Belagavi

ಬೆಳಗಾವಿ ಕೋಟೆ ಕೆರೆ ಬಳಿ ಬಸ್ ಚಕ್ರ ಹರಿದು ವೃದ್ಧರಿಗೆ ಗಂಭೀರ ಗಾಯ: ಸಮಯಪ್ರಜ್ಞೆ ಮೆರೆದು ಆಸ್ಪತ್ರೆಗೆ ಸೇರಿಸಿದ ಸಮಾಜಸೇವಕ ಅವಧೂತ ತುಡವೇಕರ್

Share

ಬೆಳಗಾವಿಯ ಕೋಟೆ ಕೆರೆ ಬಳಿ ಬಸ್ ಡಿಕ್ಕಿ ಹೊಡೆದು ವೃದ್ಧರೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಬಸ್ ಚಕ್ರ ಕಾಲಿನ ಮೇಲೆ ಹರಿದು ನರಳುತ್ತಿದ್ದ ವೃದ್ಧರ ನೆರವಿಗೆ ಸಮಾಜಸೇವಕ ಅವಧೂತ ತುಡವೇಕರ್ ತಕ್ಷಣವೇ ಧಾವಿಸಿ, ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ದಾಖಲಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಬೆಳಗಾವಿ: ನಗರದ ಕೋಟೆ ಕೆರೆ ಬಳಿ ಸಂಜೆ ಸುಮಾರು 4 ಗಂಟೆ 10 ನಿಮಿಷದ ವೇಳೆಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ವೃದ್ಧರೊಬ್ಬರ ಕಾಲಿನ ಮೇಲೆ ಬಸ್ ಚಕ್ರ ಹರಿದು ಗಂಭೀರ ಗಾಯಗೊಂಡ ಘಟನೆ ಸಂಭವಿಸಿದೆ. ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಸಮಾಜಸೇವಕ ರೆಸ್ಕ್ಯೂ ಟೀಮ್ ಮುಖ್ಯಸ್ಥ ಅವಧೂತ ತುಡವೇಕರ್ ಮತ್ತು ತಂಡ, ಗಾಯಾಳು ವೃದ್ಧರಿಗೆ ತಕ್ಷಣ ಪ್ರಥಮ ಚಿಕಿತ್ಸೆ ನೀಡಿ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡುವ ಮೂಲಕ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಸಮಾಜಸೇವಕರ ಈ ಸಮಯಪ್ರಜ್ಞೆ ಮತ್ತು ತುರ್ತು ಸೇವೆಗೆ ಸ್ಥಳೀಯ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಯಾವುದೇ ರೀತಿಯ ತುರ್ತು ಸೇವೆಗಾಗಿ 8951047677 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸುವಂತೆ ರೆಸ್ಕ್ಯೂ ಟೀಮ್ ವತಿಯಿಂದ ಮನವಿ ಮಾಡಲಾಗಿದೆ.

Tags:

error: Content is protected !!