• ಆಸ್ಪತ್ರೆ, ಕಾಲೇಜುಗಳಿಗೆ ತೆರಳುವ ಸಾರ್ವಜನಿಕರ ಪರದಾಟ
• ವಿದ್ಯುತ್ ಇಲ್ಲದೆ ಕತ್ತಲಲ್ಲಿ ಮುಳುಗಿದ ಹಲವು ಬಡಾವಣೆಗಳು

ಚಿಕ್ಕೋಡಿ: ಚಿಕ್ಕೋಡಿ ಪಟ್ಟಣದ ಅಂಬೇಡ್ಕರ ನಗರದ ಬಳಿ ಜೋಡಕುರಳಿ-ಚಿಕ್ಕೋಡಿ ರಸ್ತೆ ಬಳಿ ನಿನ್ನೆ ರಾತ್ರಿ ಜೋರಾಗಿ ಬೀಸಿದ ಬಿರುಗಾಳಿಗೆ ದೊಡ್ಡದಾದ ಮರವೊಂದು ಧರೆಗುರಳಿರುವುದರಿಂದ ಜೋಡಕುರಳಿ-ಚಿಕ್ಕೋಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ಬಂದಾಗಿತ್ತು.
ಜೋಡಕುರಳಿ, ಇಂಜನಿಯರಿಂಗ್ ಕಾಲೇಜ, ವಿಶ್ವೇಶ್ವರಯ್ಯ ನಗರ, ಕುವೆಂಪು ನಗರ ಹಾಗೂ ತಾಯಿ-ಮಗು ಆಸ್ಪತ್ರೆಗೆ ತೆರಳುವ ಸಾರ್ವಜನಿಕರು ಪರದಾಡಿದರು.
ಸ್ಥಳಕ್ಕೆ ಹೆಸ್ಕಾಂ ಅಧಿಕಾರಿಗಳು ರಸ್ತೆ ಮೇಲಿನ ಮರ ತೆರುವಗೊಳಿಸಲು ಪರದಾಡಿದರು. ರಸ್ತೆ ಬಂದಾಗಿರುವುದರಿಂದ ಈ ಭಾಗಕ್ಕೆ ವಿದ್ಯುತ್ ಇಲ್ಲದೆ ಜನರು ಪರದಾಡಿದರು.
