gokak

ಕಾರಿನಲ್ಲಿ ಬಂದು ಆಡು ಕಳ್ಳತನ ಮಾಡುತ್ತಿದ್ದ ಕುಖ್ಯಾತ ಕಳ್ಳರ ಸೆರೆ: 7 ಆಡುಗಳು ವಶ!

Share

ಮೂರು ಪ್ರತ್ಯೇಕ ಆಡು ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, 1.50 ಲಕ್ಷಕ್ಕೂ ಅಧಿಕ ಮೌಲ್ಯದ 7 ಆಡು ಹಾಗೂ ಹೊಂತಗಳನ್ನು ಜಪ್ತಿ ಮಾಡಿದ್ದಾರೆ.
ಯಮಕನಮರಡಿ ಠಾಣಾ ವ್ಯಾಪ್ತಿಯ ಹೊಸೂರ, ಹುಕ್ಕೇರಿ ಠಾಣಾ ವ್ಯಾಪ್ತಿಯ ಅರ್ಜುನವಾಡ ಹಾಗೂ ಅಂಕಲಗಿ ಠಾಣಾ ವ್ಯಾಪ್ತಿಯ ಕುಂದರಗಿ ಗ್ರಾಮಗಳಲ್ಲಿ ಆಡು ಕಳ್ಳತನ ಪ್ರಕರಣಗಳು ನಡೆದಿದ್ದವು.
ಬಂಧಿತರನ್ನು ಗೋಕಾಕ ತಾಲ್ಲೂಕಿನ ಅಂಕಲಗಿ ಗ್ರಾಮದ ಲಕ್ಷಣ ಕಣಬರಗಿ (30) ಹಾಗೂ ಹುಕ್ಕೇರಿ ತಾಲ್ಲೂಕಿನ ಬನ್ನಿಬಾಗಿ ಗ್ರಾಮದ ಸಿದ್ದಪ್ಪ ನಾಯಿಕ (27) ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಕಳ್ಳತನಕ್ಕೆ ಬಳಸುತ್ತಿದ್ದ ಮಾರುತಿ ಸುಜುಕಿ 800 ಕಾರು ಹಾಗೂ ಹಗಲು ವೇಳೆ ಸ್ಥಳ ಪರಿಶೀಲನೆಗೆ ಬಳಸುತ್ತಿದ್ದ ಬೈಕ್‌ನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ವಾಹನ ತಪಾಸಣೆ ವೇಳೆ ಅನುಮಾನಾಸ್ಪದವಾಗಿ ಬಂದ ಕಾರನ್ನು ತಡೆದು ಪರಿಶೀಲಿಸಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಬಳಿಕ ವಿಚಾರಣೆ ನಡೆಸಿದಾಗ ಮೂರು ಠಾಣಾ ವ್ಯಾಪ್ತಿಯ ಆಡು ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಯಮಕನಮರಡಿ ಸಿಪಿಐ ಜಾವೀದ ಮುಶಾಪುರಿ ನೇತೃತ್ವದ ಪಿಎಸ್‌ಐ ಬಿ.ಕೆ. ಪಾಟೀಲ ತಂಡ ಕಾರ್ಯಾಚರಣೆ ನಡೆಸಿದೆ. ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:

error: Content is protected !!