Chikkodi

ಸದಲಗಾ ಭಾಗದ ರಸ್ತೆ ಅಭಿವೃದ್ಧಿಗೆ ಮುಹೂರ್ತ 1 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗೆ ಚಾಲನೆ

Share

• ಪ್ರಕಾಶ್ ಹುಕ್ಕೇರಿ ಅವರಿಂದ ಜನಪ್ರಿಯ ಯೋಜನೆಗಳಿಗೆ ಚಾಲನೆ
• ಸದಲಗಾ ಪಟ್ಟಣದ ಚರಂಡಿ, ರಸ್ತೆಗೆ 2.90 ಕೋಟಿ ಮಂಜೂರು

ಚಿಕ್ಕೋಡಿ :ಸದಲಗಾ ದತ್ತವಾಡ ರಸ್ತೆಯಿಂದ ಘೋಸರವಾಡ ಬ್ಯಾರೇಜವರೆಗೆ ರಸ್ತೆ ಅಭಿವೃದ್ದಿ ಕಾಮಗಾರಿಗೆ ಕರ್ನಾಟಕ ಸರ್ಕಾರದ ದೆಹಲಿಯ ವಿಶೇಷ ಪ್ರತಿನಿಧಿ ಎಂಎಲ್ಸಿ ಪ್ರಕಾಶ ಹುಕ್ಕೇರಿ ಚಾಲನೆ ನೀಡಿದರು.

ಬಳಿಕ ಮಾಧ್ಯಮಗಳ ಜೊತೆಗೆ ‌ಮಾತನಾಡಿದ ಅವರು ಸದಲಗಾ-ದತ್ತವಾಡ ರಸ್ತೆಯಿಂದ ಘೋಸರವಾಡ ಬ್ಯಾರೇಜವರೆಗೆ ರಸ್ತೆ ಅಭಿವೃದ್ಧಿ ಆಗಬೇಕೆಂದು ಇಲ್ಲಿನ ಜನರ ಬೇಡಿಕೆಯಾಗಿತ್ತು.ಅವರ ಬೇಡಿಕೆಯಂತೆ 1 ಕೋಟಿ ರೂಪಾಯಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಇವತ್ತು ಚಾಲನೆ ನೀಡಲಾಗಿದೆ ಎಂದರು.ಸದಲಗಾ ಪಟ್ಟಣದ ‌ಶಿವಾಜಿ ವೃತ್ತದಿಂದ ಬಸವೇಶ್ವರ ವೃತ್ತದವರಗೆ ರಸ್ತೆ,ಚರಂಡಿ ನಿರ್ಮಾಣ ಕಾಮಗಾರಿಗೆ 2 ಕೋಟಿ ‌90 ಲಕ್ಷ ರೂಪಾಯಿ ‌ಮಂಜೂರಾಗಿದೆ ಎಂದರು.

ಈ‌ ಸಂದರ್ಭದಲ್ಲಿ ಅರುಣ ದೇಸಾಯಿ, ಪಿರಗೌಡ ಪಾಟೀಲ, ಪ್ರಕಾಶ ಅನೂರೆ,ಉದಯ ಬದನೆಕಾಯಿ,ಚಾಂದಸಾಬ ಸನದಿ,ಸಂತೋಷ ನವಲೆ,ಇಲಾಯಿ ಸನದಿ,ಸುರೇಶ ಕುಂಬಾರ,ಅತ್ತಾವುಲಾ ಮುಜಾವರ,ಅಭಯ ಪಾಟೀಲ,ಚಂದು ಪಾಟೀಲ,ಮಹಾಂತೇಶ ದೇಸಾಯಿ, ಭೀಮಾ ಮಾಳಗೆ,ಕಿರಣ ನವಲೆ,ವಿನಾಯಕ ಮಾಳಗೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:

error: Content is protected !!