Dharwad

ಧಾರವಾಡ ಪ್ರತ್ಯೇಕ ಪಾಲಿಕೆಗಾಗಿ ಮತ್ತೊಂದು ಸುತ್ತಿನ ಹೋರಾಟಕ್ಕೆ ಇಳಿದ ಮುಖಂಡರು..

Share

ಧಾರವಾಡ ನಗರಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆಗೆ ಆಗ್ರಹಿಸಿ ಈಗ ಪ್ರತ್ಯೇಕ ಪಾಲಿಕೆ ಮುಖಂಡರು ಮತ್ತೊಂದು ಸುತ್ತಿನ ಹೋರಾಟಕ್ಕೆ ಇಳಿದಿದ್ದು, ಪ್ರತ್ಯೇಕ ಪಾಲಿಕೆ ವಿರೋಧಿಗಳ ವಿರುದ್ಧ ಆಕ್ರೋಶ ಹೊರಹಾಕಿದರು.‌

ನಗರದ ಹುಬ್ಬಳ್ಳಿ ಧಾರವಾಡ ಮಾಜಾನಗರ ಪಾಲಿಕೆಯ ಧಾರವಾಡ ಕಚೇರಿ ಮುಂಭಾಗದಲ್ಲಿ, ಧಾರವಾಡ ಪ್ರತ್ಯೇಕ ಪಾಲಿಕೆ ಹೋರಾಟ ಸಮಿತಿ, ಧಾರವಾಡ ಧ್ವನಿ ಸಂಘಟನೆ ಸೇರಿ ಕಾಂಗ್ರೆಸ್ ಪ್ರಮುಖರು ಧರಣಿ ಸತ್ಯಾಗ್ರಹ ಕೈಗೊಂಡಿದ್ದಾರೆ. ಧರಣಿ ಸತ್ಯಾಗ್ರಹವು ಇಂದು ಎರಡನೇ ದಿನಕ್ಕೆ ಕಾಲಿಟ್ಡಿದ್ದು, ಪ್ರತ್ಯೇಕ ಪಾಲಿಕೆ ವಿರೋಧಿಗಳ ವಿರುದ್ಧ ಧಿಕ್ಕಾರ ಕೂಗಿ ಹೆಚ್ ಡಿ ಎಂ ಸಿ ಸಾಕು ಡಿಎಂಸಿ ಬೇಕು ಎಂದು ಘೋಷಣೆ ಕೂಗಿದರು. ಈಗಾಗಲೇ ರಾಜ್ಯ ಸರ್ಕಾರ ಧಾರವಾಡ ನಗರಕ್ಕೆ ಪ್ರತ್ಯೇಕ ಪಾಲಿಕೆಗೆ ಕ್ರಮ ಕೈಗೊಂಡಿದೆ. ಇದರ ಮಧ್ಯ ಕೆಲವು ರಾಜಕೀಯ ಹಿತಾಶಕ್ತಿ ಮುಂದಿಟ್ಟುಕೊಂಡು ಅಡ್ಡಗಾಲು ಹಾಕುತ್ತಿದ್ದಾರೆ, ಇದು ಸರಿಯಲ್ಲ. ಧಾರವಾಡ ನಗರದ ಅಭಿವೃದ್ಧಿಗಾಗಿ ಪ್ರತ್ಯೇಕ ಪಾಲಿಕೆ ತುಂಬಾ ಅವಶ್ಯವಾಗಿದೆ. ರಾಜ್ಯಪಾಲರ ಬಳಿ ಇರುವ ಪ್ರತ್ಯೇಕ ಪಾಲಿಕೆ ಫೈಲ್‌ಗೆ ರಾಜ್ಯಪಾಲರು ಅಂಕಿತ ಹಸಕುವ ಮೂಲಕ ನಗರದ ಅಭಿವೃದ್ಧಿಗೆ ದಾರಿ ಮಾಡಿಕೊಡಬೇಕು. ರಾಜಕೀಯ ಹೊರತು ಪಡಿಸಿ ನಗರದ ಅಭಿವೃದ್ಧಿಗೆ ರಾಜ್ಯಪಾಲರು ದಾರಿ ಮಾಡಿಕೊಡಬೇಕು, ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಬೆದಕಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದ್ದರು. ‌

Tags:

error: Content is protected !!