲರಿಗೆ ಇದೇ ವಿಚಾರವಾಗಿ ಚರ್ಚೆ ನಡಸಲು ಸಮಯವಕಾಶ ನೀಡುವಂತೆ ಈಗ ಪತ್ರ ಬರೆದಿದ್ದು, ಹೋರಾಟಗಾರರ ಹೋರಾಟಕ್ಕೆ ಒಂದು ಹಂತ ಜಯ ಸಿಕ್ಕಿದೆ. ಈಗಾಗಲೇ ರಾಜ್ಯ ಸರ್ಕಾರ ಪ್ರತ್ಯೇಕ ಪಾಲಿಕೆ ಕುರಿತು ಅಸ್ತು ಅಂದಿದ್ದು, ಅದನ್ನು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲಾಗಿದೆ. ಆದರೆ ರಾಜ್ಯಪಾಲರು ಅಂಕಿತ ಹಾಕಲು ವಿಳಂಬ ಮಾಡುತ್ತಿದ್ದು, ಇದರ ಹಿಂದೆ ಬಿಜೆಪಿ ನಾಯಕರ ಕೈವಾಡವಿರುವುದಾಗಿ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು. ಸದ್ಯ ಈಗ ಈ ಹೋರಾಟಕ್ಕೆ ಮಣಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಈಗ ಎಂಟ್ರಿಯಾಗಿದೆ.

Tags:

error: Content is protected !!