Chikkodi

ಚಾಲಕನ ನಿಯಂತ್ರಣ ತಪ್ಪಿ,ಚರಂಡಿಗೆ ಬಿದ್ದ ಬೈಕ್ ಮೂವರಿಗೆ ಗಾಯ

Share

• ಬೈಕ್ ನಿಯಂತ್ರಣ ತಪ್ಪಿ ಚರಂಡಿಗೆ ಪಲ್ಟಿ
• ಕೆಲಸಕ್ಕೆ ತೆರಳುವಾಗ ಸಂಭವಿಸಿದ ರಸ್ತೆ ಅಪಘಾತ
• ಹತ್ತು ಅಡಿ ಆಳಕ್ಕೆ ಬಿದ್ದ ಬೈಕ್: ಸವಾರರು ಸೇಫ್
• ನಿಪ್ಪಾಣಿ ಪೊಲೀಸರಿಂದ ಗಾಯಾಳುಗಳ ತಕ್ಷಣದ ರಕ್ಷಣೆ

ಚಾಲಕನ ನಿಯಂತ್ರಣ ತಪ್ಪಿ ಬೈಕ್ ಚರಂಡಿಗೆ ಬಿದ್ದು ಮೂವರಿಗೆ ಸಣ್ಣಪುಟ್ಟ ಗಾಯಗಳಾದ ಘಟನೆ ನಿಪ್ಪಾಣಿ ನಗರದ ಓಲ್ಡ್ ಪಿಬಿ ರಸ್ತೆಯಲ್ಲಿ ನಡೆದಿದೆ.

ಬೈಕನಲ್ಲಿ ಮೂವರು ಕೆಲಸಕ್ಕೆ ಹೋಗುತ್ತಿದ್ದಾಗ ಬೈಕ್ ನಿಯಂತ್ರಣ ತಪ್ಪಿ ಹತ್ತು ಅಡಿಯ ಚರಂಡಿಗೆ ಬಿದ್ದಿದೆ.ಬೈಕ್ ಚಾಲಕ ಹಾಗೂ ಹಿಂಭಾಗದಲ್ಲಿ ಕುಳಿತಿದ್ದ 2 ಹುಡುಗಿಯರಿಗೆ ಸಣ್ಣಪುಟ್ಟ ಗಾಯಗಳಾಗಿವೆ.ಘಟನಾ ಸ್ಥಳಕ್ಕೆ ತಕ್ಷಣವೇ ಪೊಲೀಸರು ಆಗಮಿಸಿ ಗಾಯಾಳುಗಳನ್ನು ಹೊರತೆಗೆದು ಚಿಕಿತ್ಸೆಗೆಗಾಗಿ ಆಸ್ಪತ್ರೆಗೆ ರವಾನಿಸಿದರು.ಅದೃಷ್ಟವಶಾತ ಘಟನೆಯಲ್ಲಿ ಯಾರಿಗೂ ಗಂಭೀರ ಗಾಯಗಳಾಗಿಲ್ಲ.ನಿಪ್ಪಾಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Tags:

error: Content is protected !!