Hukkeri

ಆಹಾರ ಹುಡುಕುತ್ತಾ ಆಹಾರ ಸಚಿವರ ಗ್ರಾಮಕ್ಕೆ ಬಂದ ಕಾಡು ಕೋಣಗಳು

Share

ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೆವಾಡಿ ಗ್ರಾಮದ ತೋಟದಲ್ಲಿ ಎರಡು ಕಾಡು ಕೋಣಗಳು ಪ್ರತ್ಯಕ್ಷ ವಾಗಿವೆ. ಅರಣ್ಯದಲ್ಲಿ ಇರಬೇಕಾದ ಕಾಡು ಕೋಣಗಳು ಆಹಾರ ಹುಡುಕುತ್ತ ಬೆಲ್ಲದ ಬಾಗೇವಾಡಿ ಗ್ರಾಮಕ್ಕೆ ಬಂದಿವೆ.

ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದ ನೆರ್ಲಿಯವರ ತೋಟದಲ್ಲಿ ಕಾಣಿಸಿಕೊಂಡ ಕೋಣಗಳು ಗ್ರಾಮಸ್ಥರು ಸೆರೆ ಹಿಡಿಯಲು ಯತ್ನಿಸಿದಾಗ ರಮೇಶ ಮಾಳಗೆ ಎಂಬ ಯುವಕನ ಮೇಲೆ ಎಗರಿ ಹೊಟ್ಟೆಗೆ ತಿವಿದಿದೆ. ಗಾಯಗೊಂಡ ಯುವಕನನ್ನು ಹುಕ್ಕೇರಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಸ್ಥಳಕ್ಕೆ ತಹಶೀಲ್ದಾರ್ ಡಾ.ಡಿ ಎಚ್ ಹೂಗಾರ, ಪಶು ಆಸ್ಪತ್ರೆ ವ್ಯೆದ್ಯಾಧಿಕಾರಿ ತಾತ್ಯಾಸಾಬ ದೇಸಾಯಿ , ಎಸ್ ವಿ ನಾಯಿಕ, ಅರಣ್ಯ ಅಧಿಕಾರಿ ಸಜ್ಜನ, ಬೆಲ್ಲದ ಮೊದಲಾದವರು ಭೇಟಿ ನೀಡಿ ಕೋಣವನ್ನು ಸೇರೆ ಹಿಡಿಯಲು ಹರ ಸಾಹಸ ಪಡುತ್ತಿದ್ದಾರೆ. ಅರಣ್ಯ ಅಧಿಕಾರಿಗಳು ಕೋಣ ಹಿಡಿಯುವ ನುರಿತ ತಜ್ಞರು ಮೋರೆ ಹೋಗಿದ್ದಾರೆ. ಓಡುವ ರಭಸದಲ್ಲಿ ಒಂದು ಕೋಣ ಕೆನಾಲ್ ನೀರಿಗೆ ಬಿದ್ದದ್ದರಿಂದ ನೀರಿನ ರಭಸಕ್ಕೆ ತೆಲಿ ಹೋಗುವ ದೃಶ್ಯ ಇನ್ ನ್ಯೂಜ ಕ್ಯಾಮರಾ ಕಣ್ಣಿಗೆ ಸೇರೆಯಾಗಿದೆ.

ಒಟ್ಟರೆಯಾಗಿ ಆಹಾರ ಮತ್ತು ಅರಣ್ಯ ಸಚಿವ ಉಮೇಶ ಕತ್ತಿ ಯವರ ಗ್ರಾಮಕ್ಕೆ ಆಹಾರ ಹುಡುಕುತ್ತಾ ಅರಣ್ಯ ಪ್ರಾಣಿಗಳು ಸಚಿವರ ಗ್ರಾಮಕ್ಕೆ ಬಂದಿರುವದು ಕಾಕತಾಳೀಯವಾಗಿದೆ.

Tags:

error: Content is protected !!