Dharwad

ಪ್ರತ್ಯೇಕ ಮಹಾನಗರ ಪಾಲಿಕೆ ಹೋರಾಟ….ವಿಧಾನಸಭೆ ವಿಪಕ್ಷ ಬೆಲ್ಲದ ಧಾರವಾಡ ನಿವಾಸಕ್ಕೆ ಹೋರಾಟಗಾರರ ಮುತ್ತಿಗೆ ಯತ್ನ.

Share

ದಲ್ಲಿ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ ಪ್ರತ್ಯೇಕ ಮಹಾನಗರ ಪಾಲಿಕೆ ಹೋರಾಟ….ವಿಧಾನಸಭೆ ವಿಪಕ್ಷ ಬೆಲ್ಲದ ಧಾರವಾಡ ನಿವಾಸಕ್ಕೆ ಹೋರಾಟಗಾರರ ಮುತ್ತಿಗೆ ಯತ್ನ.

 

Anchor- ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆಗೆ ಸಾಸಕ ಅರವಿಂದ ಬೆಲ್ಲದ ಸೇರಿ ಬಿಜೆಪಿ ನಾಯಕರು ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಆರೋಪಿಸಿ ಧಾರವಾಡದಲ್ಲಿಂದು ಹೋರಾಟಗಾರರು, ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಅವರ ಧಾರವಾಡ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ‌

 

ವೈ- ದಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಹೋರಾಟ ಸಮಿತಿ, ಧಾರವಾಡ ಧ್ವನಿ ಸಂಘಡನೆ ಸೇರಿ ಕಾಂಗ್ರೆಸ್ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು , ನಗರದ ಓಲ್ಡ್ ಎಸ್ಪಿ ವೃತದ ಸಮೀಪ ಇರುವ ಶಾಸಕ ಅರವಿಂದ ಬೆಲ್ಲದ ಅವರ ನಿವಾಸಕ್ಕೆ ಪ್ರತಿಭಟನೆ ಮೆರವಣಿಗೆ ಮೂಲಕ ಆಗಮಿಸಿ ಮುತ್ತಿಗೆ ಯತ್ನಕ್ಕೆ ನಡೆಸಿದರು. ಈ ವೇಳೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಶಾಸಕ ಅರವಿಂದ ಬೆಲ್ಲದ ಸೇರಿ ಬಿಜೆಪಿ ನಾಯಕರ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ಹೊರಹಾಕಿದರು.‌ ರಾಜ್ಯ ಸರ್ಕಾರ ಧಾರವಾಡ ನಗರಕ್ಕೆ ಪ್ರತ್ಯೇಕ ಪಾಲಿಕೆ ಘೋಷಣೆ ಮಾಡಿ ಸಂತಿಮವಾಗಿ ರಾಜ್ಯಪಸಲರ ಅಂಕಿತಕ್ಕೆ ಕಳುಹಿಸಲಾಗಿದೆ. ಇದರ ಮಧ್ಯ ಬಿಜೆಪಿ ನಾಯಕರು ಧಾರವಾಡ ನಗರಕ್ಕೆ ಪ್ರತ್ಯೇಕ ಪಾಲಿಕೆಗೆ ಅಡ್ಡಗಾಲು ಹಾಕುತ್ತಿದ್ದಾರೆ. ಈ ಹಿಂದೆ ಶಾಸಕ ಅರವಿಂದ ಬದಲ್ಲದವರು ಪ್ರತ್ಯೇಕ ಪಾಲಿಕೆ ಹೋರಾಟದ ಪರವಾಗಿದ್ದರು. ಈಗ ತಮ್ಮ ನಾಯಕರ ಸ್ವಾರ್ಥ ರಾಜಕಾರಣಕ್ಕಾಗಿ ವಿರೋಧ ಮಾಡುತ್ತಿರುವುದು ಖಂಡನೀಯ. ಈ ಕೂಡಲೇ ಅರವಿಂದ ಬೆಲ್ಲದವರು ಪ್ರತ್ಯೇಕ ಪಾಲಿಕೆಗೆ ಕೈಜೋಡಿಸಬೇಕು, ಜತೆಗೆ ರಾಜ್ಯಪಾಲರು ಪ್ರತ್ಯೇಕ ಪಾಲಿಕೆ ಅಂಕಿತ ಹಾಕಬೇಕು. ರಾಜಕೀಯ ಮಾಡುತ್ತಿರುವುದು ಸರಿಯಲ್ಲ, ಒಂದು ವೇಳೆ ವಿಳಂಬ ಮುಂದುವರೆದಲ್ಲಿ ಉಗ್ರಹೋರಾಟಕ್ಕೆ ನಾವು ಮುಂದಾಗುವುದಾಗಿ ಖಡಕಗ ಎಚ್ಚರಿಕೆ ನೀಡಿದರು. ‌

Tags:

error: Content is protected !!