Belagavi

ಬೆಳಗಾವಿಯಲ್ಲಿ ‘ಹೈಟೆಕ್ ನಿಸ್ಸಾನ್’ ಶೋರೂಮ್ ಲೋಕಾರ್ಪಣೆ: ಉತ್ತರ ಕರ್ನಾಟಕದ ಕಾರು ಪ್ರಿಯರಿಗೆ ಭರ್ಜರಿ ಕೊಡುಗೆ!

Share

ಭಾರತದ ವಾಹನ ಮಾರುಕಟ್ಟೆಯಲ್ಲಿ ತನ್ನ ಪುನರುತ್ಥಾನ ಹಾಗೂ ವಿಸ್ತರಣೆಯ ಭಾಗವಾಗಿ ನಿಸ್ಸಾನ್ ಮೋಟಾರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕರ್ನಾಟಕದಲ್ಲಿ ತನ್ನ ಮಾರಾಟ ಮತ್ತು ಸೇವಾ ಜಾಲವನ್ನು ಮತ್ತಷ್ಟು ಬಲಪಡಿಸಿದೆ. ಇದರ ಅಂಗವಾಗಿ ಬೆಳಗಾವಿಯಲ್ಲಿ ಹೈಟೆಕ್ ಗ್ರೂಪ್‌ನ ನೂತನ ‘ಹೈಟೆಕ್ ನಿಸ್ಸಾನ್’ 3S (Sales, Service & Spare Parts) ಸಮಗ್ರ ಸೌಲಭ್ಯವನ್ನು ಉದ್ಘಾಟಿಸಲಾಯಿತು.

ಈ ನೂತನ ಕೇಂದ್ರವು ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ ಗ್ರಾಹಕರಿಗೆ ಅತ್ಯಾಧುನಿಕ ಮಾರಾಟ ಮತ್ತು ವಾಹನ ಸೇವೆಗಳನ್ನು ಒದಗಿಸುವ ಉದ್ದೇಶ ಹೊಂದಿದೆ. ಕೊಲ್ಲಾಪುರದ ಪರಮಪೂಜ್ಯ ಸ್ವಸ್ತಿಶ್ರೀ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮೀಜಿ ಹಾಗೂ ಬೆಳಗಾವಿಯ ನಾಗನೂರು ರುದ್ರಾಕ್ಷಿಮಠದ ಪೂಜ್ಯಶ್ರೀ ಡಾ. ಅಲ್ಲಮಪ್ರಭು ಮಹಾಸ್ವಾಮೀಜಿಯವರ ದಿವ್ಯ ಹಸ್ತದಿಂದ ನೂತನ ಶೋರೂಮ್ ಉದ್ಘಾಟನೆ ನೆರವೇರಿತು.

ಸುಮಾರು 3,500 ಚದರ ಅಡಿ ವಿಸ್ತೀರ್ಣದ ಆಧುನಿಕ ಶೋರೂಮ್‌ನಲ್ಲಿ ಏಕಕಾಲಕ್ಕೆ ಐದು ಕಾರುಗಳನ್ನು ಪ್ರದರ್ಶಿಸುವ ವ್ಯವಸ್ಥೆ ಇದೆ. 7,000 ಚದರ ಅಡಿ ವಿಸ್ತೀರ್ಣದ ಅತ್ಯಾಧುನಿಕ ಸರ್ವಿಸ್ ವರ್ಕ್‌ಶಾಪ್‌ನಲ್ಲಿ 11 ಸರ್ವಿಸ್ ಬೇಗಳು ಹಾಗೂ 10,000 ಚದರ ಅಡಿ ವಿಸ್ತೀರ್ಣದ ಬಾಡಿಶಾಪ್ ಸೌಲಭ್ಯವನ್ನು ಕಲ್ಪಿಸಲಾಗಿದೆ. ಗ್ರಾಹಕರಿಗೆ ಮಾರಾಟ, ವಾಹನ ನಿರ್ವಹಣೆ, ದುರಸ್ತಿ ಹಾಗೂ ಬಿಡಿಭಾಗಗಳ ಸೇವೆಗಳನ್ನು ಒಂದೇ ಸೂರಿನಡಿ ಒದಗಿಸುವಂತೆ ಕೇಂದ್ರವನ್ನು ವಿನ್ಯಾಸಗೊಳಿಸಲಾಗಿದೆ.

ನಿಸ್ಸಾನ್‌ನ ಜಾಗತಿಕ ರಿಟೇಲ್ ಮಾನದಂಡಗಳಿಗೆ ಅನುಗುಣವಾಗಿ ರೂಪುಗೊಂಡಿರುವ ಈ ಕೇಂದ್ರದಲ್ಲಿ ಆಧುನಿಕ ತಂತ್ರಜ್ಞಾನ, ಡಯಾಗ್ನೋಸ್ಟಿಕ್ ಸೌಲಭ್ಯಗಳು ಹಾಗೂ ತರಬೇತಿ ಪಡೆದ ತಂತ್ರಜ್ಞರು ಕಾರ್ಯನಿರ್ವಹಿಸಲಿದ್ದಾರೆ. ರಾಜೇಂದ್ರ ಎನ್. ದೇಸಾಯಿ ಅವರ ಸಮರ್ಥ ನಾಯಕತ್ವದಲ್ಲಿ ಗ್ರಾಹಕರಿಗೆ ಉತ್ತಮ ಖರೀದಿ ಮತ್ತು ಮಾಲೀಕತ್ವದ ಅನುಭವ ಒದಗಿಸುವ ಗುರಿಯನ್ನು ಸಂಸ್ಥೆ ಹೊಂದಿದೆ.

ಈ ಸಂದರ್ಭದಲ್ಲಿ ಮಾತನಾಡಿದ ನಿಸ್ಸಾನ್ ಮೋಟಾರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರು, “ಬೆಳಗಾವಿಯಲ್ಲಿ ಅತ್ಯಾಧುನಿಕ ಸೌಲಭ್ಯವನ್ನು ಆರಂಭಿಸಿರುವುದು ನಮಗೆ ಸಂತಸ ತಂದಿದೆ. ಕರ್ನಾಟಕದಲ್ಲಿ ನಮ್ಮ ಅಸ್ತಿತ್ವವನ್ನು ಮತ್ತಷ್ಟು ಬಲಪಡಿಸುವುದರ ಜೊತೆಗೆ ಗ್ರಾಹಕರಿಗೆ ಸುಲಭವಾಗಿ ನಿಸ್ಸಾನ್ ವಾಹನಗಳ ಮಾರಾಟ ಮತ್ತು ಸೇವೆಗಳನ್ನು ತಲುಪಿಸುವುದು ನಮ್ಮ ಉದ್ದೇಶವಾಗಿದೆ. ಗ್ರಾಹಕರೊಂದಿಗೆ ದೀರ್ಘಕಾಲದ ವಿಶ್ವಾಸದ ಸಂಬಂಧ ಬೆಳೆಸಲು ಹಾಗೂ ಉತ್ತಮ ಮಾಲೀಕತ್ವದ ಅನುಭವ ನೀಡಲು ನಾವು ಬದ್ಧರಾಗಿದ್ದೇವೆ” ಎಂದರು.

ಹೈಟೆಕ್ ಗ್ರೂಪ್‌ನ ನಿರ್ದೇಶಕ ವಿನಯಕುಮಾರ್ ಬಿ. ಬಾಳಿಕಾಯಿ ಮಾತನಾಡಿ, “ಬಲವಾದ ಆರ್ಥಿಕ ಶಿಸ್ತು ಮತ್ತು ಗ್ರಾಹಕರ ವಿಶ್ವಾಸ ನಮ್ಮ ಸಂಸ್ಥೆಯ ಬೆಳವಣಿಗೆಯ ಪ್ರಮುಖ ಆಧಾರಸ್ತಂಭಗಳಾಗಿವೆ. ಹೈಟೆಕ್ ನಿಸ್ಸಾನ್ ಮೂಲಕ ಪ್ರತಿಯೊಬ್ಬ ಗ್ರಾಹಕರೂ ತಮ್ಮ ಕನಸಿನ ನಿಸ್ಸಾನ್ ಕಾರನ್ನು ಸುಲಭವಾಗಿ ಖರೀದಿಸುವಂತಾಗಲು ಆಕರ್ಷಕ ಹಣಕಾಸು ಸೌಲಭ್ಯಗಳು, ಎಕ್ಸ್‌ಚೇಂಜ್ ಯೋಜನೆಗಳು ಹಾಗೂ ಸುಲಭ ಮಾಲೀಕತ್ವದ ಆಯ್ಕೆಗಳನ್ನು ಒದಗಿಸಿದ್ದೇವೆ” ಎಂದು ತಿಳಿಸಿದರು.

ನಿರ್ದೇಶಕ ರಾಜೇಶ್ ಎಂ. ಭೋಸಗಿ ಮಾತನಾಡಿ, “ಕಾರ್ಯಾಚರಣೆಯ ಶ್ರೇಷ್ಠತೆ ಮತ್ತು ತ್ವರಿತ ಸೇವೆಗೆ ನಾವು ಹೆಚ್ಚಿನ ಆದ್ಯತೆ ನೀಡುತ್ತೇವೆ. ಹೈಟೆಕ್ ಗ್ರೂಪ್‌ನ ಇತರ ಡೀಲರ್‌ಶಿಪ್‌ಗಳಲ್ಲಿಯೂ ಉತ್ತಮ ಸೇವೆ ನೀಡುವ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಗಳಿಸಿದ್ದೇವೆ. ಹೊಸ ಕೇಂದ್ರದಲ್ಲಿ ಆಧುನಿಕ ಡಯಾಗ್ನೋಸ್ಟಿಕ್ ವ್ಯವಸ್ಥೆ ಹಾಗೂ ತರಬೇತಿ ಪಡೆದ ತಂತ್ರಜ್ಞರ ಮೂಲಕ ಗ್ರಾಹಕರಿಗೆ ತೊಂದರೆರಹಿತ ಸೇವೆ ಒದಗಿಸಲಾಗುವುದು” ಎಂದರು.

ನಿರ್ದೇಶಕ ಬಸವರಾಜ್ ಎಂ. ತಂಗಡಿ ಮಾತನಾಡಿ, “ಉತ್ತರ ಕರ್ನಾಟಕದ ಜನರೊಂದಿಗೆ ಹೈಟೆಕ್ ಗ್ರೂಪ್ ಹಲವು ವರ್ಷಗಳಿಂದ ಉತ್ತಮ ಬಾಂಧವ್ಯ ಹೊಂದಿದೆ. ನಿಸ್ಸಾನ್ ಸಹಯೋಗದೊಂದಿಗೆ ಪಾರದರ್ಶಕ ಮಾರಾಟ, ವಿಶ್ವಾಸಾರ್ಹ ಮಾರಾಟೋತ್ತರ ಸೇವೆ ಮತ್ತು ಉತ್ತಮ ಗುಣಮಟ್ಟದ ವಾಹನಗಳನ್ನು ಗ್ರಾಹಕರಿಗೆ ಪರಿಚಯಿಸಲು ಹೆಮ್ಮೆಪಡುತ್ತೇವೆ” ಎಂದು ಹೇಳಿದರು.

ಈ ಹೊಸ ಸೇರ್ಪಡೆಯೊಂದಿಗೆ ಕರ್ನಾಟಕದಲ್ಲಿ ನಿಸ್ಸಾನ್‌ನ ಮಾರಾಟ ಕೇಂದ್ರಗಳ ಸಂಖ್ಯೆ 9ಕ್ಕೆ ಹಾಗೂ ಸೇವಾ ಕೇಂದ್ರಗಳ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ದೇಶಾದ್ಯಂತ ಮಾರಾಟ ಮತ್ತು ಸೇವೆ ಸೇರಿದಂತೆ ಒಟ್ಟು 321 ಟಚ್‌ಪಾಯಿಂಟ್‌ಗಳ ಮೂಲಕ ನಿಸ್ಸಾನ್ ತನ್ನ ಗ್ರಾಹಕರಿಗೆ ಸೇವೆ ಒದಗಿಸುತ್ತಿದೆ.

ಭಾರತೀಯ ಮಾರುಕಟ್ಟೆಯಲ್ಲಿ ನಿಸ್ಸಾನ್ ತನ್ನ ಬೆಳವಣಿಗೆಯ ವೇಗವನ್ನು ಮುಂದುವರಿಸಿದ್ದು, ಮ್ಯಾಗ್ನೈಟ್ (Magnite) ಮಾದರಿಯ ಯಶಸ್ಸಿನೊಂದಿಗೆ ನಿಸ್ಸಾನ್ ಟೆಕ್ಟಾನ್ (TEKTON) ಮತ್ತು ನಿಸ್ಸಾನ್ ಗ್ರಾವೈಟ್ (GRAVITE) ಮಾದರಿಗಳ ಮೂಲಕ ವಿವಿಧ ವಾಹನ ವಿಭಾಗಗಳಲ್ಲಿ ತನ್ನ ಅಸ್ತಿತ್ವವನ್ನು ಮತ್ತಷ್ಟು ಬಲಪಡಿಸುವತ್ತ ಗಮನಹರಿಸಿದೆ.

Tags:

error: Content is protected !!