BELAGAVI

ಬೆಳಗಾವಿ: ಆರ್.ಎಲ್.ಎಸ್ ಕಾಲೇಜಿನಲ್ಲಿ ಭರ್ಜರಿ ‘ಕನ್ನಡ ಜಾನಪದ ವೈಭವ’ ಉತ್ಸವ

Share

ಬೆಳಗಾವಿಯ ಪ್ರತಿಷ್ಠಿತ ರಾಜಾಲಖಮಗೌಡ ವಿಜ್ಞಾನ ಮಹಾವಿದ್ಯಾಲಯದಲ್ಲಿ (RLS) ಇಂದಿನ ಯುವ ಪೀಳಿಗೆಗೆ ನಮ್ಮ ನೆಲದ ಸಂಸ್ಕೃತಿಯನ್ನು ಪರಿಚಯಿಸುವ ನಿಟ್ಟಿನಲ್ಲಿ ‘ಕನ್ನಡ ಜಾನಪದ ವೈಭವ’ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಈ ಹಿನ್ನಲೆ ಬೃಹತ್ ಮೆರವಣಿಗೆ ನಡೆಯಿತು.

 

ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಆಗಮಿಸಿ ಉದ್ಘಾಟಿಸಿ ಮಾತನಾಡಿದ ಸನ್ಮಾನ್ಯ ಶ್ರೀ. ಮಹಾಂತೇಶ ಎಮ್. ಕವಟಗಿಮಠ, ಮಾಜಿ ಮುಖ್ಯ ಸಚೇತಕರು, ವಿಧಾನ ಪರಿಷತ್ತ ಕರ್ನಾಟಕ ಸರಕಾರ ಅವರು ಮಾತನಾಡುತ್ತಾ, ಸಾಹಿತ್ಯ-ಸಂಸ್ಕೃತಿ ಉಳಿಯಬೇಕಾದರೆ ಜನಪದದಿಂದ ಮಾತ್ರ ಸಾಧ್ಯ. ರಾಜ-ಮಹಾರಾಜರು ಸಾಹಿತ್ಯ ಸಂಸ್ಕೃತಿ ಮತ್ತು ಜನಪದವನ್ನು ಉಳಿಸಿ-ಬೆಳಸುವ ಕಾರ್ಯವನ್ನು ಈ ನಾಡಿನಲ್ಲಿ ಮಾಡಿದ್ದಾರೆ. ಸಂಸ್ಕೃತಿಯನ್ನು ಉಳಿಸಿ-ಬೆಳೆಸುವ ಜವಾಬ್ಬಾರಿ ಮುಂದಿನ ಯುವ ಜನಾಂಗದ ಮೇಲಿದೆ. ಇಪ್ಪತ್ತೊಂದನೆಯ ಶತಮಾನದಲ್ಲಿ ಹೇಗೆ ಭಾರತೀಯ ಅವಿಭಕ್ತ ಕುಟುಂಬಗಳು ಛಿದ್ರವಾಗುತ್ತಿವೆ ಎಂಬುದನ್ನು, ನಿದರ್ಶನಗಳ ಮೂಲಕ ವಿವರಿಸಿದರು. ಸಮಾಜದಲ್ಲಿ ಹೊಸ-ಹೊಸ ಆವಿಷ್ಕಾರಗಳು ಸಂಶೋಧನೆಗಳು ಹುಟ್ಟುವ ಸಂದರ್ಭದಲ್ಲಿ ಸಂಸ್ಕೃತಿಯನ್ನು ಮರೆಯದೇ, ಆಧುನಿಕ ಕಾಲದಲ್ಲಿಯು ಜನಪದ ಜಾತ್ರೆ, ಸಂಸ್ಕೃತಿಯ ಕರ‍್ಯಕ್ರಮ ಆಯೋಜನೆ ಮಾಡಿ ನಮ್ಮ ನಾಡಿನ ಸಂಸ್ಕೃತಿಯನ್ನು ಉಳಿಸಿ-ಬೆಳೆಸಲು ಕರೆನೀಡಿದರು. ಕೆ.ಎಲ್.ಇ. ಸಂಸ್ಥೆ ೧೦೦ ವರ್ಷಗಳ ಇತಿಹಾಸ ಹೊಂದಿದ ಸಂಸ್ಥೆ. ಕನ್ನಡ ಜನಪದ ವೈಭವದ ಉತ್ಸವವನ್ನು ನಿರಂತರವಾಗಿ ಆಯೋಜಿಸುವ ಮೂಲಕ ಜನಪದ ಸಾಹಿತ್ಯವನ್ನು ಯುವ ಜನಾಂಗಕ್ಕೆ ಪರಿಚಯಿಸುವ ಕಾರ್ಯ ಮಾಡಿದೆ. ಇದರಿಂದ ನಮ್ಮ ಯುವಕರು-ಯುವತಿಯರು ತಮ್ಮ ಗ್ರಾಮದ ಹಬ್ಬ-ಜಾತ್ರೆಗಳ ಮಹತ್ವವನ್ನು ಅರಿತುಕೊಂಡು ಆಚರಿಸಲು ಸುವರ್ಣ ಅವಕಾಶವನ್ನು ಸಂಸ್ಥೆ ಕಲ್ಪಿಸಿಕೊಟ್ಟಿದೆ. ನಾವು ಯಾರು ಕೂಡ ಅನಿವಾರ್ಯವಲ್ಲ, ಇದ್ದಷ್ಟು ದಿನ ಸಮಾಜಮುಖಿ ಕಾರ್ಯಗಳನ್ನು ಮಾಡಬೇಕು. ಪ್ರೀತಿಸಿದ ತಂದೆ-ತಾಯಿ ಗುರುಗಳನ್ನು ಹಾಗೂ ವಿದ್ಯಾಸಂಸ್ಥೆಯನ್ನು ಸ್ಮರಿಸಬೇಕು ಎಂದು ನುಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ. ವ್ಹಿ.ಎಸ್. ಮಾಳಿ, ವಿಶ್ರಾಂತ ಪ್ರಾಧ್ಯಾಪಕರು ವೃಷಭೇಂದ್ರ ಮಹಾವಿದ್ಯಾಲಯ ಹಾರೂಗೇರಿ ಅವರು ಮಾತನಾಡುತ್ತಾ, ಕರ್ನಾಟಕವು ಅಪಾರವಾದ ಜನಪದ ಸಂಪತ್ತನ್ನು ಹೊಂದಿದೆ. ಯುವಕರು ಜನಪದ ಸಂಸ್ಕೃತಿಯ ಸಂಪತ್ತಿ ವೈಭವವನ್ನು ಹೊರಸೂಸುವ ಕಾರ್ಯ ಮಾಡಬೇಕು. ವಿವಿಧತೆಯಲ್ಲಿ ಏಕತೆಯನ್ನು, ಏಕತೆಯಲ್ಲಿ ವಿವಿಧತೆಯನ್ನ ಕಾಣಬೇಕು. ಕನ್ನಡ ಸಾಹಿತ್ಯ ಪರಿಷತ ಸ್ಥಾಪನೆಯಾಗಲು ಆರ್ಥಿಕ ಸಹಾಯವನ್ನು ಮಾಡಿ ಈ ಭಾಗದಲ್ಲಿ ಕನ್ನಡವನ್ನು ಉಳಿಸಲು ರಾಜಾ ಲಖಮಗೌಡರ ಕೊಡುಗೆ ಅಪಾರವಾದುದು ಎಂದು ಈ ಸುಸಂದರ್ಭದಲ್ಲಿ ಸ್ಮರಿಸಿದರು.

ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ವಹಿಸಿದ್ದ ಮಹಾವಿದ್ಯಾಲಯದ ಸ್ಥಾನಿಕ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷರಾದ ಶ್ರೀ. ಲಿಂಗೌಡ ದೇಸಾಯಿ ಅವರು ಮಾತನಾಡುತ್ತಾ, ಮಹಾವಿದ್ಯಾಲಯ ಸಂಸ್ಕೃತಿ ಸೊಗಡನ್ನು ಪಸರಿಸುವ ಕಾರ್ಯಮಾಡುತ್ತಿರುವುದು ಪ್ರಶಂಸನೀಯ. ಮಹಾವಿದ್ಯಾಲಯವು ಜನಪದ ಸಂಸ್ಕೃತಿಯನ್ನು ಮುಮ್ಮಡಿಗೊಳಿಸುವ ಕಾರ್ಯ ಮಾಡುತ್ತಿದೆ ಎಂದರು.
ವೇದಿಕೆಯ ಮೇಲೆ ಕಾಲೇಜಿನ ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ. ವಿಜಯಕುಮಾರ ಪಾಟೀಲ ಉಪಸ್ಥಿತರಿದ್ದರು.

 


​ ಪ್ರಾರಂಭದಲ್ಲಿ ಪದವಿ ಪ್ರಾಚಾರ್ಯರಾದ ಡಾ.(ಶ್ರೀಮತಿ.) ಜೆ.ಎಸ್. ಕವಳೇಕರ ಸರ್ವರನ್ನು ಸ್ವಾಗತಿಸಿದರು. ಪದವಿ ಪೂರ್ವ ಪ್ರಾಚಾರ್ಯರಾದ ಶ್ರೀ ವ್ಹಿ. ಸಿ. ಕಾಮಗೋಳ ವಂದಿಸಿದರು. ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಎಸ್.ಎಮ್. ಬುಲಬುಲಿ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಕುಮಾರಿ. ಸ್ನೇಹಾ ಕುಂದರನಾಡ ಹಾಗೂ ಸಂಗಡಿಗರು ಸ್ವಾಗತಗೀತೆ ಹಾಡಿದರು. ಮಿಸ್. ವಿಸ್ಮಿತಾ ಹುಲ್ಲಿಕೇರಿ ಹಾಗೂ ಶ್ರೀಮತಿ. ಅಕ್ಷತಾ ಪಾಟೀಲ ಕಾರ್ಯಕ್ರಮ ನಿರೂಪಿಸಿದರು.


​​ಭಾವಚಿತ್ರದಲ್ಲಿ: ಸನ್ಮಾನ್ಯ ಶ್ರೀ. ಮಹಾಂತೇಶ ಎಮ್. ಕವಟಗಿಮಠ ಮಾಜಿ ಮುಖ್ಯ ಸಚೇತಕರು, ವಿಧಾನ ಪರಿಷತ್ತ ಕರ್ನಾಟಕ ಸರಕಾರ ಅವರು ಡೊಳ್ಳು ಬಾರಿಸುವ ಮೂಲಕ ಕನ್ನಡ ಜನಪದ ವೈಭವ ೨೦೨೬ನ್ನು ಉದ್ಘಾಟಿಸುತ್ತಿದ್ದಾರೆ. ಪದವಿ ಪ್ರಾಚಾರ್ಯರಾದ ಡಾ.(ಶ್ರೀಮತಿ.) ಜೆ.ಎಸ್. ಕವಳೇಕರ, ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ. ವಿಜಯಕುಮಾರ ಪಾಟೀಲ, ಡಾ. ವ್ಹಿ.ಎಸ್. ಮಾಳಿ ಮತ್ತು ಸ್ಥಾನಿಕ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷರಾದ ಶ್ರೀ. ಲಿಂಗೌಡ ದೇಸಾಯಿ ಅವರು ಉಪಸ್ಥಿತರಿದ್ದಾರೆ

Tags:

error: Content is protected !!