hubbali

ಪೊಲೀಸ ಕಷ್ಟಡಿಯಿಂದ ತಪ್ಪಿಸಿಕೊಂಡಿದ್ದ ಮೆಂಡಾ ಮಲ್ಲಿಕ್ ಕೊಲೆಯ ಪ್ರಮುಖ ಆರೋಪಿ ಪಜ್ಯಾ ಲಾಕ್

Share

ಹುಬ್ಬಳ್ಳಿಯ ಮಂಟೂರ್ ರಸ್ತೆಯಲ್ಲಿ ಮೆಂಡಾ ಮಲ್ಲಿಕ್ ನನ್ನು ಕೊಲೆ ಮಾಡಿದ್ದ ಪ್ರಮುಖ ಆರೋಪಿಗಳ ಪೈಕಿ ಪ್ರಜ್ವಲ್ ನೆಟ್ಟೂರ್ ಎಂಬಾತ ಪೊಲೀಸ್ ವಿಚಾರಣೆ ವೇಳೆ ಪೊಲೀಸರಿಂದ ತಪ್ಪಿಸಿಕೊಂಡು ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಪತ್ತೇ ಮಾಡುವಲ್ಲಿ ಬೆಂಡಿಗೇರಿ ಠಾಣೆಯ ಇನ್ಸ್ಪೆಕ್ಟರ್ ಎಸ್ ಆರ್ ನಾಯಕ್ ಸಕ್ಸಸ್ ಆಗಿದ್ದಾರೆ.

2026 ರ ಡಿಸೆಂಬರ್ 13 ರಂದು ಮಂಟೂರ್ ರಸ್ತೆಯಲ್ಲಿ ಮೆಡಿಕಲ್ ಮುಂದೆ ನಿಂತಿದ್ದ ಮೆಂಡಾ ಮಲ್ಲಿಕ್ ಮೇಲೆ ದುಸ್ಕರ್ಮಿಗಳ ಗುಂಪು ಮಾರಾಕಾಸ್ತ್ರಗಳಿಂದ ದಾಳಿ ನಡೆಸಿದ ಪರಿಣಾಮ ಮಲ್ಲಿಕ್ ಕೊಲೆಯಾಗಿದ್ದ. ಈ ಪ್ರಕರಣದಲ್ಲಿ ಪ್ರಮುಖ ಆರೋಪಿ ಕೂಡ ಇದೆ ಪ್ರಜ್ವಲ್ ಆಗಿದ್ದ.

ಮಲ್ಲಿಕ್ ಕೊಲೆ ಪ್ರಕರಣದಲ್ಲಿ ಹತ್ತಕ್ಕೂ ಹೆಚ್ಚು ಜನ ಜೈಲು ಪಾಲಾದ್ರು ಕೂಡ ಜೈಲಿನಲ್ಲಿ ಪ್ರಜ್ವಲ್ ಮತ್ತು ಬಂಗಾರ್ ಬಾಲ್ಯಾ ಕಿರಿಕ್ ಮಾಡಿಕೊಂಡ ಹಿನ್ನೆಲೆಯಲ್ಲಿ ಪ್ರಜ್ವಲ್ ಹಾಗೂ ಬಂಗಾರ್ ಬಾಲ್ಯಾ ನನ್ನು ವಿಜಯಪುರ ಜೈಲಿಗೆ ಶಿಫ್ಟ್ ಮಾಡಲಾಗಿತ್ತು.ಹೀಗಾಗಿ ಕೊಲೆ ಪ್ರಕಾರಣದಲ್ಲಿ ಆರೋಪಿಗಳ ವಿಚಾರಣೆ ಮಾಡುವ ಸಲುವಾಗಿ ವಿಜಯಪುರ ಜೈಲಿಂದ ಇಬ್ಬರನ್ನು ತಂದು ವಿಚಾರಣೆ ನಡೆಸೋ ವೇಳೆ ಪ್ರಜ್ವಲ್ ಪೊಲೀಸರಿಂದ ತಪ್ಪಿಸಿಕೊಂಡು ಎಸ್ಕೇಪ್ ಆಗಿದ್ದ.

ಹೀಗಾಗಿ ಈತನನ್ನು ಬಂಧನ ಮಾಡುವ ಸಲುವಾಗಿ ವಿಶೇಷ ತಂಡ ರಚನೆ ಕೂಡ ಮಾಡಲಾಗಿತ್ತು,ಆದ್ರೆ ಆರೋಪಿ ಮೊಬೈಲ್ ಬಳಸದೆ ಇರೋದ್ರಿಂದ ಈತನನ್ನು ಪತ್ತೇ ಮಾಡೋದು ಪೊಲೀಸರಿಗೆ ತುಂಬಾ ಕಷ್ಟವಾಗಿತ್ತು. ಆದ್ರೂ ಕೂಡ ಹಗಲು ರಾತ್ರಿ ಎನ್ನದೇ ಬೆಂಡಿಗೇರಿ ಠಾಣೆಯ ಪೊಲೀಸರು ಮಂಟೂರು ಹೊರವಲಯದ ಬಳಿ ಆರೋಪಿ ಬಂದಿರೋ ಮಾಹಿತಿ ಗೊತ್ತಾಗಿ ಇನ್ಸ್ಪೆಕ್ಟರ್ ನಾಯಕ್ ನೇತೃತ್ವದ ಟೀಮ್ ಪ್ರಜ್ವಲ್ ನನ್ನು ಬಂಧನ ಮಾಡಿ ಕೋರ್ಟ್ ಮುಂದೆ ಹಾಜರು ಪಡಿಸಿದ್ದಾರೆ.

Tags:

error: Content is protected !!