Dharwad

ಇಂದು ವಿನಯ ಕುಲಕರ್ಣಿಗೆ ಬಿಗ್ ಡೇ… ಕುಲಕರ್ಣಿಗೆ ಜಾಮೀನು ಜೊತೆಗೆ ಶಿಕ್ಷೆಗೆ ತಡೆ ನೀಡಿರುವ ಹೈಕೋರ್ಟ್, ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಗೆ ಹೋಗಿರುವ ಯೋಗೇಶಗೌಡ ಫ್ಯಾಮಿಲಿ‌.

Share

ಯೋಗೇಶಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಹಾಗೂ ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕರಾಗಿರುವ ವಿನಯ ಕುಲಕರ್ಣಿಯವರಿಗೆ ಇಂದು ಬಿಗ್ ಡೇಯಾಗಿದ್ದು, ಸುಪ್ರೀಂನಲ್ಲಿ ಇಂದು ತೀರ್ಪು ಪ್ರಕಟವಾಗಲಿದೆ.

ವೈಸ್ ಓವರ್ (VO)- ಯೋಗೇಶಗೌಡ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ಹಾಗೂ ಹಾಲಿ ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿಯವರಿಗೆ ಜನಪ್ರತಿನಿಧಿಗಳ ನ್ಯಾಯಾಲಯವು ಜೀವಾವಧಿ ಶಿಕ್ಷೆ ನೀಡಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯಲ್ಲಿ ಹೈಕೋರ್ಟ್ ‌ವಿನಯ ಕುಲಕರ್ಣಿಗೆ ಬಿಗ್ ರಿಲೀಫ್ ನೀಡಿತ್ತು. ಆದರೆ ಹೈಕೋರ್ಟ್ ಆದೇಶ ಪ್ರಶ್ನಿಸಿ ಯೋಗೇಶಗೌಡ ಫ್ಯಾಮಿಲಿ ಹಾಗೂ ಸಿಬಿಐ ಸುಪ್ರೀಂ ಮೊರೆ ಹೋಗಿದ್ದರು. ಒಂದು ತಿಂಗಳ ಸುದೀರ್ಘ ವಿಚಾರಣೆ ನಡೆಸಿರುವ ಸುಪ್ರೀಂ ದ್ವಿಸದಸ್ಯ ಪೀಠ ಅಂತಿಮವಾಗಿ ಇಂದು ತೀರ್ಪು ನೀಡಲಿದೆ‌. ನ್ಯಾ. ಪ್ರಶಾಂತ್ ಮಿಶ್ರಾ ಹಾಗೂ ನ್ಯಾ. ಚಂದ್ರಶೇಖರ್ ನೇತೃತ್ವದ ದ್ವಿಸದಸ್ಯ ಪೀಠ ತೀರ್ಪು ಪ್ರಕಟಿಸಲಿದ್ದು, ಎಲ್ಲರ ಚಿತ್ತ ಈಗ ಸುಪ್ರೀಂ ಆದೇಶದ ಕಡೆ ನೆಟ್ಟಿದೆ.

Tags:

error: Content is protected !!