Dharwad

ಕೈಕೊಟ್ಟ ಮಳೆರಾಯ: ಜೋಳದ ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್ ನೀರಿನ ಮೊರೆಹೋದ ನವಲಗುಂದದ ರೈತ

Share

ಉತ್ತರ ಕರ್ನಾಟಕದ ಧಾರವಾಡ ಸೇರಿ ಬಹುತೇಕ ಜಿಲ್ಲೆಗಳಲ್ಲಿ ಈ ಬಾರಿ ಮುಂಗಾರು ಜೊತೆಗೆ ಹಿಂಗಾರು ಮಳೆಯೂ ಕೈಕೊಟ್ಟಿದ್ದು, ಅನ್ನದಾತರು ಪರದಾಡುವ ಸ್ಥಿತಿ ಬಂದೊದಗಿದೆ. ನವಲಗುಂದ ತಾಲ್ಲೂಕಿನ ಇಬ್ರಾಹಿಂಪುರ ರೈತ ತಾನು ಕಷ್ಟಪಟ್ಟು ಬಿತ್ತನೆ ಮಾಡಿದ ಬೆಳೆ ಉಳಿಸಿಕೊಳ್ಳಲು ಈಗ ಟ್ಯಾಂಕರ್ ನೀರಿನ ಮೊರೆ ಹೋಗಿದ್ದಾರೆ.

ಹೌದು, ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕಿನ ಇಬ್ರಾಹಿಂಪುರ ಗ್ರಾಮದ ಅಪ್ಪಣ್ಣ ಭಾಗಪ್ಪ ಹಳ್ಳದ್ ಎಂಬ ರೈತ ತಾನು ಕಷ್ಟಪಟ್ಟು ಬಿತ್ತನೆ ಮಾಡಿದ ಜೋಳದ ಬೆಳೆ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಜಮೀನಿನಲ್ಲಿ ಬೃಹತ್ ಗುಂಡಿ ತೋಡಿ ಅದಕ್ಕೆ ಟ್ಯಾಂಕರ್ ಮೂಲಕ ನೀರು ತುಂಬಿಸಿ, ನಂತರ ನೀರು ಪಂಪ್ ಮಾಡುವ ಮಷಿನ್ ಸಹಾಯದ ಮೂಲಕ ಬೆಳೆಗೆ ನೀರು ಉಣಿಸುತ್ತಿದ್ದಾರೆ. ನಿತ್ಯವೂ 20 ರಿಂದ 30 ಟ್ಯಾಂಕರ್ ನೀರು ತರಿಸಿಕೊಂಡು ಬೆಳೆ ಉಳಿಸಿಕೊಳ್ಳಲು ಈಗ ರೈತ ಅಪ್ಪಣ್ಣ ಹರಸಾಹಸ ಪಡುತ್ತಿದ್ದಾರೆ. ಒಂದು ಕಡೆ ಮಳೆ ಇಲ್ಲ, ಇನ್ನೊಂದು ಕಡೆ ಕಷ್ಟಪಟ್ಟು ಬಿತ್ತಿದ್ದ ಬೆಳೆ ಮಳೆಯಿಲ್ಲದೆ ಒಣಗುತ್ತಿದೆ. ಕೂಡಲೇ ಸರ್ಕಾರ ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ರೈತನ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಬೇಕು ಎನ್ನುವುದು ಅನ್ನದಾತನ ಆಗ್ರಹವಾಗಿದೆ.

Tags:

error: Content is protected !!